6
  • Latest
A curse on a friend who doesn't cook!

ಭೂ ವ್ಯಾಜ್ಯ: ತೆಂಗಿನಮರದ ಹಕ್ಕಿಗಾಗಿ ರಕ್ತ ಬರುವ ರೀತಿ ಹೊಡೆದಾಟ!

ಬಿಡುಗಡೆ ಮುನ್ನವೇ ಸದ್ದು ಮಾಡಿದ ಓ ಮೈ ಡಾಗ್

ಬಿಡುಗಡೆ ಮುನ್ನವೇ ಸದ್ದು ಮಾಡಿದ ಓ ಮೈ ಡಾಗ್

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ADVERTISEMENT
  • Home
Wednesday, August 19, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಭೂ ವ್ಯಾಜ್ಯ: ತೆಂಗಿನಮರದ ಹಕ್ಕಿಗಾಗಿ ರಕ್ತ ಬರುವ ರೀತಿ ಹೊಡೆದಾಟ!

AchyutKumar by AchyutKumar
in ಸ್ಥಳೀಯ
A curse on a friend who doesn't cook!

ತೆಂಗಿನ ಮರದ ಹಕ್ಕಿನ ವಿಷಯವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು, ಈ ಹೊಡೆದಾಟದಲ್ಲಿ ರಕ್ತದ ಮಡುವಿನಲ್ಲಿ ಬಿದ್ದ ಕುಟುಂಬದ ಮುಖ್ಯಸ್ಥರು ಆಸ್ಪತ್ರೆಗೆ ದಾಖಲಾಗುವಷ್ಟರ ಮಟ್ಟಿಗೆ ಗಾಯಗೊಂಡಿದ್ದಾರೆ. ಗಂಡನಿಗೆ ಆದ ಅನ್ಯಾಯದ ವಿರುದ್ಧ ಹೋರಾಟಕ್ಕಾಗಿ ಮನೆ ಮಹಿಳೆಯರು ಪೊಲೀಸ್ ಠಾಣೆ ಮಟ್ಟಿಲೇರಿದ್ದಾರೆ!

ಕುಮಟಾ ತಾಲೂಕಿನ ಸೊಪ್ಪಿನಹೊಸಳ್ಳಿ ಬಳಿಯ ಮೊರ್ಸೆ ಬಳಿ ಹನುಮಂತ ನಾಯ್ಕ ಹಾಗೂ ಮಂಜುನಾಥ ನಾಯ್ಕ ಕುಟುಂಬದವರ ನಡುವೆ ಜಮೀನು ವ್ಯಾಜ್ಯ ನಡೆಯುತ್ತಿದೆ. ಇದೇ ವ್ಯಾಜ್ಯದ ಮುಂದುವರೆದ ಭಾಗವಾಗಿ ಗುರುವಾರ ಬೆಳಗ್ಗೆ ಭಾರೀ ಪ್ರಮಾಣದ ಹೊಡೆದಾಟ ನಡೆದಿದೆ. ಒಬ್ಬರು ಬಡಿಗೆಯಿಂದ ಬಡಿದರೆ ಮತ್ತೊಬ್ಬರು ಕತ್ತಿಯಿಂದ ತಿವಿದಿದ್ದಾರೆ. ಕೊನೆಗೆ ಹನುಮಂತ ನಾಯ್ಕ ಹಾಗೂ ಮಂಜುನಾಥ ನಾಯ್ಕ ಇಬ್ಬರೂ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಈ ದಿನ ಬೆಳಗ್ಗೆ 10.30ರ ಆಸುಪಾಸಿಗೆ ಮಂಜುನಾಥ ನಾಯ್ಕ ಅವರು ತೆಂಗಿನ ಕಾಯಿ ಕೀಳಲು ತೋಟಕ್ಕೆ ಹೋಗಿದ್ದರು. ತೆಂಗು ಕೀಳುವ ಕಾರ್ಮಿಕರು ಅಲ್ಲಿಗೆ ಆಗಮಿಸಿದ್ದರು. ಅದೇ ವೇಳೆ ಹನುಮಂತ ನಾಯ್ಕ ಅವರು ಗದ್ದೆಗೆ ಗೊಬ್ಬರ ಮಾಡಲು ಸೊಪ್ಪು ತರುವ ಕೆಲಸಕ್ಕಾಗಿ ಬೆಟ್ಟದ ಕಡೆ ಹೊರಟಿದ್ದರು. ಈ ವೇಳೆ ಮಂಜುನಾಥ ನಾಯ್ಕ ಹಾಗೂ ಹನುಮಂತ ನಾಯ್ಕರ ನಡುವೆ ಮಾತಿಗೆ ಮಾತು ಬೆಳೆಯಿತು. ಜಮೀನು ವಿಷಯವಾಗಿ ಇಬ್ಬರು ಕೆಟ್ಟದಾಗಿ ಬೈದುಕೊಂಡರು. ಅದಾದ ನಂತರ ಪರಸ್ಪರ ಒಬ್ಬರಿಗೊಬ್ಬರು ಥಳಿಸಿದರು.

ಮೊದಲು ಮಂಜುನಾಥ ನಾಯ್ಕ ಅವರು ತಮ್ಮ ಬಳಿಯಿದ್ದ ಕಟ್ಟಿಗೆಯಿಂದ ಹನುಮಂತ ನಾಯ್ಕರ ತಲೆಗೆ ಬಡಿದರು. ಹನುಮಂತ ನಾಯ್ಕರು ಆಯಾಸಗೊಂಡು ಅಲ್ಲಿ ಕುಳಿತಾಗ ಕಲ್ಲಿನಿಂದ ಜಜ್ಜಿದರು. ಇದಕ್ಕೆ ಪ್ರತಿಯಾಗಿ ಹನುಮಂತ ನಾಯ್ಕರು ಕೈಯಲಿದ್ದ ಸೊಪ್ಪು ಕತ್ತರಿಸುವ ಕತ್ತಿ ಬೀಸಿದರು. ಆಗ, ಮಂಜುನಾಥ ನಾಯ್ಕರು ಸಹ ತಮ್ಮ ಬಳಿಯಿದ್ದ ಕತ್ತಿ ಬೀಸಿದರು. ಪರಿಣಾಮ ಆ ಇಬ್ಬರು ಗಾಯಗೊಂಡು ರಕ್ತದ ಮೊಡವಿನಲ್ಲಿ ಬಿದ್ದರು. ಅದಾದ ನಂತರ ಮಂಜುನಾಥ ನಾಯ್ಕರು ಬೆಣ್ಣೆಹೊಳೆ ಕಡೆ ಓಡಿ ಹೋಗಿದ್ದು, ಅಲ್ಲಿ ಆಯಾಸದಿಂದ ಬಿದ್ದು ಇನ್ನಷ್ಟು ಗಾಯಗೊಂಡರು.

ಈ ಹೊಡೆದಾಟ ಗಲಾಟೆ ಕೇಳಿ ಹನುಮಂತ ನಾಯ್ಕರ ಪತ್ನಿ ಸುಜಾತಾ ನಾಯ್ಕ ಹಾಗೂ ಮಂಜುನಾಥ ನಾಯ್ಕರ ಪತ್ನಿ ಅನಿತಾ ನಾಯ್ಕ ಸಹ ಸ್ಥಳಕ್ಕೆ ಬಂದಿದ್ದರು. ಪರಸ್ಪರ ಅವರು ಒಬ್ಬರನ್ನೊಬ್ಬರು ನಿಂದಿಸಿಕೊ0ಡಿದ್ದು, ಈ ವೇಳೆ ಅದೇ ಊರಿನ ಯೋಗೇಶ ನಾಯ್ಕ ಅವರು ಸುಜಾತಾ ನಾಯ್ಕರನ್ನು ಕೆಟ್ಟದಾಗಿ ಬೈದು ನಿಂದಿಸಿದರು. ಹೀಗಾಗಿ ಸುಜಾತಾ ನಾಯ್ಕ ಅವರು ತಮಗೆ ನಿಂದಿಸಿದ ಯೋಗೇಶ ನಾಯ್ಕ, ತಮ್ಮ ಪತಿ ಮೇಲೆ ಹಲ್ಲೆ ನಡೆಸಿದ ಮಂಜುನಾಥ ನಾಯ್ಕರ ವಿರುದ್ಧ ಕುಮಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅನಿತಾ ನಾಯ್ಕ ಅವರು ತಮ್ಮ ಪತಿಗೆ ಹೊಡೆದ ಹನುಮಂತ ನಾಯ್ಕ ಹಾಗೂ ಹೊಡೆದಾಟಕ್ಕೆ ಪ್ರೇರೇಪಿಸಿದ ಸುಜಾತಾ ನಾಯ್ಕ ವಿರುದ್ಧವೂ ದೂರು ಕೊಟ್ಟಿದ್ದಾರೆ.

ಆ ಮಹಿಳೆಯರಿಬ್ಬರೂ ಹೇಳಿದ ಕಥೆ ಆಲಿಸಿದ ಕುಮಟಾ ಪಿಎಸ್‌ಐ ಮಂಜುನಾಥ ಗೌಡರ್ ಅವರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ವರದಿ ಒಪ್ಪಿಸಿದ್ದಾರೆ. ಆ ಇಬ್ಬರು ತಮ್ಮ ಕುಟುಂಬಕ್ಕೆ ಕೊಲೆ ಬೆದರಿಕೆಯಿರುವ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.

ShareSendTweetShare
Previous Post

ಈ ಅಂಗಡಿಯಲ್ಲಿರುವುದೆಲ್ಲವೂ ನಕಲಿ: ISI ಚಿಹ್ನೆಯನ್ನೂ ನಕಲು ಮಾಡಿದ ಕಿಲಾಡಿ!

Next Post

ಶಿರಸಿ-ಕುಮಟಾ: ರಸ್ತೆ ಸಂಚಾರ ನಡೆಸಿದ ಉಸ್ತುವಾರಿಗೆ ಸುಸ್ತು!

Next Post
Sirsi-Kumata The road traffic supervisor is tired!

ಶಿರಸಿ-ಕುಮಟಾ: ರಸ್ತೆ ಸಂಚಾರ ನಡೆಸಿದ ಉಸ್ತುವಾರಿಗೆ ಸುಸ್ತು!

The rain has come: Thunderstorms are coming again!

ಮೇ 30: ಮಳೆಗೂ ರಜೆ ಇಲ್ಲ.. ಶಾಲೆಗೂ ರಜೆ ಇಲ್ಲ!

Rain.. Rain.. Rain Port compass crashed into shore Seabird officer caught lying!

ಮಳೆ.. ಮಳೆ.. ಮಳೆ: ದಡಕ್ಕೆ ಅಪ್ಪಳಿಸಿದ ಬಂದರು ದಿಕ್ಸೂಚಿ: ಸುಳ್ಳು ಹೇಳಿ ಸಿಕ್ಕಿಬಿದ್ದ ಸೀಬರ್ಡ ಅಧಿಕಾರಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.