ಶಿರಸಿ-ಕುಮಟಾ ಮಾರ್ಗದಲ್ಲಿನ ಬೆಣ್ಣೆ ಹೊಳೆ ಸೇತುವೆ ಬಳಿ ರಸ್ತೆ ಕೊಚ್ಚಿ ಹೋಗಿದ್ದರಿಂದ ಆ ಭಾಗದ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಇದೀಗ ಲಘು ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ.
ಸುಗಮ ವಾಹನ ಸಂಚಾರಕ್ಕಾಗಿ ಬೆಣ್ಣೆಹೊಳೆ ಸೇತುವೆಯಎಡಭಾಗದ ಅಪ್ರೋಚ್ ಸ್ಲಾಬ್ ಜೋಡಣೆ ಕಾರ್ಯವನ್ನು ತುರ್ತಾಗಿ ಮಾಡಲಾಗಿದೆ. ಹೀಗಾಗಿ ಭಾರೀ ತೂಕದ ವಾಹನಗಳನ್ನುಹೊರತುಪಡಿಸಿ ಉಳಿದ ವಾಹನಗಳ ಓಡಾಟಕ್ಕೆ ಯಾವುದೇ ಸಮಸ್ಯೆ ಇಲ್ಲ. ವಾಹನ ಸವಾರರು ಯಾವುದೇ ಆತಂಕ-ಗಡಿಬಿಡಿ ಇಲ್ಲದೇ ಈ ಮಾರ್ಗವಾಗಿ ಚಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. `ನಿಧಾನವಾಗಿ ಸಾಗಿ’ ಎಂಬ ಮುನ್ನಚ್ಚರಿಕೆ ಮರೆಯದಿರಿ.
ಇನ್ನೂ ಈ ಮಾರ್ಗದ ರಸ್ತೆ ನಿರ್ಮಾಣದಲ್ಲಿ ಬಾಕಿ ಉಳಿದಿರುವ ಸೇತುವೆಗಳ ಕಾಮಗಾರಿಯನ್ನು ಶೀಘ್ರದಲ್ಲಿಯೇ ಮುಗಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹೇಳಿದ್ದಾರೆ. `ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರು ಹಾಗೂ ವಾಹನ ಸವಾರರಿಗೆ ತೊಂದರೆ ಆಗದಂತೆ ಗರಿಷ್ಠ ಸುರಕ್ಷತಾ ಕ್ರಮ ಅನುಸರಿಸಲಾಗಿದೆ. ಕಟ್ಟುನಿಟ್ಟಾಗಿ ಸುರಕ್ಷತೆಗೆ ಆದ್ಯತೆ ನೀಡುವಂತೆ ಗುತ್ತಿಗೆ ಕಂಪನಿಗೆ ಸೂಚಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಮಾಹಿತಿ ನೀಡಿದ್ದಾರೆ.