6 Skip to content

ಉಚಗೇರಿ-ಚಿಪಗೇರಿಯಲ್ಲಿ ಗಜಾನನೋತ್ಸವದ ರಜತ ಸಂಭ್ರಮ

ಯಲ್ಲಾಪುರ ತಾಲೂಕಿನ ಉಚಗೇರಿ-ಚಿಪಗೇರಿಯಲ್ಲಿ 25 ನೇ ವರ್ಷದ ಸಾರ್ವಜನಿಕ ಗಜಾನನೋತ್ಸವದ ಪ್ರಯುಕ್ತ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.
ಗಣೇಶೋತ್ಸವ ಸೆ.2 ರಂದು ಸಮಾರೋಪಗೊಳ್ಳಲಿದೆ.

ಅಂದು ಸಂಜೆ 5 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಾರಾಯಣ ಚಿಪಗೇರಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಶಿವರಾಮ ಹೆಬ್ಬಾರ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

ಗುತ್ತಿಗೆದಾರ ಕಲ್ಲಪ್ಪ ಮುಂಡಗೋಡ, ಬನಶಂಕರಿ ಗ್ರುಪ್ ನ ಹನುನಂತ, ನಿರಂಜನ ಗೌಡ ಅಟಬೈಲು, ರಾಮಾ ಸಿದ್ದಿ, ಗುತ್ತಿಗೆದಾರರಾದ ಸದಾನಂತ ಮೊಗೇರ, ಕುಪ್ಪಯ್ಯ ಶೇರುಗಾರ, ಗ್ರಾ.ಪಂ ಸದಸ್ಯರಾದ ದಾಕ್ಲು ಪಾಟೀಲ, ನಿರ್ಮಲಾ ನಾಯ್ಕ, ಮಾಸ್ತ್ಯಪ್ಪ ಮಡಿವಾಳ ಪಾಲ್ಗೊಳ್ಳುವರು.

ಇದೇ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರ, ತ್ರ್ಯಂಬಕ ಭಟ್ಟ, ಡಾ.ಎಂ.ಎಸ್.ಭಟ್ಟ ಮಾರಿಗೋಳಿ, ಎಚ್.ಪಿ.ಹೆಗಡೆ, ಸುಧೀರ ಶ್ಯಾನುಭೋಗ, ಎಂಎಸ್.ಹೆಗಡೆ ಉಚಗೇರಿ, ಎಂ.ಕೆ.ಹೆಗಡೆ ಚಿಪಗೇರಿ, ಪತ್ರಕರ್ತ ಸಿ.ಆರ್.ಶ್ರೀಪತಿ ಹಾಗೂ ಸಾರ್ವಜನಿಕ ಗಜಾನನೋತ್ಸವ ಸಮಿತಿಯ ಮಾಜಿ ಸದಸ್ಯರನ್ನು ಸನ್ಮಾನಿಸಲಾಗುವುದು.

You cannot copy content of this page