ಶಿರಸಿಯ ರಾಗಿಬೈಲಿನ ಬಳಿ ನಡೆದ ಜಗಳದಲ್ಲಿ ಮಾತಿಗೆ ಮಾತು ಬೆಳೆದಿದ್ದು, ಈ ವೇಳೆ ಬೈಕು ಚರಂಡಿಗೆ ಬಿದ್ದಿದೆ. ಬೈಕನ್ನು ಚರಂಡಿಗೆ ದೂಡಿದ ದೇವು ಮರಾಠಿ 1 ಸಾವಿರ ರೂ ನಷ್ಠ ಭರಿಸದ ಕಾರಣ ಅವರ ವಿರುದ್ಧ ಕೃಷ್ಣ ಮರಾಠಿ ನ್ಯಾಯಾಲಯದ ಮೊರೆ ಹೋಗಿದ್ದಾರೆ!
ದೇವನಳ್ಳಿ ಬಳಿಯ ಬೆಣಗಾವಿನ ಹಾಡಗೇರಿ ಕೃಷ್ಣ ಮರಾಠಿ ಅವರು ಆಗಾಗ ತಮ್ಮ ಬಾವ ಸೀತಾರಾಮ ಮರಾಠಿ ಅವರ ಬೈಕ್‌ಪಡೆದು ತಿರುಗಾಡುತ್ತಿದ್ದರು. ಅದರಂತೆ ಜೂನ್ 19ರ ರಾತ್ರಿ ಅವರು ಬಾವನ ಬೈಕ್‌ಪಡೆದು ದೇವನಳ್ಳಿ ರಾಗಿಬೈಲಿಗೆ ಹೋಗಿದ್ದರು. ಅಲ್ಲಿ ಮುಂಡಗೋಡು ಬೆಡಸಗಾವಿನ ಕಲಕೊಪ್ಪದ ಸಾನವಳ್ಳಿ ರವಿ ಮರಾಠಿ ಎದುರಾದರು.
ಆಗ, ಅವರಿಬ್ಬರ ನಡುವೆ ಜಗಳ ಶುರುವಾಯಿತು. ಸಿಟ್ಟಾದ ರವಿ ಮರಾಠಿ ಅವರು ಕೃಷ್ಣ ಮರಾಠಿ ಅವರ ಬೈಕನ್ನು ಹಿಡಿದು ದೂಡಿದರು. ಆ ಬೈಕು ಚರಂಡಿಗೆ ಬಿದ್ದು ಹಾನಿಗೊಳಗಾಯಿತು. ಬೈಕಿಗೆ ಹಾನಿ ಮಾಡಿದಕ್ಕೆ 1 ಸಾವಿರ ರೂ ಕೊಡಬೇಕು ಎಂದು ಕೃಷ್ಣ ಮರಾಠಿ ಕೇಳಿದರು. ಅದಕ್ಕೆ ರವಿ ಮರಾಠಿ ಒಪ್ಪಲಿಲ್ಲ.
ಹೀಗಾಗಿ ಬಾವನ ಬೈಕು ಹಾಳು ಮಾಡಿದ ರವಿ ಮರಾಠಿ ವಿರುದ್ಧ ಶಿರಸಿ ಗ್ರಾಮೀಣ ಠಾಣೆ ಪೊಲೀಸರಿಗೆ ದೂರು ನೀಡಿದರು. ಸಣ್ಣ ಸಣ್ಣ ವಿಷಯಕ್ಕೆ ಪ್ರಕರಣ ದಾಖಲಿಸಿ ಇಬ್ಬರ ನಡುವಿನ ವೈಮನಸ್ಸು ದೊಡ್ಡದು ಮಾಡುವುದು ಬೇಡ ಎಂದು ನಿರ್ಧರಿಸಿದ ಪೊಲೀಸರು ಅವರನ್ನು ಸಮಾಧಾನ ಮಾಡಿ ಕಳುಹಿಸುವ ಪ್ರಯತ್ನ ನಡೆಸಿದರು.
ಆದರೆ, ಇದಕ್ಕೆ ಒಪ್ಪದ ಕೃಷ್ಣ ಮರಾಠಿ ನ್ಯಾಯಾಲಯದ ಮೊರೆ ಹೋದರು. ಅಲ್ಲಿ ನ್ಯಾಯಾಧೀಶರ ಮನವೊಲೈಸಿ ರವಿ ಮರಾಠಿ ವಿರುದ್ಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. `ಬೈಕ್ ಚರಂಡಿಗೆ ಬಿದ್ದ ಪರಿಣಾಮ 1 ಸಾವಿರ ರೂ ಹಾನಿಯಾಗಿದೆ’ ಎಂದು ಕೃಷ್ಣ ಮರಾಠಿ ದೂರಿದ್ದಾರೆ.