ಧಾರ್ಮಿಕ ಕ್ಷೇತ್ರದಲ್ಲಿ ಅಂಗಡಿಯಿಟ್ಟು ವ್ಯಾಪಾರ ಮಾಡಬೇಕು ಎನ್ನುವವರಿಗೆ ಹೊನ್ನಾವರದ ಇಡಗುಂಜಿ ದೇವಾಲಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇಲ್ಲಿನ ಶ್ರೀ ವಿನಾಯಕ ದೇವಾಲಯಕ್ಕೆ ಸಂಬoಧಿಸಿದ 8 ಮಳಿಗೆಗಳ ಹರಜು ಪ್ರಕ್ರಿಯೆ ಜೂ 20ರಂದು ನಡೆಯಲಿದೆ.
ಹಣ್ಣು-ಕಾಯಿ, ಪೂಜಾ ಸಾಮಗ್ರಿ, ಸ್ಟೇಶನರಿ ಚಿಲ್ಲರೆ ವ್ಯಾಪಾರ ಮಾಡುವವರಿಗೆ ಮಾತ್ರ ಈ ಮಳಿಗೆ ಕೊಡಲಾಗುತ್ತದೆ. `ಕಪಿಲ’ ಕಟ್ಟಡದ ನೆಲಮಹಡಿಯಲ್ಲಿರುವ 8 ಮಳಿಗೆಗಳು ಹರಾಜಿನಲ್ಲಿ ಸಿಗುತ್ತದೆ. ನ್ಯಾಯಾಧೀಶರ ಅಧೀನದಲ್ಲಿರುವ ಈ ದೇವಾಲಯದಲ್ಲಿನ ಅಂಗಡಿ ಮಳಿಗೆಗಳಿಗೆ ಮಾಸಿಕ 3500ರೂ ಬಾಡಿಗೆ ನಿಗದಿಪಡಿಸಲಾಗಿದೆ. ಬಹಿರಂಗ ಹರಾಜಿನ ಮೂಲಕ ಅಂಗಡಿ ಉಸ್ತುವಾರಿವಹಿಸಿಕೊಳ್ಳಲು ದೇಗುಲ ಆಡಳಿತ ಸಮಿತಿ ನಿರ್ಣಯಿಸಿದ್ದು, ಅತಿ ಹೆಚ್ಚು ಮೊತ್ತದ ಬಾಡಿಗೆ ಕೂಗಿದವರಿಗೆ ದೇವಾಲಯ ಅಂಗಡಿ ಸಿಗಲಿದೆ.
ಇನ್ನೂ ಬಾಡಿಗೆಯ 10 ಪಟ್ಟು ಭದ್ರತಾ ಠೇವಣಿಯಿರಿಸುವುದು ಕಡ್ಡಾಯ. ಸದ್ಯ 11 ತಿಂಗಳಿನ ಬಾಡಿಗೆ ಅಥವಾ ಲೀಸ್ ಆಧಾರದಲ್ಲಿ ಇಲ್ಲಿನ ಅಂಗಡಿಗಳನ್ನು ಬಿಟ್ಟುಕೊಡಲು ನಿರ್ಧರಿಸಲಾಗಿದೆ. ಹರಾಜಿನಲ್ಲಿ ಯಶಸ್ವಿಯಾದವರು ಪ್ರತಿ ತಿಂಗಳು 5ನೇ ತಾರಿಕಿನ ಒಳಗೆ ಬಾಡಿಗೆ ಪಾವತಿಸಬೇಕು. ಈ ಎಲ್ಲಾ ಷರತ್ತಿಗೆ ಒಳಪಟ್ಟು ವ್ಯಾಪಾರ ನಡೆಸಲು ಉದ್ದೇಶಿಸಿರುವವರು ಜೂನ್ 20ರಂದು ಬೆಳಿಗ್ಗೆ 11 ಗಂಟೆಗೆ ಇಡಗುಂಜಿಯ ಶ್ರೀ ವಿನಾಯಕ ದೇವಾಲಯದ ಮಂಗಲಮೂರ್ತಿ ಮಂಗಲ ಕಾರ್ಯಾಲಯಕ್ಕೆ ಬರಲು ಅಡ್ಡಿ ಇಲ್ಲ.
ಅಲ್ಲಿಯೇ ಅಂಗಡಿ ಹರಾಜು ನಡೆಯಲಿದ್ದು, ಯಶಸ್ವಿಯಾದವರು ಅದೇ ದಿನ ಹರಾಜು ಮೊತ್ತದ ಶೇ 25ರಷ್ಟು ಹಣ ಪಾವತಿಸಬೇಕು. ಉಳಿದ ಹಣ ಕರಾರು ಮಾಡಿಕೊಳ್ಳುವ ವೇಳೆ ಪಾವತಿ ಮಾಡಬೇಕು. ಹಣ ಪಾವತಿಸಿದ ಬಗ್ಗೆ ರಸೀದಿಯನ್ನು ಸಹ ಪಡೆಯಬೇಕು ಎಂದು ಸೂಚಿಸಲಾಗಿದೆ.
ಇನ್ನೂ ಹೆಚ್ಚಿನ ಮಾಹಿತಿ ಬೇಕೆ? ಹಾಗಾದರೆ ಇಲ್ಲಿ ಫೋನ್ ಮಾಡಿ: 08387- 247227
ಪ್ರಕಟಣೆಯ ಪಿಡಿಎಫ್ ಪ್ರತಿ ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ: ಇಡಗುಂಜಿ ಮಳಿಗೆ ಹರಾಜು