ಕಂಡವರ ಪಾಲಾದ ಉಪನ್ಯಾಸಕನ ಕಾಸು!
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರೊಬ್ಬರ ಮನೆಯಲ್ಲಿ ಕಳ್ಳತನ ನಡೆದಿದೆ. ಬಂಗಾರದ ಆಭರಣ, ಬೆಳ್ಳಿಯ ಕಾಲುಂಗರ, 10 ಸಾವಿರ ರೂ ಹಣದ ಜೊತೆ ಲ್ಯಾಪ್‌ಟಾಪ್’ನ್ನು ಕಳ್ಳರು ದೋಚಿದ್ದಾರೆ. ಯಲ್ಲಾಪುರ ತಾಲೂಕಿನ ಬಾಳಗಿಮನೆ ಕಪ್ಪೆಗದ್ದೆ ಏರಿಯಾದಲ್ಲಿ ಮಹಾಬಲೇಶ್ವರ ಗೇರಗದ್ದೆ ವಾಸವಾಗಿದ್ದಾರೆ. ಅವರು ಯಲ್ಲಾಪುರ…
ಅರಣ್ಯ ಅತಿಕ್ರಮಿಸಿದ ಮೀನುಗಾರಿಕಾ ಸಚಿವ!
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸಹ ಅರಣ್ಯ ಅತಿಕ್ರಮಣ ನಡೆಸಿದ್ದಾರೆ. ತಮ್ಮ ಒಡೆತನದ ಶಿಕ್ಷಣ ಸಂಸ್ಥೆ ಪಕ್ಕದ 1 ಎಕರೆಯಷ್ಟು ಅರಣ್ಯವನ್ನು ಸಚಿವರು ಒತ್ತುವರಿ ಮಾಡಿದ್ದು, ಅರಣ್ಯ ಇಲಾಖೆಯವರು ಬೇರೆಯವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಭಟ್ಕಳದ ಮಾವಳ್ಳಿ…
ಅರಣ್ಯವಾಸಿಗಳಿಗೆ ಕಾನೂನು ಅರಿವು: ಮಿರ್ಜಾನ್‌ನಲ್ಲಿ ಜಾಥಾ
ಅರಣ್ಯವಾಸಿಗಳಿಗೆ ಕಾನೂನು ಮಾಹಿತಿ ಮತ್ತು ಜಾಗೃತೆ ಮೂಡಿಸುವ ಉದ್ದೇಶದಿಂದ ನಡೆಯುತ್ತಿರುವ ಜಾಗೃತಿ ಜಾಥಾ ಸೋಮವಾರ ಕುಮಟಾ ತಾಲೂಕಿನಲ್ಲಿ ಸಂಚರಿಸಲಿದೆ. ಮಿರ್ಜಾನಿನ ಅಂಬೇಡ್ಕರ ಭವನದ ಎದುರು ಅಂದು ಬೆಳಗ್ಗೆ 10 ಗಂಟೆಗೆ ಜಾಥಾ ನಡೆಯಲಿದೆ. ಸಂಘಟನೆಯ ತಾಲೂಕಾ ಅಧ್ಯಕ್ಷ ಮಂಜುನಾಥ ಮರಾಠಿ ನಾಗೂರು…
ಅಗ್ನಿ ಅವಘಡ: ಹೊಗೆಯಾಗಿ ಹಾರಿಹೋದ ಜಾನುವಾರು ಮೇವು!
ಜಾನುವಾರುಗಳ ಮೇವಿಗಾಗಿ ದಾಸ್ತಾನು ಮಾಡಿದ್ದ ಹುಲ್ಲಿನ ಪೆಂಡೆಗೆ ಆಕಸ್ಮಿಕ ಅಗ್ನಿಸ್ಪರ್ಶವಾಗಿದೆ. ಪರಿಣಾಮ 400ಕ್ಕೂ ಅಧಿಕ ಹುಲ್ಲಿನ ಪೆಂಡೆಗಳು ಸುಟ್ಟು ಬೂದಿಯಾಗಿದೆ. ಮುಂಡಗೋಡ ತಾಲೂಕಿನ ಸನವಳ್ಳಿಯಲ್ಲಿ ನಾಗರಾಜ ಗುಬ್ಬಕ್ಕನವರ್ ಅವರು ಹುಲ್ಲು ದಾಸ್ತಾನು ಮಾಡಿದ್ದರು. ಶನಿವಾರ ಇದಕ್ಕೆ ಬೆಂಕಿ ತಗುಲಿದ ಪರಿಣಾಮ ದಟ್ಟ…
ಗ್ರಾ ಪಂ ಅಧಿಕಾರದಲ್ಲಿ ಅನಗತ್ಯ ಹಸ್ತಕ್ಷೇಪ: ಸರ್ಕಾರದ ವಿರುದ್ಧ ಜನಪ್ರತಿನಿಧಿಗಳು ಗರಂ!
`ಶಾಸಕ-ಸoಸದರಿಗಿರುವಷ್ಟೇ ಗ್ರಾಮ ಪಂಚಾಯತ ಸದಸ್ಯರಿಗೂ ಅಧಿಕಾರವಿದ್ದು, ಅವರಿಗಿರುವ ಸ್ಥಾನಮಾನ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಅದಾಗಿಯೂ ಕೆಲ ಹಿರಿಯ ಅಧಿಕಾರಿಗಳು ಗ್ರಾ ಪಂ ಸದಸ್ಯರ ವ್ಯಾಪ್ತಿಯಲ್ಲಿ ಇಲ್ಲಸಲ್ಲದ ಸುತ್ತೋಲೆ ಹೊರಡಿಸಿ ಕೈಯಾಡಿಸುತ್ತಿದ್ದಾರೆ’ ಎಂದು ಚುನಾಯಿತ ಗ್ರಾಮ ಪಂಚಾಯತಿ ಪ್ರತಿನಿಧಿಗಳ ಒಕ್ಕೂಟದ ರಾಜ್ಯ ಅಧ್ಯಕ್ಷ…
ರಸ್ತೆ ಅಪಘಾತ: ಯುವಕನ ಬದುಕು ಅಂತ್ಯ!
ಯಲ್ಲಾಪುರದ ಎಲ್‌ಐಸಿ ಕಚೇರಿ ಎದುರು ಶುಕ್ರವಾರ ರಾತ್ರಿ ನಡೆದ ಅಪಘಾತದಲ್ಲಿ ಅಂಬೇಡ್ಕರ ನಗರದ ಪ್ರಸನ್ನಕುಮಾರ ಜಾದವ್ ಸಾವನಪ್ಪಿದ್ದಾರೆ. ಸ್ನೇಹಜೀವಿಯಾಗಿದ್ದ ಪ್ರಸನ್ನ ಜಾದವ್ ಅಂತಿಮ ದರ್ಶನಕ್ಕೆ ಅಪಾರ ಪ್ರಮಾಣದ ಜನ ಆಗಮಿಸುತ್ತಿದ್ದಾರೆ. ಯಲ್ಲಾಪುರ ತಾಲೂಕಿನ ಇಡಗುಂದಿಯ ಪ್ರಸನ್ನಕುಮಾರ ಸಂತೋಷ ಜಾದವ್ (24) ಅಂಬೇಡ್ಕರ…
ವಕೀಲರಿಲ್ಲದೇ ವಾದ ಮಾಡಿದ ಮಹಿಳೆಗೆ ಬ್ಯಾಂಕ್ ನೌಕರಿ!
ಅನುಕಂಪ ಆಧಾರಿತ ನೌಕರಿಯಲ್ಲಿನ ಅನ್ಯಾಯ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ ವೀಣಾ ಶೆಟ್ಟಿ ಎಂಬಾತರು ಸ್ವತಃ ವಾದ ಮಂಡಿಸಿ ಗೆಲುವು ಸಾಧಿಸಿದ್ದಾರೆ. ಶಿರಸಿಯ ಕೆಡಿಸಿಸಿ ಬ್ಯಾಂಕ್ ನೌಕರಿಗಾಗಿ ಅವರು ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ. ಕಾನಸೂರಿನ ಕೆಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಅಟೆಮಡರ್ ಆಗಿ…
ಹೋರಾಟಗಾರನ ಮನೆಗೆ ಹೊಂಚು ಹಾಕಿದ ವ್ಯಾಘ್ರ: ಈ ದಿನ ಚಿರತೆಗೆ ಸಿಕ್ಕಿದ್ದು ಬೌ ಬೌ ಬಿರಿಯಾನಿ!
ನಿರಂತರ ಹೋರಾಟದ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಎಂ ಕೆ ಭಟ್ಟ ಯಡಳ್ಳಿ ಅವರ ಮನೆ ಭದ್ರತೆಗಿದ್ದ ನಾಯಿ ಚಿರತೆಗೆ ಆಹಾರವಾಗಿದೆ. ಕಾಡಿನಲ್ಲಿರುವ ಪ್ರಾಣಿಗಳು ವಸತಿ ಪ್ರದೇಶಕ್ಕೆ ನುಗ್ಗುತ್ತಿರುವ ಬಗ್ಗೆ ಎಂ ಕೆ ಭಟ್ಟ ಯಡಳ್ಳಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಯಲ್ಲಾಪುರ…
ಚಂದ್ಗುಳಿಯ ಚಂದ.. ಕಣ್ತುಂಬಿಕೊoಡ ಭಕ್ತವೃಂದ
ಘoಟೆ ಗಣಪನ ಸನ್ನಿಧಿಯಲ್ಲಿ ಶುಕ್ರವಾರ ಸಡಗರದ ವಾತಾವರಣ. ಮಾತೆಯರಿಂದ ಭಜನೆ, ಬುದ್ದಿಜೀವಿಗಳಿಂದ ಪ್ರವಚನ, ವೈದಿಕರಿಂದ ವೇದಘೋಷ ಪಠಣ, ಕಲಾವಿದರಿಂದ ತಾಳಮದ್ದಲೆ ಸೇರಿ ಬಗೆ ಬಗೆಯ ಕಾರ್ಯಕ್ರಮಗಳೊಂದಿಗೆ ಚಂದ್ಗುಳಿಯ ಆವರಣ ಭಕ್ತಿ-ಭಾವದಿಂದ ಕೂಡಿತ್ತು. ಫೆ 28ರಿಂದ ಮಾರ್ಚ 3ರವರೆಗೆ ಯಲ್ಲಾಪುರದ ಚಂದ್ಗುಳಿ ಗಂಟೆ…
ಪತಿ ನೆನಪಿನಲ್ಲಿ ಪ್ರಾಣ ತ್ಯಾಗ ಮಾಡಿದ ಪತ್ನಿ!
ಅನಾರೋಗ್ಯಕ್ಕೆ ಒಳಗಾಗಿ ಸಾವನಪ್ಪಿದ ಪತಿಯ ನೆನಪಿನಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಮಟಾದ ಹಳೆ ಮೀನು ಮಾರುಕಟ್ಟೆ ಬಳಿ ಪ್ರದೀಪ ಮುರುಡೇಶ್ವರ ಹಾಗೂ ಜ್ಯೋತಿ ಮುರುಡೇಶ್ವರ ವಾಸವಾಗಿದ್ದರು. ಅನಾರೋಗ್ಯಕ್ಕೆ ಒಳಗಾದ ಪ್ರದೀಪ ಮುರುಡೇಶ್ವರ ಅವರಿಗೆ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿರಲಿಲ್ಲ.…














