ಪ್ರೇಮ ವಿವಾಹಕ್ಕೆ ವಿರೋಧ: ಮಗಳು-ಅಳಿಯನಿಗೆ ಚಾಕು ಚುಚ್ಚಿ ವಿಷ ಸೇವಿಸಿದ ಶಂಕರ!
ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಕಾರಣ ಕವನ ಎಂಬಾತರಿಗೆ ಅವರ ತಂದೆ ಶಂಕರ್ ಅವರು ಚಾಕು ಚುಚ್ಚಿದ್ದಾರೆ. ಇದನ್ನು ತಪ್ಪಿಸಲು ಬಂದ ಅಳಿಯ ಮನೋಜ ಅವರಿಗೂ ಚಾಕು ಚುಚ್ಚಿ, ನಂತರ ಶಂಕರ್ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಶಿರಸಿ…
ಉತ್ತರ ಕನ್ನಡ | ಈ ಜಿಲ್ಲೆಯಲ್ಲಿದೆ ಪಂಚ ಆತ್ಮಲಿಂಗ ಕ್ಷೇತ್ರ!
ಸಂಪೂರ್ಣ ಭಾರತದಲ್ಲಿ ಭೋಲೆನಾಥ ಶಂಭೋ ಶಂಕರನ ವಿವಿಧ ಕ್ಷೇತ್ರಗಳಿವೆ. ಒಂದೊಂದು ಕ್ಷೇತ್ರದಲ್ಲಿ ಈ ಭೋಲೇ ಬಾಬಾ ಬೇರೆ ಬೇರೆ ರೂಪದಲ್ಲಿ ಭಕ್ತರನ್ನು ಆಶೀರ್ವದಿಸುತ್ತಿದ್ದಾನೆ. ಅಮರನಾಥ ಗುಹೆಯಲ್ಲಿ ಮಂಜುಗಡ್ಡೆಯ ಈಶ್ವರಲಿಂಗವಾದರೆ, ಅಂತಹ ಭೀಕರ ಪ್ರವಾಹದಲ್ಲಿಯೂ ಕೂಡ ತನ್ನ ಇರುವಿಕೆಯನ್ನು ಜಗತ್ತಿಗೆ ತೋರಿಸಿದಂತಹ ಕೇದಾರನಾಥ,…
ಖಾಸಗಿ ನೌಕರನ ಜೊತೆ ನಿವೃತ್ತ ಬ್ಯಾಂಕ್ ಉದ್ಯೋಗಿಗೂ ಮೋಸ!
ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚಿನ ಹಣ ಸಂಪಾದಿಸುವ ಆಸೆಗೆ ಬಿದ್ದ ಕಾರವಾರದ ಅಮೀತ ಕೋಳಂಬಕರ್ ಹಾಗೂ ಹೊನ್ನಾವರದ ಗಣಪತಿ ಹೆಗಡೆ ಮೋಸದ ಜಾಲದೊಳಗೆ ಬಿದ್ದು ಇದ್ದ ಹಣವನ್ನು ಕಳೆದುಕೊಂಡಿದ್ದಾರೆ. ಕಾರವಾರದ ಕಡವಾಡ ಮಾರುತಿ ದೇವಸ್ಥಾನ ಅಮೀತ ಕೋಳಂಬಕರ್ ಖಾಸಗಿ ನೌಕರರಾಗಿದ್ದಾರೆ. ಫೆ…
ನಾಯಿಗಳ ವಿರುದ್ಧ ನಾರಿಯರ ಕಿಡಿ!
ಬೀದಿ ನಾಯಿ ಹಾಗೂ ಹುಚ್ಚು ನಾಯಿ ಕಾಟಕ್ಕೆ ಬೇಸತ್ತ ಮುಂಡಗೋಡು ಪಟ್ಟಣದ ಮಹಿಳೆಯರು ಆ ನಾಯಿಗಳ ನಿಗ್ರಹಕ್ಕಾಗಿ ಸ್ಥಳೀಯ ಆಡಳಿತದ ಮೊರೆ ಹೋಗಿದ್ದಾರೆ. ಮಂಗಳವಾರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳ ಬಳಿ ನಾಯಿ ಸಮಸ್ಯೆ ಬಗ್ಗೆ ಮಹಿಳೆಯರು ಅಳಲು ತೋಡಿಕೊಂಡರು. `ನಂದೀಶ್ವರ ನಗರದಲ್ಲಿ…
ಕೆಲಸಕ್ಕೆ ಬಂದ ಕಾರ್ಮಿಕ ಕಾಣೆ!
ಬೈಂದೂರಿನಿoದ ಬೆಟ್ಟಕೊಪ್ಪಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದ ಸುಕುಮಾರ ನಾಯ್ಕ ಕಾಣೆಯಾಗಿದ್ದಾರೆ. ಸುಕುಮಾರ ನಾಯ್ಕರನ್ನು ಅವರನ್ನು ಹುಡುಕಿಕೊಡಿ ಎಂದು ಅವರ ತಂದೆ ಸಂಜೀವ ನಾಯ್ಕ ಪೊಲೀಸರ ಮೊರೆ ಹೋಗಿದ್ದಾರೆ. ಬೈಂದೂರಿನ ಸುಕುಮಾರ ನಾಯ್ಕ ನಾಲ್ಕು ತಿಂಗಳ ಹಿಂದೆ ಅದೇ ಊರಿನ ತೇಜಾ ಶೆಟ್ಟಿ…
ಬೈಕುಗಳ ನಡುವೆ ಡಿಕ್ಕಿ: ಗಂಭೀರ ಗಾಯಗೊಂಡ ವ್ಯಕ್ತಿ ಸಾವು!
ಎರಡು ಬೈಕುಗಳ ನಡುವೆ ನಡೆದ ಅಪಘಾತದಲ್ಲಿ ಮುಂಡಗೋಡಿನ ಅಟ್ಟಣಗಿಯ ಸುರೇಶ ವಡ್ಡರ್ (38) ಸಾವನಪ್ಪಿದ್ದಾರೆ. ಫೆ 21ರಂದು ಮುಂಡಗೋಡ ರಾಮಾಪುರದ ಮಂಜುನಾಥ ಗೆಜ್ಜಲ್ಲಿ ಎಂಬಾತರು ಮಂಜುನಾಥ ದಾಸನಕೊಪ್ಪ ಎಂಬಾತರ ಜೊತೆ ಬೈಕಿನಲ್ಲಿ ಸಂಚರಿಸುತ್ತಿದ್ದರು. ರಾತ್ರಿ 9 ಗಂಟೆಯ ವೇಳೆಗೆ ರಾಮಾಪುರದ ಹನುಮನಕಟ್ಟಿ…
ಭಕ್ತಿ ಮಾರ್ಗ: ಕವಳಾ ಗುಹೆಗೆ ಪಣಸೋಲಿಯೇ ದಾರಿ!
ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಶಿವಕ್ಷೇತ್ರ ಕವಳಾ ಗುಹೆ. ಜೊಯಿಡಾ ತಾಲೂಕಿನ ಪ್ರಧಾನಿ ಗ್ರಾ ಪಂ ವ್ಯಾಪ್ತಿಯಲ್ಲಿ ಈ ಐತಿಹಾಸಿಕ ದೇಗುಲವಿದೆ. ಮಹಾಶಿವರಾತ್ರಿಗೆ ಸಾವಿರಾರು ಭಕ್ತರು ಬರುತ್ತಿದ್ದು, `ಈ ಬಾರಿ ಎಲ್ಲರೂ ಪಣಸೋಲಿ ಮಾರ್ಗವನ್ನು ಮಾತ್ರ ಬಳಸಿ’ ಎಂದು ಕವಳೇಶ್ವರ ದೇವಸ್ಥಾನ…
ಶಿರಸಿಗೂ ವ್ಯಾಪಿಸಿದ ಮಂಗನ ಸೊಂಕು!
ತಲೆ ನೋವು, ಸೊಂಟ ನೋವು, ವಿಪರೀತ ಜ್ವರದ ಜೊತೆ ನಿಶಕ್ತಿಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಶಿರಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಮಂಗನ ಕಾಯಿಲೆಯ ಲಕ್ಷಣ ಗೋಚರಿಸಿದೆ. ಶಿವಮೊಗ್ಗ ಜಿಲ್ಲೆಯ ಸೊರಬದ ಕ್ಯಾಸನೂರು ಬಳಿ 1956ರಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆಗೆ ಈವರೆಗೂ ಔಷಧಿ ಕಂಡು…
PDO ವರ್ಗಾವಣೆಗಾಗಿ ಮುಖ್ಯಮಂತ್ರಿಗೆ ಮೊರೆ!
ಸಾರ್ವಜನಿಕ ಕೆಲಸ ಮಾಡಿಕೊಡಲು ಪದೇ ಪದೇ ಎಡವುತ್ತಿರುವ ಪಿಡಿಓ ವರ್ಗಾವಣೆಗೆ ಆಗ್ರಹಿಸಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಮುಖ್ಯಮಂತ್ರಿಯ ಮೊರೆ ಹೋಗಿದ್ದಾರೆ! ಕುಮಟಾ ತಾಲೂಕಿನ ಹೊಲನಗದ್ದೆ ಗ್ರಾಮ ಪಂಚಾಯತ್ ಪಿಡಿಓ ನಾಗರಾಜ ನಾಯ್ಕ ವಿರುದ್ಧ ಅನೇಕ ಆರೋಪಗಳು ಕೇಳಿ ಬಂದಿದೆ. `2023ರಲ್ಲಿಯೇ…
ಮಾತು ತಪ್ಪಿದ ಮಂಕಾಳು ವೈದ್ಯ: ಕಡಲ ಮಗುವಿನ ಪ್ರಶ್ನೆಗೆ ಉತ್ತರಿಸುವವರಾರು?
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಂದರು ವಿರೋಧಿ ಹೋರಾಟ ಜೋರಾಗಿದೆ. ಅಂಕೋಲಾದಲ್ಲಿ ಬಂದರು ನಿರ್ಮಾಣ ಕಾಮಗಾರಿಗೆ ಮೀನುಗಾರರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೆ ಹೊನ್ನಾವರದಲ್ಲಿಯೂ ಪ್ರತಿಭಟನೆಯ ಕಾವು ಜೋರಾಗಿದೆ. ಆದರೆ, ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಮಾತ್ರ ಮೌನವಾಗಿದ್ದಾರೆ. `ಚುನಾವಣೆ ದೇವಸ್ಥಾನಕ್ಕೆ ಬಂದು ಮತ…








