ಕಾರವಾರದ ತಹಶೀಲ್ದಾರ್ ಕಚೇರಿ ಎದುರು ಶನಿವಾರ ಅಕ್ಕ ಕಫೆ ಉದ್ಘಾಟನೆಯಾಗಿದೆ. ಮಹಿಳೆಯರು ಸಿದ್ಧಪಡಿಸಿದ ಮನೆ ಅಡುಗೆಯ ಸವಿ ಇಲ್ಲಿ ಸಿಗಲಿದೆ.
ಸಂಜೀವಿನಿ ಯೋಜನೆ ಅಡಿ ನೋಂದಣಿಯಾದ ಮಹಿಳಾ ಸ್ವ ಸಹಾಯ ಗುಂಪುಗಳ ಸದಸ್ಯರಿಗೆ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಸರ್ಕಾರ `ಅಕ್ಕ ಕಫೆ’ ನಿರ್ಮಿಸಿದೆ. ಶುಚಿ-ಋಚಿಯಾದ ಪೌಷ್ಠಿಕ ಆಹಾರ ಪೂರೈಕೆಯ ಜೊತೆ ಉತ್ತಮ ಜೀವನ ಕಟ್ಟಿಕೊಳ್ಳಲು ಈ ಯೋಜನೆ ಮಹಿಳೆಯರಿಗೆ ನೆರವಾಗಲಿದೆ. ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಬಯಸುವವರಿಗೆ ಅಕ್ಕ ಕಫೆ ಕೈ ಬೀಸಿ ಕರೆಯುತ್ತದೆ.
ತಾಲೂಕಾ ಸಂಜೀವಿನಿ ಒಕ್ಕೂಟದ ಮುಖಾಂತರ ಆಯ್ಕೆಯಾದ ಸಿದ್ಧಿವಿನಾಯಕ ಸ್ವಸಹಾಯ ಗುಂಪಿನ ಸದಸ್ಯರು ಅಕ್ಕ ಕಫೆಯ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ. ಕಾರವಾರದ ಅಕ್ಕ ಕೆಫೆಯಲ್ಲಿ ಕರಾವಳಿ ಶೈಲಿಯ ಶಾಖಾಹಾರಿ ಖಾದ್ಯ ಸಿಗುತ್ತದೆ. ಜೊತೆಗೆ ವಿಶೇಷ ಮೀನು ಆಹಾರವನ್ನು ತಯಾರಿಸಲಾಗುತ್ತದೆ. ಮಾಂಸಪ್ರಿಯರಿಗೆ ಸಹ ಇಲ್ಲಿ ಮೋಸವಿಲ್ಲ. ಬ್ಯಾಂಕ್ ಸಾಲ ಸೌಲಭ್ಯಪಡೆದು ಕ್ಯಾಂಟೀನ್ ನಡೆಸುತ್ತಿರುವ ಸ್ವಸಹಾಯ ಸಂಘದವರು ಗುಣಮಟ್ಟದ ಸೇವೆಯ ಶಪಥ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಶನಿವಾರ ಅಕ್ಕ ಕಫೆಗೆ ಭೇಟಿ ನೀಡಿದರು. ಕ್ಯಾಂಟೀನ್ ಸೇವೆಯನ್ನು ಅವರು ಉದ್ಘಾಟಿಸಿದರು. ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ, ಜಿ ಪಂ ಸಿಇಓ ಈಶ್ವರ ಕಾಂದೂ,ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಪ್ರೋಬೇಷನರಿ ಐಎಎಸ್ ಅಧಿಕಾರಿ ಝುಪಿಶಾನ್ ಹಕ್, ತಹಶೀಲ್ದಾರ ನಿಶ್ಚಲ್ ನರೋನ್ಹಾ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸೋಮಶೇಖರ್ ಮೇಸ್ತಾ ಜೊತೆಗಿದ್ದರು.
ಅಕ್ಕ ಕಫೆಯಲ್ಲಿ ಏನೇನು ಸಿಗುತ್ತದೆ? ಯಾವ ತಿನಿಸಿಗೆ ಯಾವ ದರ? ಮಾಹಿತಿ ಇಲ್ಲಿದೆ ನೋಡಿ..