ವೃದ್ಧೆಯನ್ನು ಅರಣ್ಯ ಪ್ರದೇಶಕ್ಕೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
ಗುರುವಾರ ವೃದ್ಧೆಯೊಬ್ಬರು ಸಂಬoಧಿಕರ ಮನೆಗೆ ಹೋಗಿದ್ದರು. ಅಲ್ಲಿಂದ ಮರಳುವಾಗ ವೃದ್ಧೆಯನ್ನು ಅಡ್ಡಗಟ್ಟಿದ ಬೈಲೆಪಾರಿನ ಫೈರೋಜ ಯರಘಟ್ಟಿ ಅವರನ್ನು ಕಾಡಿನ ಕಡೆ ಎಳೆದೊಯ್ದಿದ್ದರು. ಐಪಿಎಂ ಅರಣ್ಯ ಪ್ರದೇಶದಲ್ಲಿ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯ ಹುಡುಕಾಟ ನಡೆದಿತ್ತು. ಡಿವೈಎಸ್ಪಿ ಶಿವಾನಂದ ಮದರಕಂಡಿ, ಸಿಪಿಐ ಜಯಪಾಲ ಪಾಟೀಲ, ಪಿಎಸ್‌ಐ ಕಿರಣ ಪಾಟೀಲ್ ಸ್ಥಳಕ್ಕೆ ತೆರಳಿ ಸಾಕ್ಷಿ ಹುಡುಕಾಟ ನಡೆಸಿದ್ದರು.
ಶನಿವಾರ ಆರೋಪಿ ದಾಂಡೇಲಿಯಿ0ದ 3ಕಿಮೀ ದೂರದ ಅರಣ್ಯ ಪ್ರದೇಶದಲ್ಲಿ ಅಲೆದಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಪೊಲೀಸರು ಅಲ್ಲಿಗೆ ತೆರಳಿದಾಗ ಆರೋಪಿ ಶರಣಾಗಲು ಒಪ್ಪಲಿಲ್ಲ. ಅದಾಗಿಯೂ ಪೊಲೀಸರು ಆತನನ್ನು ವಶಕ್ಕೆಪಡೆದಿದ್ದು, ಪೊಲೀಸ್ ಠಾಣೆಗೆ ಕರೆತರುವಾಗ ಪೊಲೀಸರ ಮೇಲೆ ದಾಳಿಗೆ ಪ್ರಯತ್ನಿಸಿದರು. ಚಾಕುವಿನಿಂದ ಪೊಲೀಸರನ್ನು ತಿವಿದ ಕಾರಣ ಪೊಲೀಸರು ಪ್ರತಿ ದಾಳಿ ನಡೆಸಿದರು. ಅದಾಗಿಯೂ ಆರೋಪಿ ನಿಯಂತ್ರಣಕ್ಕೆ ಸಿಗದಿದ್ದಾಗ ಪೊಲೀಸರು ಗುಂಡಿನ ದಾಳಿ ನಡೆಸಿದರು.
ಸದ್ಯ ಆತನನ್ನು ಆಸ್ಪತ್ರೆಗೆ ತರಲಾಗಿದೆ. ಸಂತ್ರಸ್ತ ವೃದ್ಧೆ ಸಹ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆಯುತ್ತಿದ್ದಾರೆ.