ಶಿರಸಿಯ ನಿಲೇಕಣಿ ನಾಕಾದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರು ಗಾಂಜಾ ಸಾಗಾಟಗಾರರನ್ನು ಹಿಡಿದಿದ್ದಾರೆ. 10 ಸಾವಿರ ರೂ ಮೌಲ್ಯದ ಸ್ಕೂಟಿಯಲ್ಲಿ 5 ಸಾವಿರ ರೂ ಮೌಲ್ಯದ ಗಾಂಜಾ ಅಡಗಿಸಿಕೊಂಡಿದ್ದ ಇಬ್ಬರು ಜೈಲಿಗೆ ಹೋಗಿದ್ದಾರೆ.
23 ವರ್ಷದ ಅನುರಾಗ ಜೋಗಳೇಕರ್ ಅವರು ಹುಬ್ಬಳ್ಳಿ ರಸ್ತೆಯ ತಾಮೀರ್ ಬ್ಯಾಂಕ್ ಬಳಿ ವಾಸವಾಗಿದ್ದರು. ಕೆಎಸ್‌ಆರ್‌ಟಿಸಿ ಬಸ್ ಡಿಪೋ ಹತ್ತಿರ ಅದೇ ವಯಸ್ಸಿನ ಸೋಹನ್ ಭಂಡಾರಿ ಅವರು ವಾಸವಾಗಿದ್ದರು. ಒಂದೇ ವಯಸ್ಸಿನ ಅವರಿಬ್ಬರೂ ಪೆಂಟಿAಗ್ ಕೆಲಸ ಮಾಡಿಕೊಂಡು ಸಮಾನ ಮನಸ್ಕರಾಗಿ ದುಡಿಯುತ್ತಿದ್ದರು. ಹೆಚ್ಚಿನ ಹಣಗಳಿಸುವುದಕ್ಕಾಗಿ ಅಡ್ಡದಾರಿ ಹಿಡಿದಿದ್ದರು. ಸಹವಾಸ ದೋಷದಿಂದ ಈ ಇಬ್ಬರು ತಪ್ಪು ಕೆಲಸ ಮಾಡಲು ಶುರು ಮಾಡಿದರು.
ನಿಲೇಕಣಿ ನಾಕಾದಲ್ಲಿ ಪಿಎಸ್‌ಐ ನಾಗಪ್ಪ ಅವರು ಆ ಸ್ಕೂಟಿಗೆ ಅಡ್ಡಲಾಗಿ ಕೈ ಮಾಡಿದಾಗ ಅನುರಾಗ ಜೋಗಳೇಕರ್ ಹಾಗೂ ಸೋಹನ್ ಭಂಡಾರಿ ಬೆಚ್ಚಿಬಿದ್ದರು. ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ ಅವರನ್ನು ಪೊಲೀಸ್ ಸಿಬ್ಬಂದಿ ಹನುಮಂತ ಕಬಾಡಿ, ನಾಗಪ್ಪ ಲಮಾಣಿ, ಸದ್ದಾಂ ಹುಸೇನ್ ಹಿಡಿದುಕೊಂಡರು. ಉಳಿದ ಪೊಲೀಸ್ ಸಿಬ್ಬಂದಿ ಮಲ್ಲಿಕಾರ್ಜುನ ಕುದರಿ, ಚನ್ನಬಸಪ್ಪ ಕ್ಯಾರಕಟ್ಟಿ, ರಾಜಶೇಖರ, ಅರುಣ ಲಮಾಣಿ ಹಾಗೂ ಪ್ರವೀಣ ಎಂ ಸ್ಕೂಟಿ ತಪಾಸಣೆ ಮಾಡಿದರು.
ಆಗ, ಅದರೊಳಗೆ 101 ಗ್ರಾಂ ಗಾಂಜಾ ಸಿಕ್ಕಿತು. ಪೊಲೀಸರ ಪ್ರಶ್ನೆಗೆ ಉತ್ತರಿಸಲು ಆ ಇಬ್ಬರು ತಡವರಿಸಿದರು. ಸಿಪಿಐ ಶಶಿಕಾಂತ ವರ್ಮಾ ಅವರು ಈ ವಿಷಯವನ್ನು ಡಿವೈಎಸ್ಪಿ ಗೀತಾ ಪಾಟೀಲ ಅವರಿಗೆ ತಿಳಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ಎಂ. ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಕಠಿಣ ಕ್ರಮಕ್ಕೆ ಆದೇಶಿಸಿದರು. ಆ ಇಬ್ಬರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.