6 Skip to content

ಇದ್ದಕ್ಕಿದ್ದಂತೆ ಮಾಯವಾಯ್ತು ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ

ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಇದ್ದಕ್ಕಿದ್ದಂತೆ ಮಾಯವಾದ ಬಗ್ಗೆ ಹಳಿಯಾಳದ ಗೋಪಾಲ ಭಾಗ್ವತಕರ ಎಂಬವರು ಹಳಿಯಾಳ ಠಾಣೆಯಲ್ಲಿ ದೂರು ನೀಡಿದ್ದಾರೆ.

ಶೇಖನಕಟ್ಟಾದ ಗೋಪಾಲ ಅವರು ಹಳಿಯಾಳದ ಎಸ್.ಬಿ.ಐ ಶಾಖೆಯಲ್ಲಿ ಖಾತೆ ಹೊಂದಿದ್ದು, ಅದರಲ್ಲಿ 1.65 ಲಕ್ಷ ರೂ ಹಣವಿತ್ತು. ಅದರಲ್ಲಿ 1.46 ಲಕ್ಷ ರೂ ಹಣವನ್ನು ಅವರಿಗೆ ಗೊತ್ತಾಗದಂತೆ ಯಾರೋ ವರ್ಗಾವಣೆ ಮಾಡಿಕೊಂಡಿದ್ದಾರೆ.

 

ಅದು ವರ್ಗಾವಣೆ ಆದ ಬಗ್ಗೆ ಗೋಪಾಲ ಅವರ ಮೊಬೈಲ್ ಗೆ ಯಾವುದೇ ಮೆಸೆಜ್ ಸಹ ಬಂದಿರಲಿಲ್ಲ. ಹಾಗಾಗಿ ಹಣ ಮಾಯವಾದ ವಿಚಾತ ಅವರಿಗೆ ತಿಳಿದಿರಲಿಲ್ಲ.‌

‌ ಸ್ನೇಹಿತರೊಬ್ಬರಿಗೆ ಫೋನ್ ಪೇ ಮಾಡುವ ಸಂದರ್ಭ, ಮಾಡಲು ಸಾಧ್ಯವಾಗದೇ ಇದ್ದಾಗ ಖಾತೆಯಲ್ಲಿ ಹಣ ಇಲ್ಲವಾಗಿರು ಅನುಮಾನ ಬಂದಿದೆ.‌ ಬ್ಯಾಂಕ್ ಗೆ ಹೋಗಿ ವಿಚಾರಿಸಿದಾಗ ಹಣ ವರ್ಗಾವಣೆಗೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಹಳಿಯಾಳ ಠಾಣೆಗೆ ದೂರಿದ್ದು ಪ್ರಕರಣ ದಾಖಲಾಗಿದೆ.

You cannot copy content of this page