ದುಬೈನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿರುವ ಕುಮಟಾದ ಗಣಪತಿ ಹೆಗಡೆ ಆನ್‌ಲೈನ್ ಟ್ರೇಂಡಿಗ್ ಆಸೆಗೆ ಬಿದ್ದು 2 ಕೋಟಿ ರೂಪಾಯಿಗಿಂತಲೂ ಅಧಿಕ ಹಣ ಕಳೆದುಕೊಂಡಿದ್ದಾರೆ. ತಮ್ಮ ಪತ್ನಿ ಪ್ರಣಿತಾ ಹೆಗಡೆ ಅವರ ಖಾತೆಯಲ್ಲಿದ್ದ ಹಣವನ್ನು ಸಹ ಅವರು ಮೋಸದ ಜಾಲಕ್ಕೆ ಸುರಿದಿದ್ದಾರೆ!
ಮೇ 1ರಂದು ಗಣಪತಿ ಹೆಗಡೆ ಅವರಿಗೆ ವಾಟ್ಸಪ್ ಮೂಲಕ ಆನ್‌ಲೈನ್ ಟ್ರೇಡಿಂಗ್ ವಿಷಯದ ಕುರಿತು ಗೊತ್ತಾಗಿದೆ. ಅಪರಿಚಿತ ಸಂಖ್ಯೆಯಿoದ ಬಂದ ಮೆಸೆಜ್ ನೋಡಿದ ಅವರು `ಮನೆಯಲ್ಲಿ ಕುಳಿತು ಸುಲಭವಾಗಿ ಹಣಗಳಿಸಬಹುದು’ ಎಂದು ನಂಬಿದ್ದಾರೆ. ಆ ನಂತರ ಮೆಸೆಜ್ ಮಾಡಿದವರಿಗೆ ಸಂಪರ್ಕಿಸಿ ಅವರು ಹೇಳಿದ ಗುಂಪು ಸೇರಿದ್ದಾರೆ. ಆ ಗುಂಪಿನಲ್ಲಿ 142 ಜನರಿದ್ದು, ಅವರೆಲ್ಲರೂ ಟ್ರೇಡಿಂಗ್ ಬಗ್ಗೆ ಮಾಹಿತಿಪಡೆಯುತ್ತಿರುವುದನ್ನು ಗಣಪತಿ ಹೆಗಡೆ ಗಮನಿಸಿದ್ದಾರೆ.
ಅದೆಲ್ಲವೂ ಸತ್ಯ ಎಂದು ಭಾವಿಸಿ ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಜಮಾ ಮಾಡಿದ್ದಾರೆ. ಸಿಐಟಿಐ ಎಂಬ ಆಫ್ ಮೂಲಕ ಅವರು ಟ್ರೇಡಿಂಗ್ ಶುರು ಮಾಡಿದ್ದು, ಪತ್ನಿ ಖಾತೆಯಲ್ಲಿದ್ದ ಹಣವನ್ನು ಸೇರಿ ಒಟ್ಟು 22128500ರೂ ಹೂಡಿಕೆ ಮಾಡಿದ್ದಾರೆ. ಆದರೆ, ಆ ಹಣವನ್ನು ಹಿಂಪಡೆಯಲು ಮಾತ್ರ ಗಣಪತಿ ಹೆಗಡೆ ಅವರಿಂದ ಸಾಧ್ಯವಾಗಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಗಣಪತಿ ಹೆಗಡೆ ಬ್ಲಾಕ್ ಆಗಿದ್ದಾರೆ. ಅವರನ್ನು ವಾಟ್ಸಪ್ ಗುಂಪಿನಿoದ ವಂಚಕರು ಹೊರದಬ್ಬಿದ್ದಾರೆ. ಗಣೇಶ ಹೆಗಡೆ ಅವರ ತಾಯಿ ಸುನಂದಾ ಹೆಗಡೆ ಅವರು ತಮ್ಮ ಮಗನಿಗಾದ ಅನ್ಯಾಯ-ವಂಚನೆಯ ಬಗ್ಗೆ ಆಕ್ರೋಶವ್ಯಕ್ತಪಡಿಸಿದರು. ಈ ಬಗ್ಗೆ ಕಾರವಾರದ ಸಿಎನ್‌ಇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಜಾಪರ್ ತಲೆಗೂ ಟೋಪಿ!
ಭಟ್ಕಳದ ಕಿಡ್ವಾಯಿ ರಸ್ತೆಯಲ್ಲಿ ಮೊಬೈಲ್ ರಿಪೇರಿ ಮಾಡುವ ಶಮವಿಲ್ ಜಾಪರ್ ಅವರು ಷೇರು ಮಾರುಕಟ್ಟೆ ಹೆಸರಿನಲ್ಲಿ ಮೋಸ ಹೋಗಿದ್ದಾರೆ. ಅಪ್ಚಲ್ ಖಾನ್ ಹಾಗೂ ಶೇಖರ್ ಶಶಿಕಾಂತ ಎಂಬಾತರು ವಾಟ್ಸಪ್ ಫೋನ್ ಮಾಡಿ ಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿ ನೀಡಿದ್ದು, ಅದನ್ನು ನಂಬಿ ಶಮಿವಾಲ್ ಹಣ ಕೊಟ್ಟಿದ್ದಾರೆ. 9.23 ಲಕ್ಷ ರೂ ಹಣಪಡೆದ ಅವರಿಬ್ಬರು ಶಮವಿಲ್ ಜಾಪರ್ ಅವರಿಗೆ ಲಾಭಾಂಶ ನೀಡದೇ ಯಾಮಾರಿಸಿದ್ದಾರೆ. ನೀಡಿದ ಹಣ ಸಹ ಮರಳಿ ಪಾವತಿಸಿಲ್ಲ. ಪ್ರಕರಣ ದಾಖಲಿಸಿಕೊಂಡ ಭಟ್ಕಳ ಪೊಲೀಸರು ವಂಚಕರ ಶೋಧ ನಡೆಸಿದ್ದಾರೆ.