`ಶುದ್ಧ ಕುಡಿಯುವ ನೀರು’ ಎಂಬ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗುವ `ಸಿಗ್ನೇಜರ್’ ಕಂಪನಿಯ ಬಾಟಲಿ ನೀರಿನಲ್ಲಿ ಪ್ಲಾಸ್ಟಿಕ್ ಅಂಶ ಕಾಣಿಸಿದೆ. ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಪ್ಲಾಸ್ಟಿಕ್ ಕುರುಹು ಪತ್ತೆ ಮಾಡಿದ್ದು, ಆ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಪ್ರವಾಸಿ ತಾಣವಾದ ಗೋಕರ್ಣದಲ್ಲಿ ವ್ಯಕ್ತಿಯೊಬ್ಬರು ಸಿಗ್ನೇಚರ್ ಕಂಪನಿಯ ನೀರು ಖರೀದಿಸಿದ್ದರು. ಆ ನೀರು ಬಾಟಲಿ ಒಡೆಯುವ ಮುನ್ನ ಅದರಲ್ಲಿ ಕಸವನ್ನು ಗಮನಿಸಿದರು. ಈ ಬಗ್ಗೆ ಪ್ರಶ್ನಿಸಿದಾಗ ಅಂಗಡಿಯವರು `ಕಂಪನಿಯವರು ಕೊಟ್ಟಿದ್ದೇ ಹಾಗೇ’ ಎಂದು ಉತ್ತರಿಸಿದರು. ಆ ಬಾಟಲಿ ನೀರಿನಲ್ಲಿ ಪ್ಲಾಸ್ಟಿಕ್ ಕಸಗಳಿರುವುದನ್ನು ನೋಡಿದ ಅವರು ಸರ್ಕಾರಿ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರು. ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಸಹ ಇದಕ್ಕೆ ಧ್ವನಿಗೂಡಿಸಿ ಬಾಟಲಿ ನೀರಿನ ತಪಾಸಣೆಗೆ ಒತ್ತಾಯಿಸಿದರು.
`ಗೋಕರ್ಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲದ ಕಾರಣ ಜನ ದುಡ್ಡು ಕೊಟ್ಟು ನೀರು ಖರೀದಿಸುತ್ತಾರೆ. ಆದರೆ, ಕೆಲ ಕಂಪನಿಯವರು ಪಡೆದ ದುಡ್ಡಿದ ಯೋಗ್ಯ ನೀರು ಸರಬರಾಜು ಮಾಡುವುದಿಲ್ಲ’ ಎಂದು ಗ್ರಾಹಕರು ಅಸಮಧಾನವ್ಯಕ್ತಪಡಿಸಿದರು. ಸರ್ಕಾರಿ ಅಧಿಕಾರಿಗಳ ಮೂಲಕವೇ ಆ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿದರು.