6
  • Latest

ಗಂಡನಿಗೆ ಕೊಡಲ್ಲ ಗೃಹಲಕ್ಷ್ಮಿ ಹಣ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗಂಡನಿಗೆ ಕೊಡಲ್ಲ ಗೃಹಲಕ್ಷ್ಮಿ ಹಣ!

AchyutKumar by AchyutKumar
in ಸ್ಥಳೀಯ

`ಸರ್ಕಾರ ನೀಡುವ ಗೃಹಲಕ್ಷ್ಮಿ ಹಣ ಮಹಿಳೆಯರ ಉಪಯೋಗಕ್ಕಾಗಿದ್ದು, ಅದನ್ನೂ ಯಾವುದೇ ಕಾರಣಕ್ಕೂ ಗಂಡನಿಗೆ ಕೊಡಬೇಡಿ. ಈ ವಿಷಯಕ್ಕಾಗಿ ಗಂಡನ ಜೊತೆ ಜಗಳವನ್ನು ಮಾಡಬೇಡಿ’ ಎಂದು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಮಹಿಳೆಯರಿಗೆ ಕಿವಿಮಾತು ಹೇಳಿದ್ದಾರೆ. `ಗೃಹಲಕ್ಷ್ಮಿ ಹಣ ಗಂಡನಿಗೆ ಕೊಡುತ್ತೀರಾ? ಎಂದು ಆರ್ ವಿ ದೇಶಪಾಂಡೆ ಪ್ರಶ್ನಿಸಿದಾಗ `ಇಲ್ಲ’ ಎಂದು ಮಹಿಳೆಯರು ತಲೆ ಅಲ್ಲಾಡಿಸಿದರು.

ಯಲ್ಲಾಪುರದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು `ಸರ್ಕಾರ ಪ್ರತಿ ತಿಂಗಳು ನೀಡುವ ಹಣವನ್ನು ಮಕ್ಕಳ ಶಿಕ್ಷಣ, ಪೌಷ್ಠಿಕ ಆಹಾರ ಹಾಗೂ ವೈಯಕ್ತಿಕ ಕೆಲಸಗಳ ಈಡೇರಿಕೆಗೆ ಬಳಸಿಕೊಳ್ಳಿ’ ಎಂದು ಸಲಹೆ ನೀಡಿದರು. `ಹೆಣ್ಣು ಮಕ್ಕಳು ಅತ್ಯಂತ ಜಾಣರು. ಹೀಗಾಗಿ ಸರ್ಕಾರ ಅವರ ಕೈಗೆ ಮನೆಯ ಚಾವಿ ನೀಡಿದೆ. ಸರ್ಕಾರ ನೀಡುವ ಹಣವನ್ನು ಮಹಿಳೆಯರು ಸರಿಯಾದ ರೀತಿ ಬಳಸಿಕೊಳ್ಳಬೇಕು’ ಎಂದು ಕರೆ ನೀಡಿದರು. `ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಲಾಗಿದೆ. ಧರ್ಮಸ್ಥಳ ಸೇರಿ ಎಲ್ಲಾ ಪುಣ್ಯಕ್ಷೇತ್ರಗಳಿಗೆ ಓಡಾಡುವ ಮಹಿಳೆಯರು ಶಾಲಾ ಮಕ್ಕಳ ಬಗ್ಗೆ ಕಾಳಜಿ ಇರಬೇಕು. ಶಾಲಾ ಮಕ್ಕಳು ಬಂದಾಗ ಅವರಿಗೆ ಆಸನ ಬಿಟ್ಟುಕೊಡಬೇಕು’ ಎಂದು ಮನವಿ ಮಾಡಿದರು. `ಗೃಹಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ಬಿಲ್ ನೀಡಲಾಗಿದ್ದು, ಇದರಿಂದ ಅನೇಕರ ವಿದ್ಯುತ್ ಹೊರೆ ಕಡಿಮೆಯಾಗಿದೆ. ಉಚಿತ ಎಂದು ಅನಗತ್ಯವಾಗಿ ಯಾವುದನ್ನೂ ಬಳಸಬೇಡಿ’ ಎಂದು ಹೇಳಿದರು. `ಅನ್ನಭಾಗ್ಯ ಯೋಜನೆ ಅಡಿ 5 ಕೆಜಿ ಅಕ್ಕಿ ಕೊಡಲಾಗುತ್ತಿತ್ತು. ಯಾರೂ ಕೇಳದೇ ಇದ್ದರೂ ಸರ್ಕಾರ 10 ಕೆಜಿ ಅಕ್ಕಿಯನ್ನು ಸರ್ಕಾರ ನೀಡುತ್ತಿದೆ’ ಎಂದರು.

ಅಕ್ಕಿ ಹಣ ಬಂದಿಲ್ಲ!
ಈ ವೇಳೆ ನೆರೆದಿದ್ದ ಮಹಿಳೆಯರು `ಅಕ್ಕಿ ಹಣ ಬಂದಿಲ್ಲ’ ಎಂದು ತಿಳಿಸಿದ್ದು, `ಬ್ಯಾಂಕ್ ಸಮಸ್ಯೆಯಿಂದ ಹಣ ಜಮಾ ಆಗಿಲ್ಲ. ಸರ್ಕಾರದ ಹಣ ಬಂದೇ ಬರುತ್ತದೆ’ ಎಂದು ಭರವಸೆ ನೀಡಿದರು. `ಅಕ್ಕಿ ಹಣ ಬೇಕಾ ಬೇಡವಾ?’ ಎಂದು ಪ್ರಶ್ನಿಸಿದಾಗ ನೆರೆದಿದ್ದ ಮಹಿಳೆಯರು ಒಕ್ಕೂರಿಲನಿಂದ ಬೇಕು’ ಎಂದು ಕೂಗಿದರು.

ಶಾಸಕರಿಗೆ ಕಿವಿ ಕೇಳಲ್ವಂತೆ!
ಆರ್ ವಿ ದೇಶಪಾಂಡೆಯವರ ಮಾತಿನ ಮಧ್ಯೆ ನೆರೆದಿದ್ದ ವ್ಯಕ್ತಿಯೊಬ್ಬರು `ರೈತರ ಪಂಪ್‌ಸೆಟ್’ಗೆ ಆಧಾರ್ ಲಿಂಕ್ ಮಾಡುವ ನೆಪದಲ್ಲಿ ಹಣ ತುಂಬಿಸಿಕೊಳ್ಳುತ್ತಿದ್ದಾರೆ’ ಎಂದು ದೂರಿದರು. ಅದಕ್ಕೆ ಪ್ರತಿಕ್ರಿಯಿಸಿದ ಆರ್ ವಿ ದೇಶಪಾಂಡೆ `ನನಗೆ ಕೊಂಚ ಕಿವಿ ಮಂದವಾಗಿದೆ. ಸಭೆ ಮುಗಿದ ನಂತರ ಈ ಬಗ್ಗೆ ಚರ್ಚಿಸೋಣ’ ಎಂದರು.

ಯುವನಿಧಿಗೆ ಯುವಕರ ನಿರಾಸಕ್ತಿ
ಉತ್ತರ ಕನ್ನಡ ಜಿಲ್ಲೆಯಲ್ಲಿ 4070 ಜನ ಮಾತ್ರ ಯುವನಿಧಿ ಹಣ ಪಡೆಯುತ್ತಿದ್ದು, ಇಷ್ಟು ಕಡಿಮೆ ಪ್ರಮಾಣದ ಸಂಖ್ಯೆಯ ಬಗ್ಗೆ ಆರ್ ವಿ ದೇಶಪಾಂಡೆ ಅಚ್ಚರಿ ವ್ಯಕ್ತಪಡಿಸಿದರು. ಯಲ್ಲಾಪುರ ತಾಲೂಕಿನಲ್ಲಿ 213 ಯುವಕರಿಗೆ ಮಾತ್ರ ಈ ಹಣ ದೊರೆಯುತ್ತಿದೆ. ಜಿಲ್ಲೆಯಲ್ಲಿ ಯುವಕರಿಲ್ಲವೇ? ಎಂದು ಆರ್ ವಿ ದೇಶಪಾಂಡೆ ಪ್ರಶ್ನಿಸಿದರು. `ಗ್ಯಾರಂಟಿ ಸಮಿತಿಯಲ್ಲಿ 185 ಜನ ಸದಸ್ಯರಿದ್ದು ಅವರೆಲ್ಲರೂ ಸೇರಿ ಯುವಕರಿಗೆ ಯುವನಿಧಿಯ ಯೋಜನೆ ತಲುಪಿಸಬೇಕು’ ಎಂದು ಸೂಚಿಸಿದರು. `ಆರ್ಥಿಕವಾಗಿ ಸಬಲರಾಗಿದ್ದವರು ಈ ಯಾವುದೇ ಯೋಜನೆಗೆ ಅರ್ಜಿ ಹಾಕಬಾರದು’ ಎಂದವರು ಮನವಿ ಮಾಡಿದರು.

ಯೋಜನೆ ಬೇಡ ಎನ್ನುವವರೇ ದೊಡ್ಡವರು!
ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ `ಆರ್ಥಿಕವಾಗಿ ಸಬಲರಾಗಿದ್ದವರು ಈ ಯೋಜನೆ ಪಡೆಯಬಾರದು. ನಿಜವಾಗಿಯೂ ಬಡತನ ರೇಖೆಗಿಂತ ಕೆಳಗಿದ್ದವರು ಮಾತ್ರ ಈ ಯೋಜನೆ ಪಡೆಯಬೇಕು. ಎಲ್ಲರಿಗೂ ಫಲಾನುಭವಿ ಆಗುವ ಅರ್ಹತೆ ಇದೆ. ಆದರೆ, ನಾವು ಈ ಯೋಜನೆಗೆ ಅರ್ಹರೇ? ಎಂದು ಅವರೇ ನಿರ್ಣಯಿಸಿಕೊಳ್ಳಬೇಕು. ಸ್ವಯಂ ಪ್ರೇರಣೆಯಿಂದ ಯೋಜನೆ ಬಿಟ್ಟುಕೊಡುವವರೇ ದೊಡ್ಡವರು’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿ `ಕೊರೊನಾ ಹಾಗೂ ಆರ್ಥಿಕ ಸಂಕಷ್ಟದ ನಡುವೆಯೂ ಕಾಂಗ್ರೆಸ್ ನಾಯಕರು ಪಂಚ ಗ್ಯಾರಂಟಿಯ ನಿರ್ಣಯ ಕೈಗೊಂಡಿದ್ದು, ಸರ್ಕಾರ ರಚನೆಯಾದ 6 ತಿಂಗಳ ಒಳಗೆ ಪಂಚ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಅಧಿಕಾರಿಗಳು ಹಾಗೂ ಗ್ಯಾರಂಟಿ ಸಮಿತಿ ಸದಸ್ಯರು ಮನೆ ಮನೆಗೆ ತೆರಳಿ ಈ ಯೋಜನೆಯನ್ನು ಅರ್ಹರಿಗೆ ತಲುಪಿಸಬೇಕು’ ಎಂದರು. `ಸರ್ಕಾರಿ ಯೋಜನೆಯನ್ನು ಮನೆ ಮನೆಗೆ ಮುಟ್ಟಿಸುವುದು ಪುಣ್ಯದ ಕೆಲಸ. ಈ ಪುಣ್ಯದ ಕೆಲಸದಲ್ಲಿ ಗ್ಯಾರಂಟಿ ಸಮಿತಿ ಸದಸ್ಯರು ಭಾಗಿಯಾಗಬೇಕು’ ಎಂದು ಸೂಚಿಸಿದರು. `ಗ್ಯಾರಂಟಿ ಯೋಜನೆ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದಾಗ ವಿರೋಧ ಪಕ್ಷಗಳು ಸಾಕಷ್ಟು ಅಪಪ್ರಚಾರ ಮಾಡಿದ್ದರು. ಆದರೆ, ಸರ್ಕಾರ ರಚನೆಯಾದ ನಂತರ 56 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ಮೀಸಲಿಟ್ಟು ಸರ್ಕಾರ ನುಡಿದಂತೆ ನಡದಿದೆ’ ಎಂದರು.

ShareSendTweetShare
Previous Post

ಸುಟ್ಟು ಕರಕಲಾದ ದೇಹ: ರೈಲು ನಿಲ್ದಾಣದ ಬಳಿ ದೊರೆತ ಅಪರಿಚಿತ ಶವ

Next Post

ಸಮಸ್ಯೆ ಹೇಳಿ ಬೈಸಿಕೊಂಡ ಕಾಂಗ್ರೆಸ್ ಕಾರ್ಯಕರ್ತ!

Next Post

ಸಮಸ್ಯೆ ಹೇಳಿ ಬೈಸಿಕೊಂಡ ಕಾಂಗ್ರೆಸ್ ಕಾರ್ಯಕರ್ತ!

ನಾನು ನಂದಿನಿ.... ತಪ್ಪು ಮಾಡಿ ಸಿಕ್ಕಿ ಬಿದ್ದೀನಿ!

TSS | ಎಲ್ಲವೂ ಇಲ್ಲೆ: ಅವಧಿ ಮುಗಿದ ವಸ್ತುವಿಗೂ ಇಲ್ಲಿದೆ ಬೆಲೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.