6 Skip to content

ಗೋ ವಧಿಸುವ ವ್ಯಾಘ್ರರ ಅಟ್ಟಹಾಸ: ಪೊಲೀಸರ ಮೇಲೆ ಕಾರು ಹತ್ತಿಸುವ ಪ್ರಯತ್ನ!

Cow slaughtering tigers' taunts Attempt to run over police with car!

ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ದುಷ್ಕರ್ಮಿಗಳು ಅದನ್ನು ತಡೆಯಲು ಬಂದ ಪೊಲೀಸರ ಮೇಲೆ ಕಾರು ನುಗ್ಗಿಸುವ ಪ್ರಯತ್ನ ನಡೆಸಿದ್ದಾರೆ. ಆ ದುಷ್ಕರ್ಮಿಗಳನ್ನು ಅಂಕೋಲಾ ಪೊಲೀಸರು ಬಂಧಿಸಿ ಅವರನ್ನು ಜೈಲಿಗೆ ಕಳುಹಿಸಿದ್ದಾರೆ.

ಬುಧವಾರ ರಾತ್ರಿ ಮಂಗಳೂರು ಸುರತ್ಕಲ್ ಕಾಟಿವಳ್ಳದ ಅಬ್ದುಲ್ ಅಜೀಜ್ ಅಬ್ದುಲ್ ಖಾದರ್, ಚೊಕ್ಕಬೆಟ್ಟುವಿನ ಮೊಹಮದ್ ಮುಸ್ತಪಾ, ಮೊಹಮದ್ ಆಸಿಕ್ ಅಶ್ರಫ್, ಕೊಲ್ನಾಡ್ ಮುಲ್ಕಿಯ ಮೊಹಮ್ ನುಹಾನ್ ಷರೀಫ್, ಉಲ್ಲಾಳದ ಮೊಹಮದ್ ಇರ್ಬಾಜ್ ಎಂಬಾತರು ಗೋ ಸಾಗಾಟ ನಡೆಸಿದ್ದರು. ಅಂಕೋಲಾ ರೈಲ್ವೆ ನಿಲ್ದಾಣದ ಬಳಿ ಆಕಳುಗಳನ್ನು ತುಂಬಿಕೊAಡು ಅವರೆಲ್ಲರು ಹೊರಟಿದ್ದರು. ಈ ವೇಳೆ ಪಿಎಸ್‌ಐ ಉದ್ದಪ್ಪ ಧರೆಪ್ಪನವರ್ ಹಾಗೂ ಸಿಬ್ಬಂದಿ ನಾಕಾಬಂಧಿ ಮಾಡಿ ಅದನ್ನು ತಡೆದಿದ್ದರು.ಇದನ್ನು ಸಹಿಸದ ದುಷ್ಕರ್ಮಿಗಳು ಪೊಲೀಸರ ಮೇಲೆ ವಾಹನ ಹಾರಿಸುವ ಪ್ರಯತ್ನ ನಡೆಸಿದರು. ಆ ಮೂಲಕ ಅಲ್ಲಿಂದ ತಪ್ಪಿಸಿಕೊಂಡು ಹೊರಟಿದ್ದರು.

ನಂತರ ಅವರನ್ನು ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ. ಅದಾಗಿಯೂ ಬಡಾಗೌಳಿಪಾಳಿಯ ಮೊಹಮದ್ ಅಜೀಂ ಎಂಬಾತ ಪೊಲೀಸರಿಂದ ತಪ್ಪಿಸಿಕೊಂಡಿದ್ದು, ಆತನ ಹುಡುಕಾಟ ಮುಂದುವರೆದಿದೆ. ಬಂಧಿತರಿAದ ಎರಡು ಕಾರು, ಹಗ್ಗ, ಮೊಬೈಲ್‌ಗಳು ಹಾಗೂ ಇತರ ಹಲವು ಸಾಮಗ್ರಿಯನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಎರಡು ಆಕಳನ್ನು ರಕ್ಷಿಸಿದ್ದಾರೆ.

ಅಂಕೋಲಾ ಠಾಣೆಯ ಎಎಸ್‌ಐ ಮಹಾಬಲೇಶ್ವರ ಸಿ ಗಡೇರ, ಸಿಎಚ್‌ಸಿ ಚಂದ್ರಕಾAತ ಗೌಡ, ಸಿಬ್ಬಂದಿ ಶ್ರೀಕಾಂತ ಕಟಬರ, ಆಸಿಫ್ ಕುಂಕೂರು, ಮನೋಜ ಡಿ, ಸಲೀಂ ಮುಖಾಶಿ, ಅರುಣ ಮೇತ್ರಿ, ಮಂಜುನಾಥ ಅಡಗಿ, ರವಿ ಹಡಪದ, ಡಿಎಆರ್ ಸಿಬ್ಬಂದಿ ರಾಜು ಅನ್ನೋಟಿಕರ್, ಶಿವಮೂರ್ತಿ ಗುನಗಾ, ಪರೇಶ ನಾಯ್ಕ, ಸತೀಶ ಕೊಗೆ ಈ ಕಾರ್ಯಾಚರಣೆಯಲ್ಲಿದ್ದರು

You cannot copy content of this page