ಅಪಾಯದ ಮುನ್ಸೂಚನೆಯಿದ್ದರೂ ಅಂಕೋಲಾದ ಸಮುದ್ರಕ್ಕೆ ಹಾರಿದ ಹುಬ್ಬಳ್ಳಿಯ ನಿಜಾಮುದ್ದೀನ್ ಮುಲ್ಲಾ ದಾಧಾಪಿರ್ ಅಲೆಗಳ ಅಬ್ಬರಕ್ಕೆ ಸಿಲುಕಿ ಸಾವನಪ್ಪಿದ್ದಾರೆ.
ಬಕ್ರೀದ್ ರಜೆ ಹಿನ್ನಲೆ ಹುಬ್ಬಳ್ಳಿಯ ಹೆಗ್ಗೆರಿ ಮಾರುತಿನಗರದ ನಿಜಾಮುದ್ದೀನ್ ಮುಲ್ಲಾ ದಾಧಾಪಿರ್ (26) ಭಾನುವಾರ ಅಂಕೋಲಾಗೆ ಬಂದಿದ್ದರು. ನದಿಬಾಗ ಕಡಲತೀರಕ್ಕೆ ಅವರು ಅಲ್ಲಿ ಕಾಲ ಕಳೆಯುತ್ತಿದ್ದರು. ಅವರ ಜೊತೆ ಇನ್ನೂ ಮೂವರು ಪ್ರವಾಸಕ್ಕೆ ಆಗಮಿಸಿದ್ದು, ಎಲ್ಲರೂ ಸೇರಿ ನೀರಿಗೆ ಇಳಿದಿದ್ದರು.
ನಿಜಾಮುದ್ದೀನ್ ಮುಲ್ಲಾ ದಾಧಾಪಿರ್ ಸಮುದ್ರದಲ್ಲಿ ಎಲ್ಲರಿಗಿಂತ ಮುಂದೆ ಇದ್ದರು. ಏಕಾಏಕಿ ಅವರು ಅಲ್ಲಿಂದ ಕಾಣೆಯಾದರು. ಉಳಿದವರು ಎಷ್ಟು ಹುಡುಕಿದರೂ ನಿಜಾಮುದ್ದೀನ್ ಮುಲ್ಲಾ ದಾಧಾಪಿರ್ ಸಿಗಲಿಲ್ಲ. ಹೀಗಾಗಿ ಸ್ನೇಹಿತರೆಲ್ಲರೂ ಸೇರಿ ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಸಹ ನಿಜಾಮುದ್ದೀನ್ ಮುಲ್ಲಾ ದಾಧಾಪಿರ್ ಅವರಿಗಾಗಿ ಸಮುದ್ರ ಶೋಧ ನಡೆಸಿದ್ದಾರೆ.