ಉತ್ತರ ಕನ್ನಡ ಜಿಲ್ಲೆಯ ಮೆದುಳು ಮತ್ತು ನರರೋಗ ತಜ್ಞ ಡಾ ಸುಮಂತ ಬಳಗಂಡಿ ಅವರು ಯುನೈಟೆಡ್ ಕಿಂಗ್‌ಡo ನಡೆಸುವ Royal Colleges of Physicians Association of British Neurologists ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.
ಡಾ ಸುಮಂತ್ ಜಯದೇವ ಬಳಗಂಡಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮುಂಡಿಗೇಸರದವರು. ತಾಯಿ ಸ್ವಾತಿ ಬಳಗಂಡಿ ಮತ್ತು ತಂದೆ ಜಯದೇವ ಬಳಗಂಡಿ ಅವರ ಜೊತೆ ಕಳೆದ ಮೂರು ದಶಕದಿಂದ ಕುಮಟಾದಲ್ಲಿ ವಾಸವಾಗಿದ್ದಾರೆ. 2025ರ ಮೇ ತಿಂಗಳಲ್ಲಿ ನಡೆದ ಈ ಪರೀಕ್ಷೆಯಲ್ಲಿ ಡಾ ಸುಮಂತ ಅವರು ಅಗ್ರ ಶ್ರೇಯಾಂಕಪಡೆದಿದ್ದಾರೆ. ಜೂನ್ 11ರಂದು ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಅದರ ಮೂಲಕ ಡಾ ಸುಮಂತ ಅವರು ನ್ಯೂರೋಲಾಜಿ ವಿಭಾಗದಲ್ಲಿ `ಅಂತರರಾಷ್ಟ್ರೀಯ ಮಾನ್ಯತೆ’ ಪಡೆದಿದ್ದಾರೆ.
ನ್ಯೂರೋ ಸೈನ್ಸ್ ಕ್ಷೇತ್ರದಲ್ಲಿ ಜಾಗತಿಕ ಮಾನ್ಯತೆ ಪಡೆದಿರುವ ನಿಮ್ಹ್ಯಾನ್ಸ್ ಸಂಸ್ಥೆಯಲ್ಲಿ ಅವರು ಮೂರು ವರ್ಷಗಳ ವಿಶೇಷ ಅಧ್ಯಯನದ ಮೂಲಕ ಡಿ ಎಮ್ (ನ್ಯೂರೋಲೊಜಿ) ಪದವಿ ಮುಗಿಸಿರುವ ಡಾ ಸುಮಂತ ಅವರು ಭಾರತ ಸೇರಿ ವಿವಿಧ ದೇಶಗಳಲ್ಲಿ ನರರೋಗ ಅಧ್ಯಯನ ಮಾಡಿದ್ದಾರೆ. ನಿಮಾನ್ಸ ಸಂಸ್ಥೆಯಲ್ಲಿನ ಅನುಭವ ಆಧಾರದಲ್ಲಿ ಅವರು ಅಂತರರಾಷ್ಟ್ರೀಯ ಮಟ್ಟದ ಪರೀಕ್ಷೆಗೆ ತಯಾರಿ ನಡೆಸಿದ್ದರು. ಇದೀಗ ಅದನ್ನು ಪೂರ್ಣಗೊಳಿಸಿ ಎಂ ಆರ್ ಸಿ ಪಿ ಪದವಿಧರರಾಗಿದ್ದಾರೆ.