ಯಲ್ಲಾಪುರ: `ಹರ ಘರ ತಿರಂಗಾ ಅಭಿಯಾನ’ದ (Tiranga abhiyan) ಅಂಗವಾಗಿ ಬಿಜೆಪಿಗರು ವಜ್ರಳ್ಳಿಯ ತೆಲಂಗಾರಿನಲ್ಲಿ `ಸ್ವಚ್ಛ ಭಾರತ’ದ ಕೆಲಸವನ್ನು ಮಾಡಿದರು.
ಮಂಗಳವಾರ ತೆಲಂಗಾರಿಗೆ ತೆರಳಿದ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಹಾಗೂ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಅವರ ತಂಡದವರು ಅಲ್ಲಿ ಸ್ಥಾಪಿಸಲಾದ ಭಗತ ಸಿಂಗ್ ಪುತ್ಥಳಿ ಸ್ವಚ್ಛಗೊಳಿಸಿದರು. ಈ ವೇಳೆ ಸುತ್ತಲಿನ ಪ್ರದೇಶದಲ್ಲಿ ಬಿದ್ದಿದ್ದ ತ್ಯಾಜ್ಯಗಳನ್ನು ಆರಿಸಿದರು.
ಇದಾದ ನಂತರ ಶಾಲಾ ಮಕ್ಕಳ ಜೊತೆಗೂಡಿ ಬಿಜೆಪಿ ಪ್ರಮುಖರು ಭಗತ ಸಿಂಗ ಪುತ್ಥಳಿಗೆ ಮಾಲಾರ್ಫಣೆ ಮಾಡಿದರು. `ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ `ಹರ ಘರ ತಿರಂಗಾ ಅಭಿಯಾನ’ ನಡೆಯುತ್ತಿದ್ದು ಇದರಲ್ಲಿ ಭಾಗಿಯಾಗಿರುವುದು ನಮ್ಮ ಹೆಮ್ಮೆ’ ಎಂದು ಹರಿಪ್ರಕಾಶ ಕೋಣೆಮನೆ ಅಭಿಪ್ರಾಯಪಟ್ಟರು.
ಪ್ರಮುಖರಾದ ಉಮೇಶ ಭಾಗ್ವತ, ವೆಂಕಟ್ರಮಣ ಬೆಳ್ಳಿ, ಜಿ ಎನ್ ಗಾಂವ್ಕರ್ ಸುಬ್ಬಣ್ಣ ಬೋಳ್ಮನೆ, ನವೀನ ಕಿರಗಾರೆ ದೀಪಕ ಭಟ್ಟ, ಸುರೇಶ ಮರಾಠಿ ಇತರರು ಇದ್ದರು.





Discussion about this post