`ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿಯಿಂದ ಉಚ್ಚಾಟನೆ ಆಗಿದ್ದರಿಂದ ಕಾಂಗ್ರೆಸ್ಸಿನ ಅನೇಕ ನಾಯಕರು ಬಿಜೆಪಿಗೆ ಬರಲು ಉತ್ಸಾಹ ತೋರಿದ್ದಾರೆ. ಹೀಗಾಗಿ ಶಿವರಾಮ ಹೆಬ್ಬಾರ್ ಅವರ ಉಚ್ಚಾಟನೆಯಿಂದ ಬಿಜೆಪಿಗೆ ಶಕ್ತಿ ಬಂದಿದೆ’ ಎಂದು ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ ಹೇಳಿದ್ದಾರೆ.
`ಈ ಹಿಂದೆ ಬಿಜೆಪಿಯಲ್ಲಿದ್ದ ಅನೇಕರು ಶಿವರಾಮ ಹೆಬ್ಬಾರ್ ಅವರ ಮೇಲಿನ ಬೇಸರದಿಂದ ಕಾಂಗ್ರೆಸ್ ಸೇರಿದ್ದರು. ಇದೀಗ ಬಿಜೆಪಿ ಶಿವರಾಮ ಹೆಬ್ಬಾರ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ. ಹೀಗಾಗಿ ಅನೇಕ ನಾಯಕರು ಬಿಜೆಪಿಗೆ ಬರಲಿದ್ದು, ಇದರಿಂದ ಬಿಜೆಪಿ ಸಂಘಟನೆ ಇನ್ನಷ್ಟು ಬೆಳೆಯಲಿದೆ’ ಎಂದವರು ಅಭಿಪ್ರಾಯಪಟ್ಟಿದ್ದಾರೆ.
`ಶಿವರಾಮ ಹೆಬ್ಬಾರ್ ಅವರ ನಡೆಯಿಂದ ಅನೇಕರು ಬೇಸರಗೊಂಡಿದ್ದರು. ಬಿಜೆಪಿ ಮೊದಲೇ ಈ ನಿರ್ಣಯ ಕೈಗೊಳ್ಳಬೇಕಿತ್ತು. ತಡವಾದರೂ ಉತ್ತಮ ನಿರ್ಣಯ ಕೈಗೊಂಡಿದ್ದರಿ0ದ ಅನೇಕ ಕಾರ್ಯಕರ್ತರಿಗೆ ಸಮಾಧಾನವಾಗಿದೆ. ಶಿವರಾಮ ಹೆಬ್ಬಾರ್ ಅವರ ಉಚ್ಚಾಟನೆಯಿಂದ ಬಿಜೆಪಿ ಇನ್ನಷ್ಟು ಪ್ರಭಲವಾಗಲಿದೆ. ಅದಾದ ನಂತರ ಪಟ್ಟಣ ಪಂಚಾಯತ ದುರಾಡಳಿತ, ಆಡಳಿತ ವೈಪಲ ಹಾಗೂ ದಬ್ಬಾಳಿಕೆ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ’ ಎಂದು ಸೋಮೇಶ್ವರ ನಾಯ್ಕ ಹೇಳಿದ್ದಾರೆ.