ದೇವಿಮನೆ ಘಟ್ಟ ಪ್ರದೇಶದಲ್ಲಿ ಕಳೆದ ಮೂರು ದಿನದ ಅವಧಿಯಲ್ಲಿ ನಾಲ್ಕು ಬಾರಿ ಗುಡ್ಡ ಕುಸಿತ ಉಂಟಾಗಿದೆ. ರಾತ್ರಿ ವೇಳೆಯಲ್ಲಿಯೇ ಗುಡ್ಡ ಕುಸಿತ ಆಗುವುದನ್ನು ಪರಿಗಣಿಸಿ ಈ ಮಾರ್ಗವಾಗಿ ರಾತ್ರಿ ಸಂಚಾರ ನಿಷೇಧಿಸಲಾಗಿದೆ.
ಸದ್ಯ ಈ ರಸ್ತೆ ಅಭಿವೃದ್ಧಿ ಕೆಲಸ ನಡೆಯುತ್ತಿದ್ದು, ಈ ಹಿಂದೆ ಭಾರೀ ವಾಹನಗಳ ಓಡಾಟ ನಿಷೇಧಿಸಲಾಗಿತ್ತು. ಕೆಲ ದಿನದ ಹಿಂದೆ ಸೇತುವೆ ಪಕ್ಕದ ರಸ್ತೆ ಕೊಚ್ಚಿಹೋದ ಕಾರಣ ಲಘು ವಾಹನ ಓಡಾಟಕ್ಕೂ ಸಮಸ್ಯೆಯಾಗಿತ್ತು. ಜಿಲ್ಲಾಡಳಿತ ತ್ವರಿತವಾಗಿ ಸ್ಪಂದಿಸಿ ಸೇತುವೆ ಅಂಚಿನ ರಸ್ತೆ ಸರಿಪಡಿಸಿದ್ದರಿಂದ ಲಘು ವಾಹನ ಓಡಾಟಕ್ಕೆ ಸಮಸ್ಯೆಯಿರಲಿಲ್ಲ.
ಸದ್ಯ ಭಾರೀ ಪ್ರಮಾಣದ ಮಳೆ ಆಗುತ್ತಿರುವ ಹಿನ್ನಲೆ ದೇವಿಮನೆ ಘಟ್ಟ ಪ್ರದೇಶದಲ್ಲಿ ಪದೇ ಪದೇ ಗುಡ್ಡ ಕುಸಿಯುತ್ತಿದೆ. ಈಗಾಗಲೇ ನಾಲ್ಕು ಬಾರಿ ರಸ್ತೆ ಮೇಲೆ ಬಿದ್ದ ಮಣ್ಣು ತೆರವು ಮಾಡಲಾಗಿದೆ. ಅದಾಗಿಯೂ, ಮಣ್ಣು ಸಡಿಲಗೊಂಡಿದ್ದರಿAದ ಮತ್ತೆ ಕುಸಿಯುವ ಆತಂಕವಿದೆ. ಈ ಹಿನ್ನಲೆ ಸಂಜೆ 6 ಗಂಟೆಯಿAದ ಬೆಳಗ್ಗೆ 6 ಗಂಟೆ ಅವಧಿಯಲ್ಲಿ ಶಿರಸಿ-ಕುಮಟಾ ರಸ್ತೆ ಮಾರ್ಗವಾಗಿ ಯಾವುದೇ ವಾಹನ ಓಡಾಟ ನಿಷೇಧಿಸಲಾಗಿದೆ. ಜನರು ಸಹ ಈ ಅವಧಿಯಲ್ಲಿ ಓಡಾಟ ನಡೆಸುವ ಹಾಗಿಲ್ಲ.
ಜನರ ಓಡಾಟ ತಡೆಯಲು ರಸ್ತೆಗೆ ಅಡ್ಡಲಾಗಿ ಪೊಲೀಸರು ಬ್ಯಾರಿಕೇಟ್ ಅಳವಡಿಸಿದ್ದಾರೆ. ಜೊತೆಗೆ ಚಕ್‌ಪೋಸ್ಟ್’ಗಳಲ್ಲಿಯೂ ರಸ್ತೆ ಪ್ರವೇಶ ನಿಷೇಧದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.