ಅತಿಕ್ರಮಣದಾರರ ವಿಷಯದಲ್ಲಿ ಅನಗತ್ಯ ರಾಜಕೀಯ: ಖಂಡ್ರೆ ನಡೆಗೆ ಖಂಡನೆ!
ಅರಣ್ಯ ಅತಿಕ್ರಮಣದಾರರ ವಿಷಯದಲ್ಲಿ ಅನಗತ್ಯ ರಾಜಕಾರಣ ಮಾಡುತ್ತಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘ ಅಸಮಧಾನ ವ್ಯಕ್ತಪಡಿಸಿದೆ. ಅರಣ್ಯ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸುವಂತೆ ಆಗ್ರಹಿಸಿ ಫೆ 10ರಂದು ರೈತ ಸಂಘದವರು ವಿಧಾನಸೌಧದ ಎದುರು ಪ್ರತಿಭಟಿಸಲಿದ್ದಾರೆ.…
ಉತ್ತರ ಕನ್ನಡ | ಸಂಧ್ಯಾ-ಸಂದೀಪರಿಗೆ ಮಾಧ್ಯಮ ಪ್ರಶಸ್ತಿಯ ಗೌರವ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿದ ಇಬ್ಬರು ಪ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. `ಪ್ರಜಾವಾಣಿ’ ವರದಿಗಾರ್ತಿ ಸಂಧ್ಯಾ ಹೆಗಡೆ ಹಾಗೂ `ನುಡಿಜೇನು’ ಕಾರ್ಯನಿರ್ವಾಹಕ ಸಂಪಾದಕ ಸಂದೀಪ ಸಾಗರ ಅವರಿಗೆ ಸೋಮವಾರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶಿರಸಿಯ ಪ್ರಜಾವಾಣಿ ಪತ್ರಿಕೆಯಲ್ಲಿ…
ತವರಿಗೆ ಬಂದ ಸೈನಿಕನಿಗೆ ಅದ್ಧೂರಿ ಸ್ವಾಗತ
25 ವರ್ಷಗಳ ಸೈನಿಕ ವೃತ್ತಿಯಿಂದ ನಿವೃತ್ತರಾದ ಕಾಶಿನಾಥ ನಾಯ್ಕ ಅವರು ಸೋಮವಾರ ತವರಿಗೆ ಮರಳಿದ್ದು, ಸಾವಿರ ಸಂಖ್ಯೆಯ ಜನ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಕಾಶಿನಾಥ ನಾಯ್ಕ ಅವರ ಜೊತೆ ಅವರ ಕುಟುಂಬದವರನ್ನು ಶಿರಸಿಯ ಮೆರವಣಿಗೆ ಮೂಲಕ ಸ್ವಾಗತಿಸಿದ್ದಾರೆ. ಶಿರಸಿ ನಗರದ ನಿಲೇಕಣಿ…
ಆಸ್ಪತ್ರೆ ಇದೆ.. ಔಷಧಿ ಇಲ್ಲ!
ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಆಯುಷ್ ಆಸ್ಪತ್ರೆಯಲ್ಲಿ ಔಷಧಿ ಅಭಾವ ಎದುರಾಗಿದೆ. ಹೀಗಾಗಿ ಚಿಕಿತ್ಸೆ ಬಯಸಿ ಸರ್ಕಾರಿ ಆಯುಷ್ ಆಸ್ಪತ್ರೆಗೆ ಬಂದ ರೋಗಿಗಳು ಔಷಧಿ ಅರೆಸಿ ಖಾಸಗಿ ಔಷಧಾಲಯಕ್ಕೆ ತೆರಳುವುದು ಅನಿವಾರ್ಯವಾಗಿದೆ. ಫೆ 3ರಂದು ಕುಮಟಾದ ಆಯುಷ್ ಆಸ್ಪತ್ರೆಗೆ ಮೇರಿ ಎಂಬಾತರು…
ಅರಣ್ಯ ಸಚಿವರಿಗೆ ಇಲ್ಲ ಕಾನೂನು ಜ್ಞಾನ!
ಕಂದಾಯ ಭೂಮಿ ಹೊಂದಿದ ಅರಣ್ಯ ಅತಿಕ್ರಮಣದಾರರು ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರೆ ಅಂಥವರ ಅರ್ಜಿ ಕೈ ಬಿಡುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೇ ಟಿಪ್ಪಣಿ ಹೊರಡಿಸಿದ್ದಾರೆ. `ಅರಣ್ಯ ಸಚಿವರ ಈ ಟಿಪ್ಪಣಿಗೆ ಬೆಲೆ ಇಲ್ಲ’ ಎಂದು ನ್ಯಾಯವಾದಿ ರವೀಂದ್ರ…
ಸಾಂಬಸದಾಶಿವ | ಮೂರು ದಿನ ಕಳೆದರೂ ಮನೆಗೆ ಮರಳದ ಕೃಷಿಕ!
ಪೇಟೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟ ಸಾಂಬಶಿವ ಹೆಬ್ಬಾರ್ ಅವರು ಕಾಣೆಯಾಗಿ ಮೂರು ದಿನ ಕಳೆದಿದೆ. ಈವರೆಗೂ ಅವರ ಸುಳಿವು ಸಿಕ್ಕಿಲ್ಲ. ಯಲ್ಲಾಪುರ ತಾಲೂಕಿನ ಮಲವಳ್ಳಿಯ ಕೃಷಿಕ ಸಾಂಬಶಿವ ಹೆಬ್ಬಾರ್ ಜನವರಿ ೩೧ರಂದು ಯಲ್ಲಾಪುರಕ್ಕೆ ಹೋಗುವುದಾಗಿ ಹೇಳಿದ್ದರು. ಮಧ್ಯಾಹ್ನ ೩…
ಕದಿಯೋದೇ ಅವರ ಬ್ಯುಸಿನೆಸ್ಸು!
ಒಂಟಿ ಮಹಿಳೆಯ ಮನೆಗೆ ನುಗ್ಗಿ ಅಲ್ಲಿದ್ದ ಆಭರಣ ಹಾಗೂ ಹಣ ದೋಚಿದ ಇಬ್ಬರನ್ನು ಪೊಲೀಸರು ಹಿಡಿದಿದ್ದಾರೆ. ಮುಂಡಗೋಡ ವಡ್ಡರ್ ಓಣಿಯ ತಿಪ್ಪವ್ವ ಬೋವಿವಡ್ಡರ್ ಅವರ ಮನೆಯಲ್ಲಿ ಚಿನ್ನಾಭರಣಗಳು ಕಳ್ಳತನವಾಗಿದ್ದವು. ಮುಂಡಗೋಡು ಸುಭಾಶನಗರದ ಪ್ರವೀಣ ಬಸವರಾಜ ಭೋವಿ (23) ಹಾಗೂ ಕ್ಯಾಸನಕೇರಿಯ ರಾಕೇಶ…
ಗೋ ಕಳ್ಳರಿಗೆ ಗುಂಡೇಟು ಖಚಿತ!
`ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ನಿರಂತರವಾಗಿ ಗೋ ಕಳ್ಳತನ ನಡೆಯುತ್ತಿದ್ದು, ಇನ್ಮುಂದೆ ಗೋ ಕಳ್ಳರು ಕಂಡರೆ ನಡು ರಸ್ತೆಯಲ್ಲಿಯೇ ಅವರಿಗೆ ಗುಂಡು ಹೊಡೆಯಬೇಕು’ ಎಂದು ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. `ಈ ಬಗ್ಗೆ ಪೊಲೀಸರಿಗೆ ಸಹ ಕಟ್ಟುನಿಟ್ಟಿನ ಸೂಚನೆ ಕೊಡುವೆ’…
ಸಾಲ ಮನ್ನಾ ಆಸೆಯಿಂದ ಸುಳ್ಳು ಹೇಳಿದರು: ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡರು!
ಮೈಕ್ರೋ ಫೈನಾನ್ಸಿನವರಿಂದ ಸಾಲ ಪಡೆದಿದಲ್ಲದೇ ಉಳಿದವರಿಗೂ ಸಾಲ ಕೊಡಿಸಿ ಆ ಹಣವನ್ನು ಸ್ವಂತ ಬಳಕೆ ಮಾಡಿಕೊಂಡ ಮಹಿಳೆಯರು ಆ ಸಾಲ ಮರುಪಾವತಿ ಮಾಡಲಾಗದೇ ಆತ್ಮಹತ್ಯೆಯ ಬೆದರಿಕೆವೊಡ್ಡಿದ್ದು, ಇದನ್ನು ಅರಿತ ಪೊಲೀಸರು ಮಹಿಳೆಯರು ಹಾಗೂ ಮೈಕ್ರೋ ಫೈನಾನ್ಸಿನವರನ್ನು ಕರೆಯಿಸಿ ಬುದ್ದಿ ಹೇಳಿದ್ದಾರೆ. ದಾಂಡೇಲಿಯ…
ಕಾಡಿನಲ್ಲಿದ್ದ ಎಲೆಮಾನವರ ಮೇಲೆ ಪೊಲೀಸರ ಬಾಣ: ಒಬ್ಬನ ಸೆರೆ!
ವನ್ಯಜೀವಿ ಆಕ್ರಮಣ ಭೀತಿ, ವಿಪರೀತ ಸೊಳ್ಳೆ ಕಾಟದ ನಡುವೆಯೂ ಮುರುಡೇಶ್ವರದ ಬೈಲೂರು ತಿರುವಿನ ಅರಣ್ಯ ಪ್ರದೇಶದಲ್ಲಿ ಅಂದರ್-ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಫೆಬ್ರವರಿ 2ರ ರಾತ್ರಿ 8.30ಕ್ಕೆ ಜಟ್ಟಪ್ಪ ನಾಯ್ಕ ಎಂಬಾತರು ಬೈಲೂರು ಅರಣ್ಯ ಪ್ರವೇಶಿಸಿದ್ದರು. ಅವರ ಜೊತೆ…







