6

ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್: ಹಲವು ಪ್ರಕರಣಗಳು ಇತ್ಯರ್ಥ

ಯಲ್ಲಾಪುರ ನ್ಯಾಯಾಲಯದ ಆವಾರದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು.

ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ.ಎಸ್ ಅವರ ಸಮ್ಮುಖದಲ್ಲಿ ದಾಖಲಾಗಿದ್ದ 44 ಪ್ರಕರಣಗಳಲ್ಲಿ 23 ಪ್ರಕರಣಗಳು ಇತ್ಯರ್ಥಗೊಂಡು, 78.56 ಲಕ್ಷ ರೂ ಭರಣವಾಯಿತು. ಸಂಧಾನಕಾರರಾಗಿ ರವಿ ಶಿವನಗೌಡ ಪಾಟೀಲ ಕಾರ್ಯನಿರ್ವಹಿಸಿದರು.

ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಅನಿತಾಕುಮಾರಿ ಎಸ್ ಅವರ ಸಮ್ಮುಖದಲ್ಲಿ 215 ಪ್ರಕರಣಗಳು ದಾಖಲಾಗಿದ್ದು, 187 ಪ್ರಕರಣಗಳು ಇತ್ಯರ್ಥಗೊಂಡು 6.22 ಕೋಟಿ ರೂ ಭರಣವಾಯಿತು.‌ ಸಂಧಾನಕಾರರಾಗಿ ಬಿ.ಬಿ.ಅಮೀನಾ ಶೇಖ್ ಕಾರ್ಯನಿರ್ವಹಿಸಿದರು. 396 ಬ್ಯಾಂಕ್ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 7 ಪ್ರಕರಣಗಳು ಇತ್ಯರ್ಥಗೊಂಡು, 7.80 ಲಕ್ಷ ರೂ ಭರಣವಾಯಿತು.

ವಕೀಲರ ಸಂಘದ ಅಧ್ಯಕ್ಷ ವಿ.ಟಿ.ಭಟ್ಟ, ಅಪರ ಸರ್ಕಾರಿ ವಕೀಲ ಎನ್.ಟಿ.ಗಾಂವ್ಕರ, ಸಹಾಯಕ ಸರ್ಕಾರಿ ಅಭಿಯೋಜಕರಾದ ಝೀನತ್ ಬಾನು ಶೇಖ್ ಇತರರಿದ್ದರು.

 

ಫೊಟೊ- 13 ವಾಯೆಲ್ಪಿ 07- ಯಲ್ಲಾಪುರದ ನ್ಯಾಯಾಲಯದ ಆವಾರದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ. ಎಸ್, ಸಿವಿಲ್ ನ್ಯಾಯಾಧೀಶರಾದ ಅನಿತಾಕುಮಾರಿ ಎಸ್, ಸಂಧಾನಕಾರರಾದ ಬಿ.ಬಿ.ಅಮೀನಾ ಶೇಖ್, ರವಿ ಶಿವನಗೌಡ ಪಾಟೀಲ ಇತರರಿದ್ದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page