ಅಲ್ಲಿ ಕ್ರಿಕೆಟ್.. ಇಲ್ಲಿ ಬೆಟ್ಟಿಂಗ್: ಕಾಸಿನ ಬೇಟೆಗೆ ಹೋದವನ ಬಂಧನ!
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಮುಂಡಗೋಡಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಪಂಜಾಬಿನ ಛಂಡಿಗರದಲ್ಲಿರುವ ಮಹಾರಾಜ ಯಧುವೀರ ಸಿಂಗ್ ಸ್ಟೇಡಿಯಂ’ನಲ್ಲಿ ಕ್ರಿಕೆಟ್ ನಡೆಯುತ್ತಿದೆ. ರಾಜಸ್ಥಾನ ಹಾಗೂ ಪಂಚಾಬ್ ತಂಡದ ನಡುವೆ ನಡೆಯುವ ಹಣಾಹಣಿಯಲ್ಲಿ ಗೆಲ್ಲುವ ತಂಡದ ಅಂದಾಜಿನ ಮೇಲೆ ಮುಂಡಗೋಡು…
ಮನಸಿಗೆ ಬೇಸರ: ಕ್ರಿಮಿನಾಶಕ ಸೇವಿಸಿದ ರೆಸಾರ್ಟ ಕಾರ್ಮಿಕನ ಬದುಕು ಅಂತ್ಯ!
ಹೊನ್ನಾವರ ಆದಿತ್ಯ ನಾಯ್ಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನಸ್ಸಿಗೆ ಬೇಸರವಾಗಿರುವುದರಿಂದ ಅವರು ಕ್ರಿಮಿನಾಶಕ ಸೇವಿಸಿರುವ ಬಗ್ಗೆ ಹೇಳಿಕೆ ನೀಡಿದ್ದು, ಯಾವ ಕಾರಣಕ್ಕೆ ಬೇಸರವಾಯಿತು? ಎಂದು ಯಾರಿಗೂ ತಿಳಿಸಿಲ್ಲ. ಹೊನ್ನಾವರದ ಖಾರ್ವಾದ ನಾಥಗೇರಿಯಲ್ಲಿ ಆದಿತ್ಯ ನಾಯ್ಕ (34) ವಾಸವಾಗಿದ್ದರು. ಬಾಡದ ರೆಸಾರ್ಟಿನಲ್ಲಿ…
ಸಾಗವಾನಿ ಸಾಗಾಟ: ಮೂವರ ಸೆರೆ-ಇಬ್ಬರು ಪರಾರಿ!
ಯಲ್ಲಾಪುರದ ಇಡಗುಂದಿ ಅರಣ್ಯ ವ್ಯಾಪ್ತಿಯಲ್ಲಿ ಸಾಗವಾನಿ ಮರ ಕಡಿತ ಆರೋಪದ ಅಡಿ ಅರಣ್ಯ ಅಧಿಕಾರಿಗಳು ಮೂವರನ್ನು ವಶಕ್ಕೆಪಡೆದಿದ್ದಾರೆ. ಕಾಡಿನಲ್ಲಿದ್ದ ಮರ ಕಡಿತು ಸಾಗಿಸುವ ಪ್ರಯತ್ನದಲ್ಲಿದ್ದ ಮಹಾಬಲೇಶ್ವರ ಹರಿಕಂತ್ರ, ಸಂದೀಪ ನಾಯ್ಕ ಹಾಗೂ ಸುರೇಶ ಗೌಡ ಅವರ ವಿಚಾರಣೆ ಮುಂದುವರೆದಿದೆ. ಅಧಿಕಾರಿಗಳ ದಾಳಿಯ…
14 ವರ್ಷದ ಬಾಲಕನಿಗೆ ಸೊಂಕು: ಮಂಗನ ರೋಗಕ್ಕೆ ತತ್ತರಿಸಿದ ಮಾನವ!
ಸಿದ್ದಾಪುರದ ಕಾನಸೂರಿನಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ. ರೋಗ ಹರಡದಂತೆ ಮುನ್ನಚ್ಚರಿಕೆವಹಿಸಲು ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ. ಸಿದ್ದಾಪುರ ತಾಲೂಕಿನಲ್ಲಿ ಪ್ರತಿ ವರ್ಷವೂ ಮಂಗನ ಕಾಯಿಲೆ ಕಾಡಿಸುತ್ತಿದೆ. ಕೆಲ ತಿಂಗಳ ಹಿಂದೆ ಶಿರಸಿಯ ವ್ಯಕ್ತಿಯೊಬ್ಬರಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ಇದೀಗ ಈ ವರ್ಷ ಸಿದ್ದಾಪುರದಲ್ಲಿ ಮೊದಲ…
ಜಿಲ್ಲಾಡಳಿತದ ದಿಟ್ಟ ಹೆಜ್ಜೆ: ಕಡಲತೀರದ ಮೋಜು ಮಸ್ತಿಗೆ ಮೂಗುದಾರ!
ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡಲತೀರ, ರಾಷ್ಟ್ರೀಯ ಹೆದ್ದಾರಿ ಸೇರಿ ಸಾರ್ವಜನಿಕ ಪ್ರದೇಶದಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿದವರಿಗೆ ಜಿಲ್ಲಾಡಳಿತ ಚಾಟಿ ಬೀಸಿದೆ. ಫ್ಲೈ ಓವರ್ ಅಡಿಭಾಗ, ಸಮುದ್ರ ತೀರ ಹಾಗೂ ರಸ್ತೆ ಅಂಚಿನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದೆ.…
ಇದು ದೇಶವೇ ಖುಷಿಪಡುವ ಸುದ್ದಿ | ಕಾರವಾರಕ್ಕೆ ಬಂದ ರಕ್ಷಣಾ ಸಚಿವ: ಚೀನಾ ಹತ್ತಿಕ್ಕಲು ಭಾರತ ಸನ್ನಿದ್ಧ!
ಹಿಂದು ಮಹಾಸಾಗರ ವ್ಯಾಪ್ತಿಯಲ್ಲಿ ಚೀನಾ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಿದ್ದರಿಂದ ಭಾರತವೂ ಸಾಗರ ಕಾರ್ಯಾಚರಣೆಗೆ ಸಿದ್ಧವಾಗಿದೆ. 9 ಮಿತ್ರ ರಾಷ್ಟ್ರಗಳ ಒಡಗೂಡಿ ಭಾರತ ಈ ಕಾರ್ಯಾಚರಣೆ ನಡೆಸಲಿದ್ದು, ರಾಷ್ಟ್ರೀಯ ಸಾಗರ ದಿನ ಶನಿವಾರ ರಕ್ಷಣಾ ಸಚಿವ ರಾಜನಾಥ ಸಿಂಗ್ ಇದಕ್ಕೆ ಚಾಲನೆ ನೀಡಿದ್ದಾರೆ.…
ಜುಜುಬಿ ಕಾರಿಗಾಗಿ ತಾಯಿಯನ್ನೇ ದೂರ ಮಾಡಿದ ಮಗ!
ದಾಂಡೇಲಿಯ ಫೈರೋಜಾ ಅಲಿ ಅವರು ತಮ್ಮ ತಾಯಿ ರುಕ್ಸನಾ ಬೇಗಂ ಅವರ ಜೊತೆ ಮುನಿಸಿಕೊಂಡಿದ್ದಾರೆ. ಇದರೊಂದಿಗೆ `ತನ್ನ ಕಾರು ತನಗೆ ನೀಡದೇ ವಂಚಿಸಿದ್ದಾರೆ’ ಎಂದು ತಾಯಿ ರುಕ್ಸನಾ ಬೇಗಂ ಜೊತೆ ಅವರ ಗೆಳತಿಯ ಪುತ್ರ ಆಸೀಪ ಸೌದಗಾರ್ ವಿರುದ್ಧ ಪೊಲೀಸ್ ದೂರು…
ಮನುಷ್ಯನನ್ನು ಬಲಿಪಡೆದ ಹೊಲಕ್ಕೆ ಹಾಕಿದ ವಿದ್ಯುತ್!
ಮುಂಡಗೋಡದ ಮಾರುತಿ ಹರಿಜನ ಅವರು ಬೆಳೆ ರಕ್ಷಣೆಗೆ ಬಳಸಿದ ವಿದ್ಯುತ್ ಬಸವರಾಜ ಹರಿಜನ ಅವರ ಸಾವಿಗೆ ಕಾರಣವಾಗಿದೆ. ಮುಂಡಗೋಡಿನ ಓಣಿಕೇರಿಯ ಮಾರುತಿ ಹರಿಜನ ಅವರು ತಮ್ಮ ಹೊಲದಲ್ಲಿ ಗೋವಿನ ಜೋಳ ಬೆಳೆದಿದ್ದರು. ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವುದಕ್ಕಾಗಿ ಅವರು ಬೇಲಿ ನಿರ್ಮಿಸಿದ್ದರು.…
ದಾಂಡೇಲಿ ಪೆಪರ್ ಮಿಲ್: ಭದ್ರತೆ ಮೀರಿ ಒಳ ನುಗ್ಗಿದ ಕಳ್ಳರು!
ದಾಂಡೇಲಿಯ ವೆಸ್ಟಕೋಸ್ಟ್ ಪೆಪರ್ ಮಿಲ್ಲಿನಲ್ಲಿ ಕಳ್ಳತನ ನಡೆದಿದೆ. ಮೂವರು ಕಳ್ಳರು ತಮ್ಮ ಕೈ ಚಳಕ ಪ್ರದರ್ಶಿಸಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾರ್ಚ 31ರ ರಾತ್ರಿ 11ಗಂಟೆ ನಂತರ ಏಪ್ರಿಲ್ 1ರ 12.20ರವರೆಗೆ ದಾಂಡೇಲಿಯ ವೆಸ್ಟಕೋಸ್ಟ್ ಪೆಪರ್ ಮಿಲ್ಲಿನೊಳಗೆ ಪ್ರವೇಶಿದ ಕಳ್ಳರು ತಮ್ಮ…
ಮೊದಲ ಸಲ-ಮೊದಲ ಘಟಕ: ಕೆಲಸ ನಿಲ್ಲಿಸಿದ ಕೈಗಾ!
ಕಳೆದ ಮೂರು ದಶಕದಿಂದ ನಿರಂತರ ವಿದ್ಯುತ್ ಉತ್ಪಾದಿಸುತ್ತಿದ್ದ ಕೈಗಾ ಅಣು ವಿದ್ಯುತ್ ಸ್ಥಾವರದ ಒಂದನೇ ಘಟಕ ಇದೀಗ ತನ್ನ ಕಾರ್ಯ ಚಟುವಟಿಕೆ ನಿಲ್ಲಿಸಿದೆ. ರಿಯಾಕ್ಟರಿನ ಶೀತಕ ಕೊಳವೆಯನ್ನು ಹೊಸದಾಗಿ ಜೋಡಿಸುವುದಕ್ಕಾಗಿ ಅಣು ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಸದ್ಯ ಕೈಗಾ ಅಣು ವಿದ್ಯುತ್…















