ಬೀದಿ ನಾಯಿ ಕಾಟ: ಬೈಕಿನಿಂದ ಬಿದ್ದ ಮಹಿಳೆ ಸಾವು!
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಿಬ್ಬಂದಿ ಸುಮಾ ಮಡಿವಾಳ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಪ್ರಶಾಂತ ಮಡಿವಾಳ ಅವರು ಬೈಕ್ ಓಡಿಸುತ್ತಿದ್ದಾಗ ನಾಯಿ ಅಡ್ಡ ಬಂದಿದ್ದರಿoದ ಈ ಅವಘಡ ನಡೆದಿದೆ. ಕುಮಟಾ ತಾಲೂಕಿನ ಗುಡೇಅಂಗಡಿಯ ಸುಮಾ ಮಡಿವಾಳ (32) ಅವರು ಕುಮಟಾದ ಧರ್ಮಸ್ಥಳ ಗ್ರಾಮಾಭಿವೃದ್ದಿ…
ಕೈ ಕೊಟ್ಟ ಯುವತಿ: ಬೆಂಕಿಯಲ್ಲಿ ಬೆಂದ ಶವದ ಮೇಲೆ ನೂರು ಅನುಮಾನ!
ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ಸತೀಶನ ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತನ ಸಾವಿನಲ್ಲಿ ಅನುಮಾನವಿರುವುದಾಗಿ ಕುಟುಂಬದವರು ಪೊಲೀಸರಿಗೆ ಹೇಳಿದ್ದು, ಸಮಗ್ರ ತನಿಖೆಗಾಗಿ ಒತ್ತಾಯಿಸಿದ್ದಾರೆ. ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಬಳಿಯ ವಡೆಹೊಕ್ಕಳಿಯಲ್ಲಿ ಸತೀಶ ಕರಿಗಾರ (35) ಎಲೆಕ್ಟಿಕಲ್ ಕೆಲಸ ಮಾಡಿಕೊಂಡಿದ್ದರು. ಸತೀಶರನ್ನು…
ಸುಸಜ್ಜಿತ ಆಸ್ಪತ್ರೆ: 99 ವರ್ಷದ ಲೀಸ್’ಗೆ 15 ಎಕರೆ ಭೂಮಿಗೆ ಸಚಿವರ ಶಿಫಾರಸ್ಸು!
ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕಾಗಿ ಜಿ ಎನ್ ಹೆಗಡೆ ಟ್ರಸ್ಟ್’ಗೆ 99 ವರ್ಷದ ಅವಧಿಗೆ 15 ಎಕರೆ ಜಾಗ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಚಿವ ಮಂಕಾಳು ವೈದ್ಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕು…
ಬಿಸಿ ಬಿಸಿ ಇಡ್ಲಿ: ಇದುವೇ ನಂದಿನಿ ಹೊಟೇಲ್’ನ ಪ್ಲಾಸ್ಟಿಕ್ ಇಡ್ಲಿ!
ನಿಷೇಧಿತ ಪ್ಲಾಸ್ಟಿಕ್ ಬಳಸಿ ಇಡ್ಲಿ ತಯಾರಿಸುತ್ತಿದ್ದ ಹೊಟೇಲ್ ಮೇಲೆ ಶಿರಸಿ ನಗರಸಭೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿರಸಿ ನಗರದ ಹಲವು ಹೊಟೇಲ್‌ಗಳಲ್ಲಿ ಇಡ್ಲಿ ಪಾತ್ರೆಗೆ ಪ್ಲಾಸ್ಟಿಕ್ ಅಂಟಿಸಿ ಹಿಟ್ಟು ಬೇಯಿಸಲಾಗುತ್ತದೆ. ಇದರಿಂದ ಇಡ್ಲಿ ಪಾತ್ರೆಗೆ ಹಿಟ್ಟು ಅಂಟುವುದು ತಪ್ಪುತ್ತದೆ. ಜೊತೆಗೆ ಇಡ್ಲಿ…
ಕಳ್ಳರ ಕೈ ಸೇರಿದ ಕಾಡಿನ ಕ್ಯಾಮರಾ: ಹುಲಿ ಗಣತಿ ಕಾರ್ಯಕ್ಕೆ ಅಡ್ಡಿ!
ಹುಲಿ ಗಣತಿ ಕಾರ್ಯಕ್ಕಾಗಿ ಕಾಡಿನಲ್ಲಿ ಅಳವಡಿಸಿದ್ದ ಕ್ಯಾಮರಾವನ್ನು ಕಳ್ಳರು ದೋಚಿದ್ದಾರೆ. ಕಳೆದುಹೋದ ಕ್ಯಾಮರಾಗಾಗಿ ಕಾಡು ಪೂರ್ತಿ ಸುತ್ತಾಡಿದ ಅರಣ್ಯ ಸಿಬ್ಬಂದಿ ಕೊನೆಗೆ ಕಳ್ಳರ ಪತ್ತೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಜೊಯಿಡಾ ತಾಲೂಕಿನ ಕ್ಯಾಸಲರಾಕ್ ವನ್ಯಜೀವಿ ವಲಯದ ಆನಮೋಡು ಅರಣ್ಯದಲ್ಲಿ ಫೆ 24ರಂದು…
ಬಿಜೆಪಿ ಪ್ರತಿಭಟನೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿದ್ದರಾಮಯ್ಯಗೆ ದೂರು!
`ಪಂಚ ಗ್ಯಾರಂಟಿ ಯೋಜನೆ ಮೂಲಕ ಅಧಿಕಾರ ಹಿಡಿದ ಕಾಂಗ್ರೆಸ್ ಸರ್ಕಾರ ಬಿ ಆರ್ ಅಂಬೇಡ್ಕರ್ ಅವರ ಆಶಯಗಳನ್ನು ಗಾಳಿಗೆ ತೂರಿದೆ’ ಎಂದು ಬಿಜೆಪಿ ಆರೋಪಿಸಿದೆ. ದಲಿತರಿಗೆ ಆದ ಅನ್ಯಾಯದ ವಿರುದ್ಧ ಶನಿವಾರ ಕಾರವಾರದಲ್ಲಿ ಪ್ರತಿಭಟಿಸಿದ ಬಿಜೆಪಿಗರು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ದೂರು…
ಕೈಗಾ | ಅಣು ಘಟಕದಲ್ಲಿ ಅವಘಡ ನಡೆದರೆ ಮುಂದೇನು? ಮಾರ್ಚ 5ಕ್ಕೆ ಅಣಕು ಕಾರ್ಯಾಚರಣೆ!
ಕೈಗಾ ಅಣು ವಿದ್ಯುತ್ ಘಟಕದಲ್ಲಿ ಅವಘಡ ನಡೆದರೆ ಅನುಸರಿಸಬೇಕಾದ ಮಾರ್ಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಮಾರ್ಚ 5ರಂದು ಅಣಕು ಕಾರ್ಯಾಚರಣೆ ನಡೆಯಲಿದೆ. `ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಮಾರ್ಚ್ 5ರಂದು ನಡೆಯುವ ಅಣಕು ಕಾರ್ಯಾಚರಣೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ…
ಗಣಪು ಗೌಡರಿಗೆ ಜಾನಪದ ಪ್ರಶಸ್ತಿ
ಹಾಲಕ್ಕಿ ಸುಗ್ಗಿ ಕುಣಿತವನ್ನೇ ಉಸಿರಾಗಿಸಿಕೊಂಡಿರುವ ಹೊನ್ನಾವರದ ಗಣಪು ಗೌಡ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಕರ್ನಾಟಕ ಜಾನಪದ ಅಕಾಡೆಮಿ ಈ ಪ್ರಶಸ್ತಿ ಘೋಷಿಸಿದೆ. ಜಾನಪದ ಕಲೆಗಳಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಜಾನಪದ ಕಲಾವಿದರಿಗೆ ಹಾಗೂ ಜಾನಪದ ತಜ್ಞರಿಗೆ ಈ…
50 ಸಾವಿರ ಸಾಲ: ಬಾವಿಗೆ ಹಾರಿ ಪ್ರಾಣಬಿಟ್ಟ ಯುವ ರೈತ!
ಭಟ್ಕಳ ಜನತಾ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಮಾಡಿದ ಸಾಲ ತೀರಿಸಲಾಗದ ಕಾರಣ ದಾಮೋದರ ನಾಯ್ಕ ಸಾವನಪ್ಪಿದ್ದಾರೆ. ಭಟ್ಕಳದ ಹಾಡುವಳ್ಳಿ ಹಲ್ಯಾಣಿಯ ಹಿರೇಬಿಳ್ಳುವಿನಲ್ಲಿ ದಾಮೋದರ ನಾಯ್ಕ (35) ವಾಸವಾಗಿದ್ದರು. ಮೂರು ವರ್ಷದ ಹಿಂದೆ ಅವರು ಭಟ್ಕಳ ಜನತಾ ಕೋ ಆಪರೇಟಿವ್ ಬ್ಯಾಂಕಿನಲ್ಲಿ 50…
ನೀರಿನ ನಾಲಾದಲ್ಲಿತ್ತು ಚಾಲಕನ ಶವ!
ದಾಂಡೇಲಿ ಗಾಂಧೀನಗರದ ಚಾಲಕ ರಾಜೇಶ ಲಮಾಣಿ ಅವರ ಶವ ಮೌಳಂಗಿ ಭರ್ಜಿ ನಾಲಾದಲ್ಲಿ ಸಿಕ್ಕಿದೆ. ಅವರ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಗಾಂಧೀನಗರ ಹಿಟ್ಟಿನಗಿರಣಿ ಬಳಿ ರಾಜೇಶ ಲಮಾಣಿ (33) ವಾಸವಾಗಿದ್ದರು. ಅತಿಯಾದ ಸರಾಯಿ ಕುಡಿಯುವುದನ್ನು ರೂಡಿಸಿಕೊಂಡಿದ್ದ ಅವರಿಗೆ ಪಿಡ್ಸ ರೋಗವೂ…














