ಅಂಕೋಲಾ: ತದಡಿ – ಅಘನಾಶಿನಿ ನಡುವೆ ಸಂಚರಿಸುವ ಬಾರ್ಜಿನಲ್ಲಿ ಸಾಮರ್ಥ್ಯಕ್ಕಿಂತಲೂ ಅಧಿಕ ಪ್ರಯಾಣಿಕರನ್ನು ಸಾಗಿಸಲಾಗುತ್ತಿದೆ. ಪ್ರಯಾಣಿಕರಿಗೆ ಇಲ್ಲಿ ಯಾವುದೇ ಸುರಕ್ಷತೆ ಸಹ ಇಲ್ಲ. ಶಿಥಿಲಗೊಂಡ ಈ ಬೋಟಿನಲ್ಲಿ ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಕರನ್ನು ಸಾಗಿಸದಂತೆ ಕರಾವಳಿ ಕಾವಲು ಪಡೆಯ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಬಾರ್ಜಿನಲ್ಲಿ ಜನ ಪ್ರಯಾಣಿಸುತ್ತಿರುವ ವೇಳೆ ಅಲ್ಲಿಗೆ ಭೇಟಿ ನೀಡಿದ ಕರಾವಳಿ ಕಾವಲು ಪಡೆಯ ಕುಮಟಾ ಪಿಸೈ ಅನೂಪ ನಾಯಕ ಬಾರ್ಜಿನ ಸ್ಥಿತಿಗತಿ ಪರಿಶೀಲಿಸಿದರು. ಬೋಟ್ ಸಂಪೂರ್ಣ ಹಾಳಾದ ಸ್ಥಿತಿಯಲ್ಲಿರುವುದನ್ನು ಅರಿತ ಅವರು ಪ್ರಯಾಣಿಕರ ಸುರಕ್ಷತೆ ಬಗ್ಗೆ ಕಾಳಜಿವಹಿಸಿದರು. ಅಲ್ಲಿನ ಸಿಬ್ಬಂದಿಗೆ ಈ ಬಗ್ಗೆ ಎಚ್ಚರಿಕೆಯನ್ನು ನೀಡಿದರು. `ಈ ಹಿಂದೆ ಅಪಾಯ ಇರುವ ಬಗ್ಗೆ ಸೂಚನೆ ನೀಡಿದ್ದು, ಅದಾಗಿಯೂ ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಮನಹರಿಸಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಬಂದರು ಇಲಾಖೆಯವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.





Discussion about this post