6

ಪೂಜೆಯ ಮಾರನೇ ದಿನವೇ ಬೈಕ್ ಸವಾರರ ಮೇಲೆರಗಿದ ಹುಲಿಯಪ್ಪ

ದೀಪಾವಳಿ ಪ್ರಯುಕ್ತ ಹುಲಿಯಪ್ಪನಿಗೆ ಪೂಜೆ ಸಲ್ಲಿಸಿದ ಮಾರನೇ ದಿನವೇ ಹುಲಿಯಪ್ಪನ ದಾಳಿಯಿಂದ ಇಬ್ಬರು ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಮಾಗೋಡ ಸಮೀಪದ ಚಂದಗುಳಿ ಬಳಿ ನಡೆದಿದೆ.

ಮಾಗೋಡಿನ ಬಕ್ಕಳತಗ್ಗಿನ ಗಣೇಶ ಸಿದ್ದಿ ಹಾಗೂ ದೇಸಾಯಿಮನೆಯ ಧನಂಜಯ ಸಿದ್ದಿ ಎಂಬವರು ಬೈಕ್ ಮೇಲೆ ಮಂಗಳವಾರ ರಾತ್ರಿ ಚಂದಗುಳಿ ಹತ್ತಿರ ಬರುತ್ತಿರುವಾಗ, ಮರಿಗಳೊಂದಿಗೆ ಬರುತ್ತಿದ್ದ ಹುಲಿಯೊಂದು ಏಕಾಏಕಿ ಇವರ ಮೇಲೆ ಎರಗಿದೆ. ಇದರಿಂದ ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ಧನಂಜಯ ಅವರ ಕಾಲಿಗೆ ಹುಲಿಯ ಉಗುರು ತಾಗಿ ಗಾಯವಾಗಿದೆ.

ಹುಲಿ ಎರಗಿದದ್ದರಿಂದ ಬೈಕ್ ನಿಯಂತ್ರಣ ತಪ್ಪಿ ಇಬ್ಬರೂ ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಬೈಕ್ ಬೀಳುತ್ತಿದ್ದಂತೆ ಹುಲಿ ಮರಿಗಳೊಂದಿಗೆ ಅಲ್ಲಿಂದ ಹೋಗಿದೆ.

ಕಳೆದ ಎರಡು ವರ್ಷಗಳಿಂದ ಹುಲಿ ದಾಳಿಯಿಂದ ಭಯದಲ್ಲೇ ಬದುಕುತ್ತಿದ್ದ ಮಾಗೋಡ ಭಾಗದ ಜನತೆ, ಇತ್ತೀಚೆಗೆ ಹುಲಿಗಳ ಓಡಾಟ ಕಡಿಮೆಯಾದ ಕಾರಣ ಸ್ವಲ್ಪ ನಿರಾಳರಾಗಿದ್ದರು. ಈಗ ಹುಲಿ ದಾಳಿಯಿಂದ ಮತ್ತೆ ಕಂಗಾಲಾಗುವಂತಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಹುಲಿ ದಾಳಿಯಿಂದ ಜನ, ಜಾನುವಾರುಗಳನ್ನು ರಕ್ಷಿಸಲು ಕ್ರಮಕ್ಕೆ ಮುಂದಾಗಬೇಕಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page