6
ಗರ್ಭಿಣಿ ಹಸು ಕೊಂದ ದುಷ್ಟವ್ಯಾಘ್ರ!

ಪುಟ್ಟ ಭೂಮಿಯಲ್ಲಿ ಕೃಷಿ ಕಾಯಕದ ಜೊತೆ ಹೈನುಗಾರಿಕೆ ನಡೆಸಿ ಬದುಕು ಕಟ್ಟಿಕೊಂಡಿದ್ದ ದೀಪಾ ಕುಣಬಿ ಅವರಿಗೆ ಕಾಡಿನ ದುಷ್ಟವ್ಯಾಘ್ರ ಆಘಾತವನ್ನುಂಟು ಮಾಡಿದೆ. ಮೇವಿಗೆ ತೆರಳುವುದಕ್ಕಾಗಿ ಕೊಟ್ಟಿಗೆಯಿಂದ ಹೊರಟಿದ್ದ ಗರ್ಭಿಣಿ ಹಸುವಿಗೆ ಹೊಂಚು ಹಾಕಿದ್ದ ಚಿರತೆ ಹಸುವಿನ ಹೊಟ್ಟೆಯೊಳಗಿದ್ದ ಕರುವನ್ನು ಅರೆಬರೆಯಾಗಿ ಭಕ್ಷಿಸಿದೆ!…

ಬಿಸಿಯೂಟದ ಸಾಮಗ್ರಿಯಲ್ಲಿ ಬಿರಿಯಾನಿ ಪಾರ್ಟಿ: ಏಳು ಸಿಬ್ಬಂದಿ ಕೆಲಸಕ್ಕೆ ಕುತ್ತು!

ಹಾಸ್ಟೇಲ್ ಮಕ್ಕಳ ಬಿಸಿಯೂಟಕ್ಕೆ ಬಳಸಬೇಕಿದ್ದ ಸಾಮಗ್ರಿಗಳನ್ನು ಕದ್ದು ಮಾರಾಟ ಮಾಡಿ ಆ ಹಣದಿಂದ ಬಿರಿಯಾನಿ ಪಾರ್ಟಿ ಮಾಡಿದ್ದ ಸಿಬ್ಬಂದಿಯನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿದೆ. ಮುಂಡಗೋಡ ಕರಗಿನಕೊಪ್ಪದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಹಾರ ಸಾಮಗ್ರಿಗಳು ಪದೇ ಪದೇ ಕಳ್ಳತನವಾಗುತ್ತಿದ್ದವು. ದಾಖಲೆ ಪರಿಶೀಲನೆ…

ನಮ್ಮೂರ ಆಲೆಮನೆ | ಹಾಲು ಕುಡಿದು ನೊರೆಬೆಲ್ಲ ಸವಿದ ಜಿಲ್ಲಾಧಿಕಾರಿ!

ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಆಲೆಮನೆಗೆ ಭೇಟಿ ನೀಡಿದ್ದಾರೆ. ಕಬ್ಬು ಅರೆಯುವ ವಿಧಾನ, ಬೆಲ್ಲ ತಯಾರಿಕೆ ಜೊತೆ ಕಬ್ಬಿನ ಬಗೆ ಬಗೆಯ ಖಾದ್ಯಗಳನ್ನು ನೋಡಿ ಅವರು ಸಂತಸ ಹಂಚಿಕೊoಡಿದ್ದಾರೆ. ಯಲ್ಲಾಪುರ-ಅoಕೋಲಾ ಗಡಿಭಾಗದ ಗುಳ್ಳಾಪುರದಲ್ಲಿ ಭಾನುವಾರ ಸಂಜೆ ಆಲೆಮನೆ ಹಬ್ಬ…

ಕುಸ್ತಿ: ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ

ಹಳಿಯಾಳದ ಮೂವರು ಕುಸ್ತಿಪಟುಗಳು 2024-25ನೇ ಸಾಲಿನ ಅಂತರ್ ವಿಶ್ವವಿದ್ಯಾಲಯ ಕುಸ್ತಿ ಚಾಂಪಿಯನ್ ಶಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆ ಮೂಲಕ ಅವರು ಖೇಲೋ ಇಂಡಿಯಾ ಯೂನಿವರ್ಸಿಟಿಯ ರಾಷ್ಟ್ರೀಯ ಕುಸ್ತಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಮಂಜುನಾಥ್ ನಾಗೇಂದ್ರ ಗೌಡಪ್ಪನವರ್ 79ಕೆಜಿ ವಿಭಾಗ, ಗಾಯತ್ರಿ ರಮೇಶ್…

ಬೈಕಿಗೆ ಗುದ್ದಿ ಬಸ್ಸಿಗೂ ಡಿಕ್ಕಿ ಹೊಡೆದ ಕಾರು!

ಕುಮಟಾದಿಂದ ಅಂಕೋಲಾ ಕಡೆ ಬರುತ್ತಿದ್ದ ಕಾರು ಶಿರೂರಿನಲ್ಲಿ ಬೈಕಿಗೆ ಡಿಕ್ಕಿಯಾಗಿದೆ. ಅದಾದ ನಂತರ ಎದುರಿನಿಂದ ಬರುತ್ತಿದ್ದ ಬಸ್ಸಿಗೂ ಗುದ್ದಿದೆ. ಫೆ 23ರ ಮಧ್ಯಾಹ್ನ ಧಾರವಾಡದ ಅಂಕಿತಕುಮಾರ (26) ಆ ಕಾರು ಓಡಿಸುತ್ತಿದ್ದರು. ವೇಗವಾಗಿ ಕಾರು ಓಡಿಸಿದ ಅವರು ಮೊದಲು ಶಿರೂರು ಗ್ರಾಮದ…

ಬಂಗಾರಮಕ್ಕಿ ಗುಡ್ಡಕ್ಕೂ ಬೆಂಕಿ!

ಭಟ್ಕಳ ಬೇಂಗ್ರೆಯ ಬಂಗಾರಮಕ್ಕಿ ಗುಡ್ಡಕ್ಕೂ ಆಕಸ್ಮಿಕ ಬೆಂಕಿ ತಗುಲಿದೆ. ಇಲ್ಲಿ ಮೇವಿಗೆ ತೆರಳಿದ್ದ ಜಾನುವಾರುಗಳು ಕಂಗಾಲಾಗಿ ಓಡಿವೆ. ಬಂಗಾರಮಕ್ಕಿಯ ಸುಮಾರು 15 ಎಕರೆ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿದೆ. ಪರಿಣಾಮ ಅಲ್ಲಿದ್ದ ಹುಲ್ಲುಗಾವಲು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಸೋಮವಾರ ಬೆಂಕಿ ತಗುಲಿದ ಅವಧಿಯಲ್ಲಿ…

ನೆಲಕ್ಕೆ ಬಿದ್ದ ವಿದ್ಯುತ್ ತಂತಿ: ಅಗ್ನಿ ಅನಾಹುತಕ್ಕೆ ನಾಲ್ಕು ಎಕರೆ ತೋಟ ನೆಲಸಮ!

ಯಲ್ಲಾಪುರ ತಾಲೂಕಿನ ಸವಣಗೇರಿ ಬಳಿಯ ಯರಕಿನಬೈಲಿನಲ್ಲಿ ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ತೋಟಕ್ಕೆ ಅಗ್ನಿ ಸ್ಪರ್ಶವಾದ ಕಾರಣ 4 ಎಕರೆಯ ಬೆಳೆ ಭಸ್ಮವಾಗಿದೆ. ಇಲ್ಲಿನ ಈಶ್ವರ ಪಟಗಾರ ಹಾಗೂ ಮಹದೇವ ಪಾಠಣಕರ್ ತಮ್ಮ ಭೂಮಿಯಲ್ಲಿ ಅಡಿಕೆ, ತೆಂಗಿನ ಜೊತೆ ಕಬ್ಬು ಬೆಳೆದಿದ್ದರು. ಅಲ್ಲಲ್ಲಿ…

ಹೊನ್ನಾವರ: ಇಲ್ಲಿಯೂ ನಿಷೇಧದ ಗುಮ್ಮ!

ಬಂದರು ಕಾಮಗಾರಿ ಹಿನ್ನಲೆ ಫೆ 25ರಂದು ಹೊನ್ನಾವರದ ಹಿರೇಮಠ ಸ್ಮಶಾನದಿಂದ ಕಾಸರಕೋಡ ಗ್ರಾಮದ ಸಮುದ್ರಗುಂಟ ಪ್ರದೇಶದವರೆಗೆ ನಿಷೇಧಾಜ್ಞೆ ಹೊರಡಿಸಲಾಗಿದೆ. ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66 ಹತ್ತಿರದಲ್ಲಿರುವ ಹಿರೇಮಠ ಸ್ಮಶಾನದಿಂದ ಕಾಸರಕೋಡ ಗ್ರಾಮದಲ್ಲಿ ಸಮುದ್ರಗುಂಟದ ರಸ್ತೆಯನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಫೆ 25ರಂದು ಸರ್ವೇ ಕಾರ್ಯ…

ಗೋಕರ್ಣ: ಈ ಎರಡೂ ದಿನ ಸಿಗಲ್ಲ ಸರಾಯಿ!

ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಶಿವರಾತ್ರಿ ಹಿನ್ನಲೆ ಗೋಕರ್ಣದಲ್ಲಿ ಎರಡು ದಿನಗಳ ಕಾಲ ಸರಾಯಿ ಮಾರಾಟ ನಿಷೇಧಿಸಲಾಗಿದೆ. ಮಹಾಶಿವರಾತ್ರಿ ಉತ್ಸವ ಮತ್ತು ಮಹಾರಥೋತ್ಸವದ ಅಂಗವಾಗಿ ಫೆ.26 ಮತ್ತು ಫೆ. 28 ರಂದು ನಡೆಯಲಿದೆ. ಈ ಹಿನ್ನಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ…

ಉತ್ತರ ಕನ್ನಡ | ಜಿಲ್ಲೆಯ ಹಿರಿಮೆ ಹೆಚ್ಚಿಸಿದ ಜನಮೆಚ್ಚಿದ ವೈದ್ಯ!

ಸಾಕಷ್ಟು ಜನಪರ ಕೆಲಸ ಮಾಡಿದರೂ ಎಂದಿಗೂ ಮುನ್ನೆಲೆಗೆ ಬಾರದ ಯಲ್ಲಾಪುರ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ ನರೇಂದ್ರ ಪವಾರ್ ಅವರ ಸಾಧನೆ ಗುರುತಿಸಿ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ಗೌರವಿಸಿದೆ. ಡಾ ನರೇಂದ್ರ ಪವಾರ್ ಅವರು ಕಳೆದ ಆರು ವರ್ಷಗಳಿಂದ…

You cannot copy content of this page