ಕುಮಟಾ: ಹೊಸ ಬಸ್ ನಿಲ್ದಾಣದ ಬಳಿಯಿರುವ ಮಹಾಸತಿ ಸರ್ಕಲ್‌ನಲ್ಲಿರುವ `ನಂದಿನಿ’ ಹಾಲಿನ ಮಳಿಗೆಯಲ್ಲಿ ಅವಧಿ ಮುಗಿದ ಹಾಲು ಹಾಗೂ ಬಿಸ್ಕತ್ ಮಾರಾಟ ಮಾಡುತ್ತಿರುವುದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಪತ್ತೆ ಮಾಡಿದರು.
ಯಶ್ವಂತ ಶಾನಭಾಗ ಎಂಬಾತರು ಈ ಮಳಿಗೆ ನಡೆಸುತ್ತಿದ್ದು ಮಳಿಗೆಯಲ್ಲಿದ್ದವರಿಗೆ ಗ್ರಾಹಕ ಸುರಕ್ಷತೆಯ ಬಗ್ಗೆ ಪಾಠ ಮಾಡಿ ಎಚ್ಚರಿಕೆ ನೀಡಿದರು. ನಂತರ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡರು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಅಂಕಿತಾಧಿಕಾರಿ ರಾಜಶೇಖರ ಹಾಗೂ ಆಹಾರ ಸುಕರಕ್ಷತಾ ಅಧಿಕಾರಿ ಅರುಣ ಕಾಶಿ ಭಟ್ಟ ದಾಳಿ ನಡೆಸಿದಾಗ ಮಳಿಗೆಯ ಪ್ರಿಡ್ಜಿನಲ್ಲಿ ಅಗಸ್ಟ 1 ಮತ್ತು 2ನೇ ತಾರಿಕು ನಮೂದಿಸಿದ ಹಾಲಿನ ಪ್ಯಾಕೆಟ್ ಕಾಣಿಸಿದವು.
ನಂದಿನಿ ಬ್ಯಾಂಡಿನ ಕೌವ್ ಮಿಲ್ಕ್ ಎಂಟು ಪ್ಯಾಕ್, ಟೋನ್ಡ್ ಮಿಲ್ಕ್ 68 ಪ್ಯಾಕ್, ಶುಭಂ ಮಿಲ್ಕ್ 35 ಲೀಟರ್’ನ್ನು ಅವರು ವಶಕ್ಕೆ ಪಡೆದರು. ಯಾವುದೇ ಉತ್ಪನ್ನಕ್ಕೆ ಗರಿಷ್ಟ ಮಾರಾಟ ದರಕ್ಕಿಂತ (MRP) ಅಧಿಕ ಮೊತ್ತವನ್ನು ಪಡೆಯದಂತೆ ಅಲ್ಲಿನ ಸಿಬ್ಬಂದಿಗೆ ಸೂಚಿಸಿದರು.




