ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಅತಿಕ್ರಮಣದಾರರು ಅರಣ್ಯ ಪ್ರದೇಶದಲ್ಲಿ ಈ ವರ್ಷ ದಶ ಲಕ್ಷ ಗಿಡ ನೆಡುವ ಸಂಕಲ್ಪ ಮಾಡಿದ್ದು, ಸದ್ಯ 5 ಲಕ್ಷ ಗಿಡ ನಾಟಿಗೆ ಸಿದ್ಧವಾಗಿದೆ.
ಅರಣ್ಯವಾಸಿಗಳಿಗೆ ಪರಿಸರ ಮತ್ತು ಸಂರಕ್ಷಣೆಯ ಕುರಿತು ಜಾಗೃತೆಯನ್ನು ಅರಣ್ಯವಾಸಿಗಳಿಗೆ ಮೂಡಿಸುವ ಉದ್ದೇಶದಿಂದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ದಶ ಲಕ್ಷ ಗಿಡ ನೆಡುವ ಆಂದೋಲನ ನಡೆಸುತ್ತಿದೆ. 5ನೇ ವರ್ಷದ ಈ ಅಭಿಯಾನದಲ್ಲಿ 500ಕ್ಕೂ ಅಧಿಕ ಬಗೆಯ ಗಿಡಗಳಿವೆ. ಜೂನ್ 21ರಿಂದ ಜುಲೈ 5ರವರೆಗೆ ಜಿಲ್ಲೆಯ 500ಕ್ಕೂ ಅಧಿಕ ಸ್ಥಳದಲ್ಲಿ ಈ ಗಿಡಗಳ ನಾಟಿ ಕಾರ್ಯ ನಡೆಯಲಿದೆ.
`ಹೋರಾಟಗಾರರ ವೇದಿಕೆಯ ಗ್ರೀನ್ ಕಾರ್ಡ ಪ್ರಮುಖರು ಇದಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಅರಣ್ಯವಾಸಿಗಳೇ ಗಿಡ ನಡೆಲಿದ್ದಾರೆ. ಆ ಮೂಲಕ ಅರಣ್ಯವಾಸಿಗಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವ ಪ್ರಯತ್ನ ನಡೆದಿದೆ’ ಎಂದು ಹೋರಾಟಗಾರ ರವೀಂದ್ರ ನಾಯ್ಕ ಹೇಳಿದ್ದಾರೆ.