6
  • Latest

ಶಾಲೆಗೆ ಹೋಗುವ ಮಕ್ಕಳಿಗೆ ನಿತ್ಯ `ಸಂಕ’ಟ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶಾಲೆಗೆ ಹೋಗುವ ಮಕ್ಕಳಿಗೆ ನಿತ್ಯ `ಸಂಕ’ಟ!

AchyutKumar by AchyutKumar
September 30, 2024
in ಸ್ಥಳೀಯ
advt advt advt
ADVERTISEMENT

ಧಾರಾಕಾರ ಮಳೆಯಲ್ಲಿ ಒಂದು ಕೈಯಲ್ಲಿ ಕೊಡೆ, ಇನ್ನೊಂದು ಕೈಯಲ್ಲಿ ಸಂಕದ ಹಿಡಿಕೆ ಹಿಡಿದು ಸರ್ಕಸ್ಸು ಮಾಡುತ್ತ ಶಾಲೆಗೆ ಬರುವ ಮಕ್ಕಳ ಅಳಲು ಆಲಿಸಿದವರಿಲ್ಲ. ಕಾರಣ ಆ ಮಕ್ಕಳಿಗೆ ಮತದಾನದ ಹಕ್ಕಿಲ್ಲ. ಊರಿನವರ ಧ್ವನಿ ಆಳುವವರಿಗೆ ಕೇಳುತ್ತಿಲ್ಲ!

ಯಲ್ಲಾಪುರ: ಹಿರಿಯಾಳ ಗ್ರಾಮದ ಬಾಳೆಕೊಡ್ಲುವಿನ ಮಕ್ಕಳು ಶಾಲೆಗೆ ಬರಬೇಕು ಎಂದರೆ ಹರಸಾಹಸ ಮಾಡಬೇಕು. ಮಾರ್ಗದ ನಡುವೆ ಇರುವ ಅಪಾಯಕಾರಿ ಕಾಲು ಸಂಕದ ಕಾರಣ ಶಾಲೆಗೆ ಹೋದ ಮಕ್ಕಳು ಮನೆಗೆ ಮರಳುವವರೆಗೆ ಪಾಲಕರಿಗೆ ನೆಮ್ಮದಿಯಿಲ್ಲ!

Advertisement. Scroll to continue reading.
ADVERTISEMENT
ADVERTISEMENT

ಹಿರಿಯಾಳ ಗ್ರಾಮಕ್ಕೆ ಅಡ್ಡಲಾಗಿ ಅಂದಾಜು 10 ಅಡಿ ಅಗಲದಲ್ಲಿ ಗುಮ್ಮಾನಿಮನೆ ಹಳ್ಳ ಹರಿಯುತ್ತದೆ. ಹಿರಿಯಾಳ ಗ್ರಾಮದ 9 ಮಕ್ಕಳು ನಿತ್ಯ ಈ ಹಳ್ಳ ದಾಟಿ ಶಾಲೆಗೆ ಬರುತ್ತಾರೆ. 4 ಮಕ್ಕಳು ಕಟ್ಟಿಗೆ ಪ್ರಾಥಮಿಕ ಶಾಲೆ ಹಾಗೂ 5 ವಿದ್ಯಾರ್ಥಿಗಳು ಬಿಸಗೋಡಿನ ಹೈಸ್ಕೂಲಿಗೆ ಹೋಗುತ್ತಾರೆ. ಹಿರಿಯಾಳ ಗ್ರಾಮದಲ್ಲಿ ಅಂದಾಜು 400 ಜನ ವಾಸವಾಗಿದ್ದು, ಈ ಭಾಗದವರ ಅನುಕೂಲಕ್ಕೆ ಪುಟ್ಟ ಸೇತುವೆ ನಿರ್ಮಿಸಬೇಕು ಎಂಬುದು ದಶಕಗಳ ಹಿಂದಿನ ಬೇಡಿಕೆ. ಆದರೆ, ಅದು ಈವರೆಗೂ ಈಡೇರಿಲ್ಲ.

Advertisement. Scroll to continue reading.

ಹಿರಿಯಾಳ ಗ್ರಾಮದ ಮಕ್ಕಳು ಈ ಸಂಕ ಬಿಟ್ಟು ಇನ್ನೊಂದು ದಾರಿ ಮೂಲಕವೂ ಶಾಲೆಗೆ ಬರಲು ಸಾಧ್ಯ. ಆದರೆ, ಆ ರಸ್ತೆ ಕಾಡಿನ ಕಾಲುದಾರಿ. ಕಾಲುದಾರಿ ಮುಗಿದ ನಂತರವೂ ಕಚ್ಚಾ ರಸ್ತೆಯಲ್ಲಿ ಸಂಚರಿಸುವುದು ಅನಿವಾರ್ಯ. ವನ್ಯಜೀವಿಗಳ ಹಾವಳಿಯಿಂದ ಕೂಡಿರುವ ಕಾಡಿನ ಕಾಲುದಾರಿಯಲ್ಲಿ ಸಣ್ಣ ಮಕ್ಕಳನ್ನು ಕಳುಹಿಸುವುದಕ್ಕಿಂತ ಅಪಾಯಕಾರಿಯಾದ ಕಾಲು ಸಂಕ ದಾಟಿಸುವುದೇ ಉತ್ತಮ ಎಂಬುದು ಆ ಭಾಗದ ಪಾಲಕರ ಅಭಿಪ್ರಾಯ.

ಇನ್ನೂ ಪ್ರತಿ ವರ್ಷ ಕಾಲು ಸಂಕ ಮಳೆಗೆ ಕೊಚ್ಚಿ ಹೋಗುವುದು ಸಾಮಾನ್ಯ. ಆಗ ಆ ಭಾಗದ ಕುಣುಬಿ ಮನೆಯವರು ಮತ್ತೆ ಸಂಕ ನಿರ್ಮಿಸುತ್ತಾರೆ. ಅಡಿಕೆ ಮರಗಳನ್ನು ಕಡಿದು ಅದಕ್ಕೆ ಕಾಡು ಬಳ್ಳಿಗಳನ್ನು ಕಟ್ಟಿ ದಾರಿ ಮಾಡಿಕೊಳ್ಳುತ್ತಾರೆ. `ಮಕ್ಕಳ ಸಮಸ್ಯೆ ಅರಿತಾದರೂ ಹಳ್ಳಕ್ಕೆ ಅಡ್ಡಲಾಗಿ ಪುಟ್ಟ ಸೇತುವೆ ನಿರ್ಮಿಸಬೇಕು’ ಎಂಬುದು ಅಲ್ಲಿನ ಮಹೇಶ ಕುಣಬಿ ಅವರ ಒತ್ತಾಯ.

ShareSendTweetShare
ADVERTISEMENT
Previous Post

ನೌಕರರ ಕ್ರೀಡಾಕೂಟ: ಹೊನ್ನಾವರ ಪ್ರಥಮ-ಸಿದ್ದಾಪುರ ದ್ವಿತೀಯ

Next Post

ಯಕ್ಷಶ್ರೀ: ನೋಡಲು ವಾಮನ.. ಯಕ್ಷಗಾನದ ಬಹುವಿಕ್ರಮ!

Next Post

ಯಕ್ಷಶ್ರೀ: ನೋಡಲು ವಾಮನ.. ಯಕ್ಷಗಾನದ ಬಹುವಿಕ್ರಮ!

Indifference of the authorities is injustice to the elderly

ಅಧಿಕಾರಿಗಳ ಅಸಡ್ಡೆಗೆ ವೃದ್ಧೆಗೆ ಅನ್ಯಾಯ: ವಂಶವೃಕ್ಷ ಪಡೆಯಲು ನಿತ್ಯ ಅಲೆದಾಟ!

ಜೋಪಾನ | ಹೃದಯದ ಮಾತು ಇಲ್ಲಿ ಕೇಳಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.