6

ಗೋಕರ್ಣ: ಭಟ್ಟರ ಮನೆಹಾಳು ಮಾಡಿದ ಮಟ್ಕಾ ಚೀಟಿ!

ಗೋಕರ್ಣ ಬಳಿ ಮಟ್ಕಾ ಚೀಟಿ ವ್ಯವಹಾರ ನಡೆಸುತ್ತಿದ್ದ ವಾಸುದೇವ ಭಟ್ಟರ ಮೇಲೆ ಸಿಪಿಐ ಶ್ರೀಧರ್ ಎಸ್ ಆರ್ ದಾಳಿ ಮಾಡಿದ್ದಾರೆ. ವಾಸುದೇವ ಭಟ್ಟರು ಮಟ್ಕಾ ದಂಧೆಯಿoದ ಸಂಗ್ರಹಿಸಿದ್ದ 720ರೂ ಹಣವನ್ನು ಅವರು ಮುಟ್ಟುಗೋಲು ಹಾಕಿದ್ದಾರೆ.

ಗೋಕರ್ಣ ಬಳಿಯ ಮಾದನಚಿಟ್ಟಿಯ ಹನೆಹಳ್ಳಿ ಅಂಗಡಿ ವ್ಯಾಪಾರ ನಡೆಸುವ ವಾಸುದೇವ ಭಟ್ಟರು ಮಟ್ಕಾ ದಂಧೆಯನ್ನು ಉಪಕಸುಬಾಗಿಸಿಕೊಂಡಿದ್ದರು. ದುರ್ಗಾದೇವಿ ದೇವಸ್ಥಾನದಿಂದ ದುಬ್ಬನಸ್ಸಿ ಕಡೆ ಹೋಗುವ ರಸ್ತೆ ಅಂಚಿನಲ್ಲಿ ವಾಸುದೇವ ಭಟ್ಟರು ಮಟ್ಕಾ ಆಡಿಸುತ್ತಿದ್ದರು. ಈ ವಿಷಯ ಅರಿತ ಪೊಲೀಸರು ಅವರ ಅಂಗಡಿ ಮೇಲೆ ದಾಳಿ ನಡೆಸಿದಾಗ ಮಟ್ಕಾ ಚೀಟಿ, ಬಾಲ್ ಪೆನ್ ಜೊತೆ ಮಟ್ಕಾದಿಂದ ಸಂಗ್ರಹಿಸಿದ್ದ ಹಣವೂ ಸಿಕ್ಕಿತು. ಈ ಹಿನ್ನಲೆ ಭಟ್ಟರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

ಅoಕೋಲಾದಲ್ಲಿ ಮಟ್ಕಾ ಹಾವಳಿ
ಬೆಳಂಬಾರ ಮೂಲೆಮನೆಯ ಅಣ್ಣಪ್ಪ ಗೌಡ ಅವರು ಮಟ್ಕಾ ಆಡಿಸುವಾಗ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ತೆಂಕಣಕೇರಿ ಹಳ್ಳದ ಹತ್ತಿರ ಬೀದಿ ದೀಪದ ಕೆಳಗೆ ಮಟ್ಕಾ ಆಡಿಸುತ್ತಿದ್ದಾಗ ಅಂಕೋಲಾ ಪಿಎಸ್‌ಐ ಚಂದ್ರಶೇಖರ ಮಠಪತಿ ಅವರು ಅಣ್ಣಪ್ಪ ಗೌಡ ಅವರನ್ನು ಹಿಡಿದರು. ಅಣ್ಣಪ್ಪ ಅವರ ಬಳಿಯಿದ್ದ 840ರೂ ಹಣ ಜಪ್ತು ಮಾಡಿ ಪ್ರಕರಣ ದಾಖಲಿಸಿದರು.

ಅಂಕೋಲಾ ಕಣಸಿನಗದ್ದೆಯ ಸುರೇಶ ಬೋವಿ ಸಹ ಅಂಕೋಲಾದ ನಾಡವರ ಸಭಾಭವನದಿಂದ ಪಿಕಾಕ್ ಬಾರ್ ಕಡೆ ಹೋಗುವ ರಸ್ತೆಯಲ್ಲಿ ಮಟ್ಕಾ ಆಡಿಸುತ್ತಿದ್ದರು. ಆಗ ಪಿಎಸ್‌ಐ ಉದ್ದಪ್ಪ ಧರೆಪ್ಪನವರ್ ದಾಳಿ ನಡೆಸಿ ಮಟ್ಕಾ ಆಟದಿಂದ ಸಂಗ್ರಹಿಸಿದ್ದ 570ರೂ ವಸೂಲಿ ಮಾಡಿದರು. ಸುರೇಶ ಬೋವಿ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದರು.

ಕುಮಟಾದಲ್ಲಿ ಮಟ್ಕಾ ದಾಳಿ
ಕುಮಟಾ ಅಘನಾಶಿನಿಯ ಪುರಂದರ ಗೌಡ ಅವರು ಮಿರ್ಜಾನ್ ಪೆಟ್ರೋಲ್ ಬಂಕ್ ಬಳಿ ಮಟ್ಕಾ ಆಡಿಸುವಾಗ ಪಿಎಸ್‌ಐ ಸಾವಿತ್ರಿ ನಾಯಕ ಅವರ ಬಳಿ ಸಿಕ್ಕಿಬಿದ್ದರು. ಪೆಟ್ರೋಲ್ ಬಂಕ್ ಮುಂದಿನ ಗೂಡಂಗಡಿ ಬಳಿ ಅವರು ಮಟ್ಕಾ ಆಡಿಸಿ ಸಂಗ್ರಹಿಸಿದ್ದ 920ರೂ ಹಣವನ್ನು ಪೊಲೀಸರು ವಶಕ್ಕೆಪಡೆದು ಪ್ರಕರಣ ದಾಖಲಿಸಿದರು. ಕುಮಟಾದ ತದಡಿ ಬಳಿ ಅಂಗಡಿ ವ್ಯಾಪಾರ ಮಾಡುವ ದೇವಪ್ಪ ಮೂಡಂಗಿ ಅವರು ಜೈನ ಜಟಕಾ ದೇವಾಲಯ ಹತ್ತಿರ ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದರು. ಗೋಕರ್ಣ ಪಿಎಸ್‌ಐ ಶಶಿಧರ್ ಎಚ್ ಕೆ ಅವರ ಮೇಲೆ ದಾಳಿ ನಡೆಸಿದ್ದು, ಮಟ್ಕಾದಿಂದ ಸಂಗ್ರಹಿಸಿದ್ದ 1120ರೂ ಹಣ ವಶಕ್ಕೆಪಡೆದರು. ಜೊತೆಗೆ ದೇವಪ್ಪ ಅವರ ವಿರುದ್ಧ ಪ್ರಕರಣ ದಾಖಲಿಸಿದರು.

ಕಾರವಾರ ಪೊಲೀಸರ ಕಾರ್ಯಾಚರಣೆ
ಕಾರವಾರದ ಬಿಣಗಾದಲ್ಲಿ ಮಟ್ಕಾ ಆಡಿಸುತ್ತಿದ್ದ ಮಹಾಬಲೇಶ್ವರ ಗುನಗಿ ಮೇಲೆ ಪೊಲಿಸರು ದಾಳಿ ಮಾಡಿದರು. ಅಲ್ಲಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದ ಮಹಾಬಲೇಶ್ವರ ಗುನಗಿ ಮಟ್ಕಾ ಆಡಿಸುವುದನ್ನು ಪಿಎಸ್‌ಐ ನೇಹಾಲ್ ಖಾನ್ ಅವರು ಪತ್ತೆ ಹಚ್ಚಿದರು. ಬಿಣಗಾ ಗುನಗಿವಾಡ ರಸ್ತೆ ಬಳಿ ಸಿಕ್ಕ ಮಹಾಬಲೇಶ್ವರ ಗುನಗಿ ಅವರನ್ನು ತಡಕಾಡಿದಾಗ ಮಟ್ಕಾ ಚೀಟಿ ಜೊತೆ 885ರೂ ಹಣವೂ ಸಿಕ್ಕಿತು. ಹೀಗಾಗಿ ಅವರ ವಿರುದ್ಧವೂ ಪೊಲೀಸರು ಕಾನೂನು ಕ್ರಮ ಜರುಗಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page