ಅಂಗವಿಕಲ ವೃದ್ಧೆಗೆ ಚಾಕು ತೋರಿಸಿ ಅತ್ಯಾಚಾರ ನಡೆಸಿದಲ್ಲದೇ, ಆಕೆಯ ಬಳಿಯಿದ್ದ 5 ಸಾವಿರ ರೂ ಹಣವನ್ನು ಕಿತ್ತು ಪರಾರಿಯಾಗಿದ್ದ ಫೈರೋಜ ಯರಘಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಶರಣಾಗದೇ ಪೊಲೀಸರ ಮೇಲೆ ಕಲ್ಲು ತೂರಾಟ ಹಾಗೂ ಚಾಕು ಇರಿತ ನಡೆಸಿದ ಕಾರಣ ಆತನ ಮೇಲೆ ಪೊಲೀಸರು ಗುಂಡಿನ ಮಳೆ ಸುರಿಸಿದ್ದಾರೆ.
ಚಾಲಕ ವೃತ್ತಿ ಮಾಡಿಕೊಂಡಿದ್ದ ಫೈರೋಜ ಯರಘಟ್ಟಿ ಈ ಹಿಂದೆ ದರೋಡೆ, ಗೋವಾ ಸರಾಯಿ ಸರಬರಾಜು, ಗಾಂಜಾ ಮಾರಾಟ, ಹೊಡೆದಾಟ ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದರು. ಸಂಬOಧಿಕರ ಮನೆಗೆ ಹೋಗಿ ಮರಳುತ್ತಿದ್ದ 60 ವರ್ಷದ ಪರಿಶಿಷ್ಟ ಸಮುದಾಯದ ಮಹಿಳೆ ಅಂಗವಿಕಲೆ ಎಂಬುದನ್ನು ಲೆಕ್ಕಿಸದೇ ಫೈರೋಜ್ ಅವರನ್ನು ಅಡ್ಡಗಟ್ಟಿ ಕಾಡಿಗೆ ಎಳೆದೊಯ್ದಿದ್ದಾರೆ. ವೃದ್ಧೆಯ ಮೇಲೆ ಅತ್ಯಾಚಾರನಡೆಸಿ, ಅವರ ಬಳಿಯಿದ್ದ 5 ಸಾವಿರ ರೂ ಹಣ ಹಾಗೂ ಕೀಪಾಡ್ ಮೊಬೈಲ್ ದೋಚಿ ಪರಾರಿಯಾಗಿದ್ದರು.
ಆಘಾತಕ್ಕೆ ಒಳಗಾಗಿದ್ದ ವೃದ್ಧೆಯನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದರು. 100ಕ್ಕೂ ಅಧಿಕ ರೌಡಿಶೀಟರ್ ಫೋಟೋ ತೋರಿಸಿದಾಗ ಆ ವೃದ್ಧೆ ಅತ್ಯಾಚಾರನಡೆಸಿದ ಆರೋಪಿ ಫೈರೋಜನನ್ನು ಗುರುತಿಸಿದ್ದು, ಅದೇ ಆಧಾರದಲ್ಲಿ ಪೊಲೀಸರು ಆರೋಪಿಯ ಹುಡುಕಾಟದಲ್ಲಿದ್ದರು. ಶನಿವಾರ ಕುಳಗಿ ರಸ್ತೆಯಲ್ಲಿ ಫೈರೋಜ್ ಕಾಣಿಸಿಕೊಂಡಿದ್ದರಿAದ ಪೊಲೀಸ್ ಸಿಬ್ಬಂದಿ ಕೃಷ್ಣಪ್ಪ ಹೆಸರು ಹೇಳಿ ಕರೆದರು. ಆಗ, ಪೈರೋಜ್ ತಪ್ಪಿಸಿಕೊಳ್ಳುವ ಬರದಲ್ಲಿ ಕೃಷ್ಣಪ್ಪ ಅವರ ಮೇಲೆ ಕಲ್ಲು ತೂರಾಟ ನಡೆಸಿದರು. ಆಗ, ಅಲ್ಲಿಗೆ ಬಂದ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಇಮ್ರಾನ್ `ಪೈರೋಜ್ ನಿಲ್ಲು’ ಎಂದು ಕೂಗಿದ್ದು, ಇಮ್ರಾನ್’ಗೆ ಸಹ ಪೈರೋಜ್ ಚಾಕುವಿನಿಂದ ದಾಳಿ ಮಾಡಿದರು.
ಅದಾದ ನಂತರ ಪಿಎಸೈ ಅಲ್ಲಿಗೆ ಆಗಮಿಸಿ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದರು. ಪೊಲೀಸ್ ಅಧಿಕಾರಿಯ ಕುತ್ತಿಗೆಗೆ ಪೈರೋಜ್ ಚಾಕು ಹಿಡಿದಾಗ ಅನಿವಾರ್ಯವಾಗಿ ಆರೋಪಿಯ ಕಾಲಿಗೆ ಗುಂಡು ಹೊಡೆದರು. ನೆಲಕ್ಕೆ ಬಿದ್ದ ಆರೋಪಿಯನ್ನು ಪೊಲೀಸರು ಠಾಣೆಗೆ ಎಳೆದುತಂದರು. ಪೈರೋಜ್‌ಗೆ ಚಿಕಿತ್ಸೆ ಮುಂದುವರೆದಿದ್ದು, ಗಾಯಗೊಂಡ ಪೊಲೀಸ್ ಸಿಬ್ಬಂದಿ ಹಾಗೂ ಸಂತ್ರಸ್ತೆ ಸಹ ಚಿಕಿತ್ಸೆಪಡೆಯುತ್ತಿದ್ದಾರೆ.
ಈ ಎಲ್ಲಾ ವಿಷಯಗಳ ಬಗ್ಗೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ತುರ್ತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ವಿಡಿಯೋ ಇಲ್ಲಿ ನೋಡಿ..