ಶಿರಸಿಯಿಂದ ರಾಜ್ಯ ಹೆದ್ದಾರಿ 93 ಯಲ್ಲಾಪುರ ರಸ್ತೆಯಲ್ಲಿ 9 ಕಿಮೀ ಸಾಗಿದರೆ ಬಲಕ್ಕೆ ಇರುವ ಮಣ್ಣಿನ ರಸ್ತೆಯಲ್ಲಿ 2 ಕೀಮಿ ಸಾಗಿದರೆ ಕೈಲಾಸ ಗುಡ್ಡ ಬರುವುದು. ಕೈಲಾಸ ಗುಡ್ಡ ತಾರಗೋಡ ನಿಂದ 4 ಕೀಮಿ ದೂರದಲ್ಲಿ ಇದೆ. ಕೈಲಾಸ ಗುಡ್ಡ ಶಿರಸಿ,ಉತ್ತರ ಕನ್ನಡ ಒಂದು ಶಿಖರವಾಗಿದೆ. 683 ಮೀಟರ್‌ಗಳಷ್ಟು ಎತ್ತರವಿದೆ.
ಇಲ್ಲಿ ಕೈಲಾಸನಾಥೇಶ್ವರ ದೇವಾಲಯ ಇದೆ. ಶಿರಸಿಯಿಂದ ಅತಿ ಹತ್ತಿರದ ಶಿಖರ. ನಿಸರ್ಗ ರಮಣೀಯ ಸ್ಥಳ. ಯಾವುದೇ ಕೃತಕ ವ್ಯವಸ್ಥೆ, ಸುಂದರತೆ ಇಲ್ಲದ ಸುಂದರ ನಿಸರ್ಗದ ರಮಣೀಯ ಸ್ಥಳ. ಸುಲಭವಾಗಿ ಶಿರಸಿಯಿಂದ ಭೇಟಿ ನೀಡಬಹುದಾದ ಪ್ರೇಕ್ಷಣೀಯ ಸ್ಥಳ. ಮುಖ್ಯ ರಸ್ತೆಯಿಂದ 2 ಕೀಮಿ ಚಾರಣ ಮಾಡಿದರೆ, ಆ ಮಜವೇ ಬೇರೆ. ಅದೂ ಮಳೆಗಾಲದಲ್ಲಿ ಖುಷಿಯೇ ಋಷಿ. ಇಲ್ಲಿಯ ದೇವಾಲಯಕ್ಕೆ ಶಿವರಾತ್ರಿ ಸಮಯದಲ್ಲಿ ಹೆಚ್ಚಿನ ಭಕ್ತರು ಭೇಟಿ ನೀಡುತ್ತಾರೆ. ಇಲ್ಲೊಂದು ವೀಕ್ಷಣಾ ಗೋಪುರ ನಿರ್ಮಾಣ ಮಾಡಲಾಗಿದೆ. ಇಲ್ಲಿಂದ ಕಾಣುವ ಅಡಿಕೆ ತೋಟ, ಹಸಿರು ಹೋದಿಕೆಯ ಅರಣ್ಯ ಅದ್ಭುತ. ಇಲ್ಲಿ ಯಾವುದೇ ಅಂಗಡಿ, ಕುಡಿಯುವ ನೀರೀನ ವ್ಯವಸ್ಥೆ ಇಲ್ಲ.
ಆದರೆ ಪ್ಲಾಸ್ಟಿಕ್ ಕಸಮಾತ್ರ ಭರಪುರ. ಸ್ಥಳಿಯರು ತಮ್ಮ ನಿಸರ್ಗ ಉಳಿಕೆಗೆ ಪ್ರಯತ್ನ ಪಟ್ಟರೂ, ಪ್ರವಾಸಿಗಳು ತಮ್ಮ ಕೈಲಾದ ಕೈಲಾಸ ಗುಡ್ಡದ ಪರಿಸರ ನಾಶಕ್ಕೆ ಯೋಚಿಸದೇ ವರ್ತಿಸುವುದು ಗಂಭೀರ ಸಂಗತಿ. ಇಲ್ಲಿಂದ ಹತ್ತಿರ ಇರುವ ಹಳ್ಳಿ ತಾರಗೋಡ. ಇಲ್ಲಿ ಎಲ್ಲ ರೀತಿ ವ್ಯವಸ್ಥೆಗಳಿವೆ. ಶಾಖಾಹಾರಿ, ಇನ್ನಿತರ ಆಹಾರ, ತಿಂಡಿಗಳೂ ಲಭ್ಯ. ಹಳ್ಳಿಯಾದರೂ ಸಹಕಾರಿ ಸಂಸ್ಥೆಯ ಸೂಪರ್ ಮಾರ್ಕೆಟ ಕೂಡ ಇದೆ.
ಪ್ರವೇಶ ಮಾರ್ಗ: ಶಿರಸಿಯಿಂದ ಯಲ್ಲಾಪುರದತ್ತ ರಾಜ್ಯ ಹೆದ್ದಾರಿ 93ರಲ್ಲಿಂದ 9 ಕಿಮೀ ಸಾಗಿದ ಬಳಿಕ ಬಲಪಕ್ಕದ ಮಣ್ಣು ರಸ್ತೆಯಲ್ಲಿ 2 ಕಿಮೀ ನಡೆದುಕೊಂಡರೆ ಕೈಲಾಸ ಗುಡ್ಡ ತಲುಪಬಹುದು. ತಾರಗೋಡ ಗ್ರಾಮದಿಂದ ಇದಕ್ಕೆ 4 ಕಿಮೀ ಅಂತರವಿದೆ. ಇದು 683 ಮೀಟರ್ ಎತ್ತರದಲ್ಲಿ ಇದೆ.
ಸ್ಥಳದ ವೈಶಿಷ್ಟ್ಯಗಳು: ಕೈಲಾಸನಾಥೇಶ್ವರ ದೇವಾಲಯ. ಶಿಖರದ ಮೇಲೆ ದೇವಾಧೀದೇವ ಶಿವನಿಗೆ ಸಮರ್ಪಿತವಾಗಿರುವ ಕೈಲಾಸನಾಥೇಶ್ವರ ದೇವಾಲಯವಿದೆ. ಶಿವರಾತ್ರಿಯ ಸಂದರ್ಭದಲ್ಲಿ ಇದು ಭಕ್ತರಿಂದ ತುಂಬಿರುತ್ತದೆ. ಆಕರ್ಷಕ ನೈಸರ್ಗಿಕ ಸೌಂದರ್ಯ, ಇದು ಯಾವುದೇ ಕೃತಕ ವ್ಯವಸ್ಥೆಗಳಿಲ್ಲದ ಶುದ್ಧ ನಿಸರ್ಗದ ಪ್ರದೇಶ. ಹಸಿರು ಅರಣ್ಯ, ಅಡಿಕೆ ತೋಟಗಳು, ಶಾಂತ ಪರಿಸರವು ಇಲ್ಲಿ ಮನ ಮುದಿಸುವ ಸೌಂದರ್ಯ ಹೊಂದಿದೆ. ಶಿಖರದ ಮೇಲೆ ನಿರ್ಮಿಸಿರುವ ವೀಕ್ಷಣಾ ಗೋಪುರದಿಂದ ಸುತ್ತಲಿನ ಹಸಿರಿನ ನೋಟವು ಮನ ಸೆಳೆಯುತ್ತದೆ.
ಚಾರಣದ ಅನುಭವ: ಮುಖ್ಯ ರಸ್ತೆಯಿಂದ ಕೈಲಾಸ ಗುಡ್ಡದವರೆಗೆ 2 ಕಿಮೀ ಕಾಲ್ನಡಿಗೆ ಚಾರಣದ ಸಾರ್ಥಕ ಅನುಭವ. ಮಳೆಗಾಲದಲ್ಲಿ ಈ ಚಾರಣ ಇನ್ನಷ್ಟು ಆಕರ್ಷಕವಾಗುತ್ತದೆ.
ಪ್ರವಾಸಿಗರಿಗೆ ಸೂಚನೆಗಳು: ಇಲ್ಲಿ ಅಂಗಡಿ, ಕುಡಿಯುವ ನೀರು, ಆಹಾರದ ವ್ಯವಸ್ಥೆ ಇಲ್ಲ. ಆದ್ದರಿಂದ ಅಗತ್ಯವಾದ ಆಹಾರ, ನೀರನ್ನು ಹತ್ತಿರದ ತಾರಗೋಡ ಗ್ರಾಮದ ನಿಂದ ಪಡೆಯಬಹುದು. ಸ್ಥಳೀಯರು ನಿಸರ್ಗದ ಕಾಳಜಿಗೆ ಏಷ್ಟೇ ಪ್ರಯತ್ನ ಪಟ್ಟರೂ ಪ್ರವಾಸಿಗರಿಂದ
ಸ್ಥಳದಲ್ಲಿರುವ ಪ್ಲಾಸ್ಟಿಕ್ ಕಸದ ಪ್ರಮಾಣ ದುರಂತವಾಗಿದೆ. ಪ್ರವಾಸಿಗರು ತಮ್ಮ ಜವಾಬ್ದಾರಿಯನ್ನು ಮನಗಂಡು ಪರಿಸರ ಸಂರಕ್ಷಣೆಗೆ ಸಹಕರಿಸಬೇಕು. ಸ್ಥಳೀಯರು ನಿಸರ್ಗವನ್ನು ಉಳಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಪ್ರವಾಸಿಗರ ಸಹಕಾರ ಅತ್ಯಗತ್ಯ.

ತಾರಗೋಡ ಹತ್ತಿರದ ಗ್ರಾಮ: ತಾರಗೋಡ ಕೈಲಾಸ ಗುಡ್ಡದ ಹತ್ತಿರವಿರುವ ಹಳ್ಳಿ. ಇಲ್ಲಿ ಭೋಜನ, ತಿಂಡಿಗಳು, ದಿನಸಿ ಸರಕಿಗಾಗಿ ಸಹಕಾರಿ ಸಂಸ್ಥೆಯ ಸುಪರ್ ಮಾರ್ಕೆಟ್ ಮುಂತಾದ ಮೂಲಭೂತ ಸೌಲಭ್ಯಗಳು ಲಭ್ಯವಿವೆ. ಕೈಲಾಸ ಗುಡ್ಡ ಪ್ರಕೃತಿಯನ್ನು ಪ್ರೀತಿಸುವ ಪ್ರತಿಯೊಬ್ಬರೂ ಭೇಟಿ ನೀಡಬೇಕಾದ ನಿಸರ್ಗದ ದೇವಾಲಯ.
ಲೇಖಕರು:
ಡಾ ರವಿಕಿರಣ ಪಟವರ್ಧನ್
ಆಯುರ್ವೇದ ವೈದ್ಯರು, ಶಿರಸಿ
08384225836