6
  • Latest
The farmer has no luck in marriage those girls are responsible for this death!

ಕೃಷಿಕನಿಗೆ ಇಲ್ಲ ವಿವಾಹ ಭಾಗ್ಯ: ಈ ಸಾವಿಗೆ ಆ ಹೆಣ್ಮಕ್ಕಳೇ ಹೊಣೆ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕೃಷಿಕನಿಗೆ ಇಲ್ಲ ವಿವಾಹ ಭಾಗ್ಯ: ಈ ಸಾವಿಗೆ ಆ ಹೆಣ್ಮಕ್ಕಳೇ ಹೊಣೆ!

AchyutKumar by AchyutKumar
in ಸ್ಥಳೀಯ
The farmer has no luck in marriage those girls are responsible for this death!

37 ವರ್ಷ ಕಳೆದರೂ ಮದುವೆಯಾಗದ ಕಾರಣ  ಜೊಯಿಡಾ ಚಾಂದೇವಾಡಿಯ ಬಾಲಚಂದ್ರ ಚೌದರಿ ಎಂಬಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದುವೆ ಮಾತುಕಥೆಗೆ ಬಂದ ಹೆಣ್ಮಕ್ಕಳು ಆತನಿಗೆ ನಿಂದಿಸುತ್ತಿರುವುದೇ ಆತ್ಮಹತ್ಯೆಗೆ ಮುಖ್ಯ ಕಾರಣ.

ಕೃಷಿ ಜೊತೆ ಪೇಂಟಿoಗ್ ಕೆಲಸವನ್ನು ಮಾಡುತ್ತಿದ್ದ ಬಾಲಚಂದ್ರ ಚೌದರಿಗೆ ಕಳೆದ 5 ವರ್ಷಗಳಿಂದ ಮದುವೆಗಾಗಿ ವಧು ಹುಡುಕಾಟ ನಡೆದಿತ್ತು. ಆತನ ತಂದೆ ಗಜಾನನ ಚೌದರಿ ಸಹ ಮಗನ ಮದುವೆಗೆ ಸಾಕಷ್ಟು ಓಡಾಟ ನಡೆಸಿದ್ದರು. ಹಲವು ಸಲ ಸಂಬoಧಿಕರ ಸಮ್ಮುಖದಲ್ಲಿ ಮದುವೆ ಮಾತುಕಥೆವರೆಗೆ ಬಂದಿತ್ತು. ಆದರೆ, ಮದುವೆಗೆ ಸಿದ್ಧವಾಗಿದ್ದ ಹುಡುಗಿಯರು ನಂತರ ಒಂದಿಲ್ಲೊoದು ಕಾರಣ ನೀಡಿ ಆತನನನ್ನು ನಿರಾಕರಿಸುತ್ತಿದ್ದರು.

`ತನ್ನ ವಯಸ್ಸಿನ ಎಲ್ಲರೂ ಮದುವೆ ಆಗಿ ಮಕ್ಕಳ ಜೊತೆ ಬದುಕುತ್ತಿದ್ದು, ತನಗೆ ಮಾತ್ರ ಮದುವೆ ಆಗಿಲ್ಲ’ ಎಂದು ಬಾಲಚಂದ್ರ ಚೌದರಿ ಎಲ್ಲಡೆ ಹೇಳಿಕೊಂಡಿದ್ದರು. ಕೆಲ ದಿನಗಳಿಂದ ಮದುವೆಯ ಬಗ್ಗೆ ಮಾತನಾಡಿದರೆ ಮುನಿಸಿಕೊಳ್ಳುತ್ತಿದ್ದರು. `ಬಾಲಚಂದ್ರನಿಗೆ ಮಾತ್ರ ಕಂಕಣ ಭಾಗ್ಯ ಕೂಡಿ ಬಂದಿಲ್ಲ’ ಎಂದು ಅವರ ತಂದೆ ಗಜಾನನ ಚೌದರಿ ಸಹ ಸಾಕಷ್ಟು ನೊಂದಿದ್ದರು. ಮತ್ತೆ ಹೆಣ್ಣು ನೋಡುವ ಬಗ್ಗೆ ಮಾತನಾಡಿದಾಗಲೆಲ್ಲ `ನನಗೆ ಮದುವೆಯೇ ಬೇಡ’ ಎಂದು ಹೇಳುವಷ್ಟರ ಮಟ್ಟಿಗೆ ಬಾಲಚಂದ್ರ ನೊಂದಿದ್ದರು.

ಸೆ 16ರಂದು ರಾಮನಗರದ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಬೈಕ್ ಏರಿ ಹೋದ ಬಾಲಚಂದ್ರ ಚೌದರಿ ಮಧ್ಯಾಹ್ನ ಊಟಕ್ಕೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಅವರ ತಂದೆ ಗಜಾನನ ಚೌದರಿ ಫೋನ್ ಮಾಡಿದ್ದು, ಆತ ಫೋನ್ ಸ್ವೀಕರಿಸಿಲ್ಲ. `ತನ್ನ ಮಗ ರಾಮನಗರದಲ್ಲಿರುವ ಸಂಬ0ಧಿ ವಿಠೋಭಾ ಚೌದರಿ ಮನೆಗೆ ಊಟಕ್ಕೆ ಹೋಗಿರಬೇಕು’ ಎಂದು ಗಜಾನನ ಚೌದರಿ ಅಲ್ಲಿ ಫೋನ್ ಮಾಡಿದ್ದರು. ಆದರೆ, ವಿಠೋಭಾ ಚೌದರಿ ಕುಟುಂಬದವರು ಸೆ 16ರಂದು ಗಣಪತಿ ವಿಗ್ರಹ ನೋಡುವುದಕ್ಕಾಗಿ ಬೆಳಗಾವಿಗೆ ಹೊರಟಿದ್ದರು. ರಾತ್ರಿ ಕಳೆದರೂ ಮಗ ಮನೆಗೆ ಬರದ ಕಾರಣ ಗಜಾನನ ಚೌದರಿ ಆತಂಕಗೊ0ಡಿದ್ದರು.

ಇದನ್ನೂ ಓದಿ: ಸಪ್ತಪದಿ ಸಡಗರಕ್ಕೆ ಸರ್ಕಾರವೇ ಸಾಕ್ಷಿ!

ಸೆ 17ರಂದು ಬೆಳಗ್ಗೆ ಗಜಾನನ ಚೌದರಿ ಅವರಿಗೆ ಫೋನ್ ಮಾಡಿದ ವಿಠ್ಠೋಬಾ ಚೌದರಿ ಲೋಂಡಾಗೆ ಬರುವಂತೆ ಕರೆದಿದ್ದು, ಅಲ್ಲಿ ಹೋಗಿ ನೋಡಿದಾಗ ಅರಣ್ಯ ಇಲಾಖೆ ನರ್ಸಿರಿ ಬಳಿ ಬಾಲಚಂದ್ರ ಚೌದರಿ ನೇಣಿಗೆ ಶರಣಾಗಿರುವುದು ಕಾಣಿಸಿತು. ಮಗನ ಶವದ ಎದುರು ತಂದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.

 

ShareSendTweetShare
Previous Post

ಬಡ ಬಲೆಗಾರರ ಮೇಲೆ ನೌಕಾನೆಲೆ ಬಾಣ

Next Post

ರಫಿಕ್ ಅಂಗಡಿ ಮೇಲೆ ಅಬ್ದುಲನ ಕಣ್ಣು: ಸಿಸಿ ಟಿವಿ ಒಡೆದು ಪರಾರಿ!

Next Post

ರಫಿಕ್ ಅಂಗಡಿ ಮೇಲೆ ಅಬ್ದುಲನ ಕಣ್ಣು: ಸಿಸಿ ಟಿವಿ ಒಡೆದು ಪರಾರಿ!

ಮಟ್ಕಾ ದಂಧೆಯಲ್ಲಿಯೂ ಭಾರೀ ಮೋಸ: ಕೂಲಿ ಕೆಲಸಗಾರರ ಮೇಲೆ ಪೊಲೀಸ್ ದಾಳಿ!

ಅಡಿಕೆ ಪ್ರದೇಶ ಸಹ ಹಸಿರು ಕಾಡು: ಕಸ್ತೂರಿ ರಂಗನ್ ವರದಿ ದೋಷಗಳ ಬಗ್ಗೆ ಸರ್ಕಾರಕ್ಕೆ ವರದಿ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.