ಕಾರವಾರದಲ್ಲಿ ಎರಡು ಬೈಕುಗಳ ನಡುವೆ ಅಪಘಾತ ನಡೆದಿದ್ದು, ಮುದುಗಾದ ತನುಷ್ ದುರ್ಗೇಕರ್ (26) ಸಾವನಪ್ಪಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರವಾರದಿಂದ ಮುದುಗಾ ಕಡೆ ತನುಷ್ ದುರ್ಗೇಕರ್ ಅವರು ಬೈಕಿನಲ್ಲಿ ಸ್ನೇಹಿತರ ಜೊತೆ ಹೋಗುತ್ತಿದ್ದರು. ಎದುರಿನಿಂದ ಬಂದ ಇನ್ನೊಂದು ಬೈಕು ಮುದುಗಾದ ಅಯ್ಯಪ್ಪ ಸ್ವಾಮಿ ದೇವಾಲಯದ ಎದುರು ಡಿಕ್ಕಿಯಾಯಿತು. ಎದುರಿನಿಂದ ಬಂದ ಬೈಕು ಕಾರವಾರ ನೌಕಾನೆಲೆ ಸಿಬ್ಬಂದಿಯದ್ದಾಗಿದೆ. ಅಪಘಾತದ ರಭಸಕ್ಕೆ ತನುಷ್ ದುರ್ಗೇಕರ್ ಅವರ ತಲೆಗೆ ಗಂಭೀರ ಪ್ರಮಾಣದ ಪೆಟ್ಟಾಯಿತು. ತನುಷ್ ಹೆದ್ದಾರಿ ಮೇಲೆಯೇ ಪ್ರಾಣಬಿಟ್ಟರು.
ಅಪಘಾತದಲ್ಲಿ ತನುಷ್ ಜೊತೆಯಿದ್ದ ಸ್ನೇಹಿತ ಗಾಯಗೊಂಡರು. ನೌಕಾನೆಲೆ ಸಿಬ್ಬಂದಿ ಸಹ ಪೆಟ್ಟು ಮಾಡಿಕೊಂಡರು. ಎರಡು ಬೈಕ್ ಜಖಂ ಆಗಿದ್ದು, ಅವು ಸ್ಥಳದಲ್ಲಿಯೇ ಬಿದ್ದುಕೊಂಡಿದ್ದವು. ಗಾಯಗೊಂಡ ಇಬ್ಬರನ್ನು ಸ್ಥಳೀಯರು ಉಪಚರಿಸಿದರು. ಅದಾದ ನಂತರ ಗಾಯಾಳುವನ್ನು ಊರಿನವರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.