ಕಾರವಾರದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯವರು ಅಸ್ನೋಟಿ ಶಿವಾಜಿ ಮಂದಿರ ಆವರಣದಲ್ಲಿ ಪರಿಸರ ದಿನಾಚರಣೆ ಆಯೋಜಿಸಿದ್ದು, ಈ ವೇಳೆ ಭಾಗವಹಿಸಿದ ಗಣ್ಯರು `ಗಿಡ ನೆಟ್ಟು ಬರ ಓಡಿಸಿ’ ಎಂಬ ಸಂದೇಶ ಸಾರಿದರು.
ಸಮಾಜ ಸೇವಕ ದೇವಿದಾಸ ನಾಯ್ಕ ಅವರು ಕಾರ್ಯಕ್ರಮ ಉದ್ಘಾಟಿಸಿದರು. `ಪರಿಸರ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರಬೇಕು. ಪೃಕೃತಿ ರಕ್ಷಣೆಯಲ್ಲಿ ನಾವೆಲ್ಲರೂ ಕೈ ಜೋಡಿಸಬೇಕು’ ಎಂದು ಅವರು ಕರೆ ನೀಡಿದರು. ಧರ್ಮಸ್ಥಳ ಸಂಘದ ಸದಾಶಿವಗಡ ವಲಯದ ಮೇಲ್ವಿಚಾರಕ ಮಾರುತಿ ನಾಯಕ ಅವರು ಸಂಘದಿoದ ವಿದ್ಯಾರ್ಥಿಗಳಿಗೆ ಸಿಗುವ ಸೌಕರ್ಯದ ಬಗ್ಗೆ ವಿವರಿಸಿದರು.
ಕೃಷಿ ಅಧಿಕಾರಿ ಪ್ರಭಾಕರ ಗೌಡ ಅವರು `ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ವಲಯಕ್ಕೆ ಒತ್ತು ನೀಡಿದೆ’ ಎಂದರು. ಅಸ್ನೋಟಿ ಶಿವಾಜಿ ಮಂದಿರದ ಮುಖ್ಯಾಧ್ಯಾಪಕ ಗಣೇಶ ಬಿಷ್ಟಣ್ಣನವರ ಅವರು `ಕಳೆದ 18 ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಾಲೆಗಳಿಗೆ ಹಲವಾರು ಅನುಕೂಲತೆ ಮಾಡಿಕೊಟ್ಟಿದೆ. ಪರಿಸರ ಸ್ಪರ್ಧೆಗಳು ಸಹ ಪ್ರೇರಣಾದಾಯಕವಾಗಿದೆ’ ಎಂದರು. ಪ್ರಮುಖರಾದ ದಿವ್ಯಾ ದೇವಿದಾಸ ನಾಯ್ಕ, ಸೈದಮ್ಮ ನದಾಫ್ ವೇದಿಕೆಯಲ್ಲಿದ್ದರು.
ಪ್ರಬಂಧ, ಚಿತ್ರಕಲೆ, ಎಲೆ ಗುರುತಿಸುವಿಕೆ ಸ್ಪರ್ಧೆಯಲ್ಲಿ ವಿಜೇತರಾದ ಅಶ್ವಿತಾ ದೇಸಾಯಿ,ಪ್ರೀಯಾ ಬಿರಂಗತ, ಬಿಸ್ಮಿಲ್ಲಾ ನದಾಫ್, ಸ್ಪಂದನಾ ಬಿಕ್ಕಜ್ಜಿ, ಮಾದೇವಿ ವೇಳಿಫ, ಸುಷ್ಮೀತಾ ಬಾಂದೋಲಕರ, ವರ್ಷಾ ಬಾಗಲದವರ, ಸಂಚಿತಾ ಪಡವಳಕರ, ವರ್ಷಿಣಿ ಕಿಲಾರಿ, ಅಕ್ಷತಾ ಕುಂಟಗೌಡ್ರ, ಅನು ಕುಂಟಗೌಡ್ರ ಬಹುಮಾನ ಸ್ವೀಕರಿಸಿದರು. ಸೋನಾಲಿ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕರಾದ ವಿಜಯಕುಮಾರ್ ನಾಯ್ಕ ಹಾಗೂ ಜೆ ಬಿ ತಿಪ್ಪೇಸ್ವಾಮಿ ಕಾರ್ಯಕ್ರಮದ ಜವಾಬ್ದಾರಿ ನಿಭಾಯಿಸಿದರು.