ಕಾಲೇಜು ಯುವಕರನ್ನು ಗುರಿಯಾಗಿರಿಸಿಕೊಂಡು ಗಾಂಜಾ ಸರಬರಾಜು ಮಾಡುತ್ತಿದ್ದ ಹೊನ್ನಾವರ ಸುಬ್ರಹ್ಮಣ್ಯ ನಾಯ್ಕ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅವರೊಂದಿಗೆ ಕುಮಟಾದ ದರ್ಶನ ನಾಯ್ಕ ಹಾಗೂ ಹೊನ್ನಾವರದ ದೇವೇಂದ್ರ ಮುಕ್ರಿ ಸಹ ಬಂಧನಕ್ಕೆ ಒಳಗಾಗಿದ್ದಾರೆ.
ಹೊನ್ನಾವರ ಮಾಡಗೇರಿಯ ಕೂಲಿಯಾಳು ಸುಬ್ರಹ್ಮಣ್ಯ ನಾಯ್ಕ (49) ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದರು. ಹೊನ್ನಾವರ ಕರ್ಕಿ ಕಂಕೋಡಿಯ ಸೆಂಟ್ರಿAಗ್ ಕೆಲಸ ಮಾಡುವ ದೇವೇಂದ್ರ ಮುಕ್ರಿ (23) ಹಾಗೂ ಕುಮಟಾ ಹೊಳಗದ್ದೆಯ ಕೂಲಿ ಕಾರ್ಮಿಕ ದರ್ಶನ ನಾಯ್ಕ (21) ಸುಬ್ರಹ್ಮಣ್ಯ ನಾಯ್ಕರ ಮಾತು ಕೇಳಿ ದಾರಿ ತಪ್ಪಿದ್ದರು. ಈ ಮೂವರು ತಮ್ಮ ಕೆಲಸ ಬಿಟ್ಟು ಗಾಂಜಾ ಮಾರಾಟ ಮಾಡಿ ಹೆಚ್ಚಿನ ಹಣಗಳಿಸುವ ದಂಧೆಗಿಳಿದಿದ್ದರು.
ಅದರoತೆ, ಜೂನ್ 15ರಂದು ಈ ಮೂವರು ಎರಡು ಬೈಕುಗಳಲ್ಲಿ ಕುಮಟಾಗೆ ಬಂದರು. ಕಾಗಲ್ ಮಾನೀರ್ ಬಸ್ ನಿಲ್ದಾಣದ ಬಳಿ ನಿಂತು ತಮ್ಮ ಬಳಿಯಿದ್ದ ಗಾಂಜಾ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದರು. ಈ ಬಗ್ಗೆ ಅರಿತ ಪಿಎಸ್‌ಐ ಸಾವಿತ್ರಿ ನಾಯಕ ಆ ಮೂವರನ್ನು ವಿಚಾರಣೆಗೆ ಒಳಪಡಿಸಿದರು. ಸತ್ಯ ಹೇಳಲು ತಡವರಿಸಿದಾಗ ಬೈಕಿನ ಶೋಧ ನಡೆಸಿದರು.
ಆಗ, ಅಲ್ಲಿ 25 ಸಾವಿರ ರೂ ಮೌಲ್ಯದ 255 ಗ್ರಾಂ ಗಾಂಜಾ ಸಿಕ್ಕಿತು. ಎರಡು ಬೈಕಿನ ಜೊತೆ ಆ ಗಾಂಜಾವನ್ನು ಪೊಲೀಸರು ವಶಕ್ಕೆಪಡೆದರು. ಗಾಂಜಾ ಮಾರಾಟ ಮಾಡುತ್ತಿದ್ದ ಕಾರನ ಆ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.