ಯಲ್ಲಾಪುರದ ಮಲ್ಲಿಕಾ ಹೊಟೇಲ್ ಬಳಿ ಪೆಟ್ರೋಲ್ ಸಾಗಾಟದ ಟ್ಯಾಂಕರ್ ಬೈಕಿಗೆ ಗುದ್ದಿದೆ. ಪರಿಣಾಮ ಬೈಕ್ ಸವಾರ ಸಂಬಾಜಿ ಮಿರಾಶಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಜೂನ್ 13ರಂದು ಹಳಿಯಾಳದ ಸಂಕನಕೊಪ್ಪದ ಸಂಬಾಜಿ ಮಿರಾಶಿ (50) ಅವರು ಯಲ್ಲಾಪುರದ ಕಡೆ ಬೈಕ್ ಓಡಿಸಿಕೊಂಡು ಬರುತ್ತಿದ್ದರು. ಎದುರಿನಿಂದ ಟ್ಯಾಂಕರ್ ಓಡಿಸಿಕೊಂಡು ಬಂದ ವಿಜಯಪುರದ ಕೆಂಚಪ್ಪ ಶಾಂತಪ್ಪಣ್ಣವರ್ ಆ ಬೈಕಿಗೆ ತಮ್ಮ ಲಾರಿ ಗುದ್ದಿದರು. ಗುದ್ದಿದ ರಭಸಕ್ಕೆ ಬೈಕಿನಿಂದ ಬಿದ್ದ ಸಂಬಾಜಿ ಮಿರಾಶಿ ಅಲ್ಲಿಯೇ ಪ್ರಾಣ ಬಿಟ್ಟರು.
ಪೊಲೀಸರು ಸ್ಥಳಕ್ಕೆ ದಾವಿಸಿದರು. ಪಿಎಸ್‌ಐ ಯಲ್ಲಲಿಂಗ ಕನ್ನೂರು, ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ ಹಾಗೂ ಶೇಡಜಿ ಚೌಹಾಣ ಸ್ಥಳಕ್ಕೆ ದೌಡಾಯಿಸಿದರು. ಅಪಘಾತದ ವಿವರಪಡೆದು ಲಾರಿ ಚಾಲಕನನ್ನು ವಿಚಾರಣೆಗೆ ಒಳಪಡಿಸಿದರು.
ಹಳಿಯಾಳ ಸಂಕನಕೊಪ್ಪದ ಪ್ರಶಾಂತ ಮಿರಾಶಿ ಅವರು ಆಗಮಿಸಿ ತಂದೆ ಸಾವಿನ ಬಗ್ಗೆ ಪ್ರಕರಣ ದಾಖಲಿಸಿದರು. ಪಿಐ ರಮೇಶ ಹಾನಾಪುರ ಅವರು ತನಿಖೆ ನಡೆಸುತ್ತಿದ್ದಾರೆ.