6
ಪತ್ನಿ ಮೇಲೆ ಮುನಿಸು: ನೇಣಿಗೆ ಶರಣಾದ ವ್ಯಸನಿ!

ಕುಮಟಾ: ಅಳ್ವೆಕೊಡಿಯ ಶಾಂತಾ ನರೋನಾ (65) ಎಂಬಾತರು ಮನೆಯವರ ಮೇಲಿನ ಮುನಿಸಿನಿಂದ ಮರಕ್ಕೆ ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ. ಅಳ್ವೆಕೊಡಿ ಕಲಭಾಗದ ಶಾಂತಾ ನರೋನಾ ವಿಪರೀತ ಸರಾಯಿ ಕುಡಿಯುತ್ತಿದ್ದರು. ಮಧ್ಯ ಸೇವನೆ ಮಾಡದಂತೆ ಅವರಿಗೆ ಪತ್ನಿ ಬುದ್ದಿ ಹೇಳಿದ್ದರು. ಇದೇ ವಿಷಯವಾಗಿ ಜುಲೈ…

ಮೊದಲು ಹೊಟ್ಟೆನೋವು.. ನಂತರ ಎದೆನೋವು: ಉಸಿರಾಟ ಸಮಸ್ಯೆಯಿಂದ ಸಾವನಪ್ಪಿದ ಕಾರ್ಮಿಕ

ಕಾರವಾರ: ಮುದುಗಾದ ಎಲ್ ಆಂಡ್ ಟಿ ಕಂಪನಿಗೆ ಕೆಲಸಕ್ಕೆ ಹೋಗುತ್ತಿದ್ದ ಉತ್ತರ ಪ್ರದೇಶದ ಉಮೇಶ ಕುಶವಾಲಾ (43) ಎಂಬಾತರು ಅತಿಯಾದ ಹೊಟ್ಟೆನೋವು ಹಾಗೂ ಎದೆನೋವಿನಿಂದ ಸಾವನಪ್ಪಿದ್ದಾರೆ. ಅಮದಳ್ಳಿಯ ಕಾರ್ಮಿಕ ಕಾಲೋನಿಯಲ್ಲಿ ವಾಸವಾಗಿದ್ದ ಉಮೇಶ್ ಕಳೆದ ಒಂದು ವಾರದಿಂದ ಹೊಟ್ಟೆನೋವು ಎನ್ನುತ್ತಿದ್ದರು. ನಂತರ…

ಭಾರೀ ಮಳೆ ಜೊತೆ ಭೂ ಕಂಪನ: ರಸ್ತೆ ನಡುವೆ ದೊಡ್ಡ ಬಿರುಕು

ಅತಿಯಾದ ಮಳೆ, ಭೂ ಕಂಪನದ ಕಾರಣ ಶಿರಸಿ ಯಲ್ಲಾಪುರ ಹಾಗೂ ಅಂಕೋಲಾ ಸಂಪರ್ಕಕ್ಕೆ ಅನುಕೂಲವಾಗಿದ್ದ ಕನಕನಳ್ಳಿಯ ಬಳಜಗ್ಗೆ ಮೇಲ್ಬಾಗದ ಬಳಿ ಶನಿವಾರ ಸಂಜೆ ರಸ್ತೆ ಇಬ್ಬಾಗವಾಗಿದೆ. ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಪ್ರದೇಶದ ರಸ್ತೆ ಇದಾಗಿದ್ದು, ಮಳೆ…

ಗಂಧದ ಮರದ ಮೇಲೆ ಕಳ್ಳರ ಕಣ್ಣು

ಮುಂಡಗೋಡು: ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪರಶುರಾಮ ಕಟ್ಟಿಮನಿ ಎಂಬಾತರ ಹೊಲದಲ್ಲಿ ಕಳ್ಳತನ ನಡೆದಿದೆ. ಕೋಡಂಬಿಯಲ್ಲಿ ಪಶುರಾಮ ಕಟ್ಟಿಮನಿ ಅವರು 4 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗಂಧದ ಗಿಡಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಜುಲೈ 15ರ ರಾತ್ರಿ ಹೊಲಕ್ಕೆ ನುಗ್ಗಿದ…

ಗುಡ್ಡದ ಗಣಿ: ಕೆಲವರಿಗೆ ಉದ್ಯೋಗ – ಹಲವರಿಗೆ ಸಂಕಷ್ಟ

ಕುಮಟಾ: ಗೋಕರ್ಣ ಬಳಿಯ ಬೆಲೇಖಾನ ಗುಡ್ಡದ ಮೇಲೆ ನಡೆಸುತ್ತಿರುವ ಚಿರೆಕಲ್ಲು ಗಣಿಗಾರಿಕೆಯಿಂದ ಅದರ ತಳಭಾಗದಲ್ಲಿರುವ 10 ಮನೆಗಳಿಗೆ ಅಪಾಯ ಎದುರಾಗಿದೆ. ಹೀಗಾಗಿ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಆ ಭಾಗದ ಜನ ಆಗ್ರಹಿಸಿದ್ದಾರೆ. ಗಣಿಗಾರಿಕಾ ಪ್ರದೇಶಕ್ಕೆ ತೆರಳಿದ ಸ್ಥಳೀಯರು ಅಲ್ಲಿನ ಪರಿಸ್ಥಿತಿಯ…

ಜೋಗ ವೀಕ್ಷಣೆಗೆ ಜನಸಾಗರ

ಶರಾವತಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆ ಪ್ರಸಿದ್ಧ ಜೋಗ ಜಲಪಾತ ವೀಕ್ಷಣೆಗೆ ಸಾವಿರಾರು ಜನ ಆಗಮಿಸುತ್ತಿದ್ದಾರೆ. ಶನಿವಾರ ಹಾಗೂ ಭಾನುವಾರ ಅತ್ಯಧಿಕ ಪ್ರವಾಸಿಗರಿಂದ ಜೋಗ ತುಂಬಿಕೊoಡಿದೆ. ಮಲೆನಾಡಿನ ಪ್ರವಾಸಿ ತಾಣಗಳ ಹೆಬ್ಬಾಗಿಲು ಎಂದೇ ಪ್ರಖ್ಯಾತಿ ಪಡೆದಿರುವ ಶಿವಮೊಗ್ಗ ಜಿಲ್ಲೆಯಯಲ್ಲಿಯೂ ಮಳೆ…

ಕೃಷಿ ಹಾಗೂ ಹೊಲಿಗೆ ನಿಮ್ಮ ಆಸಕ್ತಿ ಯಾವುದು? ತರಬೇತಿಗೆ ಇಂದೇ ಅರ್ಜಿ ಸಲ್ಲಿಸಿ!

ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ತರಬೇತಿ ಸಂಸ್ಥೆಯಲ್ಲಿ 18ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗ ಯುವಕರಿಗಾಗಿ ಆಗಸ್ಟ್ ತಿಂಗಳ ಮೂರನೇ ವಾರದಲ್ಲಿ 30 ದಿನಗಳ ಪುರುಷರ ಹೊಲಿಗೆ ತರಬೇತಿ ಮತ್ತು 13 ದಿನಗಳ ಸಮಗ್ರ ಕೃಷಿ ತರಬೇತಿ ನಡೆಯಲಿದೆ.…

ಪ್ಲಾಸ್ಟಿಕ್ ಧ್ವಜ ಮಾರಾಟ ಮಾತ್ರವಲ್ಲ, ಖರೀದಿಯೂ ನಿಷಿದ್ಧ!

ರಾಷ್ಟ್ರೀಯ ಗೌರವ ಕಾಯ್ದೆ 1971 ಮತ್ತು ಭಾರತದ ಧ್ವಜ ಸಂಹಿತೆ 2012ರಡಿ ಪ್ಲಾಸ್ಟಿಕ್ ಧ್ವಜ ಮಾರಾಟ ಹಾಗೂ ಖರೀದಿ ಎರಡೂ ನಿಷಿದ್ಧ. ಹೀಗಾಗಿ ಯಾರೂ ಪ್ಲಾಸ್ಟಿಕ್ ಧ್ವಜ ಬಳಸದಂತೆ ಪರಿಸರ ಮಾಲಿನ್ಯ ಇಲಾಖೆ ಪ್ರಕಟಿಸಿದೆ. ಧ್ವಜಕ್ಕೆ ಇರುವ ಕಡ್ಡಿ ಸಹ ಪ್ಲಾಸ್ಟಿಕ್…

ಯಕ್ಷಶ್ರೀ: ಸ್ತ್ರೀ ಪಾತ್ರದಿಂದಲೇ ಸೈ ಎನಿಸಿಕೊಂಡ ಗಣಪತಿ ಭಾಗ್ವತ..

ಮತ್ತೀಘಟ್ಟ ಊರಿಗೆ ಹಿಂದೆ ಯಾಣವನ್ನೂ ಸೇರಿಸಿ ಯಾಣಮತ್ತೀಘಟ್ಟ ಎಂದೇ ಕರೆಯುತ್ತಿದ್ದರು. ಇವೆರಡೂ ಊರುಗಳಿಗೂ ಆಧುನಿಕತೆಯ ಬೆಳಕು ಹರಿಯುವ ಮುನ್ನವೇ ಧಾರ್ಮಿಕ, ಸಾಂಸ್ಕೃತಿಕ, ಸಾಂಘಿಕ ವಾತಾವರಣ ಜಾಗ್ರತವಾಗಿತ್ತು. ಮಳೆಗಾಲ ನಾಲ್ಕು ತಿಂಗಳು ಸೂರ್ಯನ ಬೆಳಕನ್ನೂ ಕಾಣದ ಪ್ರದೇಶಗಳಲ್ಲಿ ಇಡೀ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು…

ಮಳೆಗಾಲದ ಮಲೆನಾಡು…

ಉತ್ತರ ಕನ್ನಡ ಜಿಲ್ಲೆಯ ಮುಂಗಾರು ಮಳೆಯ ಅನುಭೂತಿ ಹೊಸ ಪ್ರಪಂಚಕ್ಕೆ ನಮ್ಮನ್ನು ಕರೆದೊಯುತ್ತದೆ. ದುಂಬಿಯ ಝೇಂಕಾರದಿoದ ಹಿಡಿದು ಕಪ್ಪೆಗಳ ವಟವಟ ಸದ್ದಿನವರೆಗೂ ಅನುಭವಿಸಿದವರಿಗೆ ಮಾತ್ರ ಅದರ ಕಷ್ಟ ಸುಖ ಗೊತ್ತು! ಮಳೆಗಾಲದ ಮಲೆನಾಡು ಪರಿಚಯಿಸುವ ದಾಂಡೇಲಿ ವಿಡಿಯೋ ಇಲ್ಲಿ ನೋಡಿ..

You cannot copy content of this page