6
ಬಹಿರ್ದೆಸೆಗೆ ಹೋದವ ನೀರು ಪಾಲಾದ!

ಭಟ್ಕಳ: ಬಾಳೆಹಿತ್ಲುವಿನ ವಸಂತ ಕುಪ್ಪ ನಾಯ್ಕ (53) ಎಂಬಾತ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಈವರೆಗೂ ಆತ ಪತ್ತೆಯಾಗಿಲ್ಲ. ಜುಲೈ 17ರ ಮಧ್ಯಾಹ್ನ ಈತ ಬಾಳೆಹಿತ್ಲುವಿನ ಅಳ್ವೆಕೊಡಿಯ ನದಿ ತಟಕ್ಕೆ ಬಹಿರ್ದೆಸೆಗೆ ಹೋಗಿದ್ದ. ಆಗ ನದಿಯಲ್ಲಿ ಕಾಲು ಜಾರಿ ಬಿದ್ದಿದ್ದು ಕೊಚ್ಚಿ…

ಬರ್ಗಿಯಲ್ಲಿಯೂ ಭೂ ಕುಸಿತ: ಸಂಚಾರಕ್ಕೆ ತಡೆ

ಕುಮಟಾ ತಾಲೂಕಿನ ಬರ್ಗಿ ಗುಡ್ಡ ಕುಸಿತವಾಗಿದ್ದು, ಹೆದ್ದಾರಿ ಮೇಲೆ ಮಣ್ಣಿನ ರಾಶಿ ಬಿದ್ದಿದೆ. ಹೀಗಾಗಿ ಈ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ. ಪ್ರಸ್ತುತ ಗೋಕರ್ಣ, ಕಾರವಾರ, ಗೋವಾ, ಯಲ್ಲಾಪುರ ಸಂಚರಿಸುವ ವಾಹನಗಳನ್ನು ಬರ್ಗಿ, ಕಿಮಾನಿ, ಕೊಡ್ಕಣಿ ಮಾರ್ಗದಲ್ಲಿ ಬಿಡಲಾಗುತ್ತಿದೆ. ಬೆಳಗ್ಗೆ ಅಲ್ಪ ಪ್ರಮಾಣದಲ್ಲಿ…

ಮೌಲ್ಯಗಳ ಶ್ರೇಷ್ಠತೆಯ ವರ್ಧನೆಯೇ ಪರಂಪರೆ: ರಾಘವೇಶ್ವರ ಸ್ವಾಮೀಜಿ

ಕುಮಟಾ: `ಹಿಂದಿನ ಪೀಳಿಗೆಯ ಶ್ರೇಷ್ಠತೆಯನ್ನು ಮುಂದಿನ ಪೀಳಿಗೆಗೆ ಒಯ್ಯುವ ಜತೆಗೆ ಅದನ್ನು ವರ್ಧಿಸಿ ಮತ್ತಷ್ಟು ಶ್ರೇಷ್ಠವಾಗಿಸುವುದೇ ಪರಂಪರೆ. ಹಿಂದಿನ ಎಲ್ಲ ಒಳಿತುಗಳು ಮುಂದಿನ ಪೀಳಿಗೆಗೆ ತಲುಪಿದಾಗ ಅದು ಮತ್ತಷ್ಟು ಶ್ರೇಷ್ಠವಾಗುತ್ತದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು. ಗೋಕರ್ಣದ ಅಶೋಕೆಯಲ್ಲಿ…

ಹೊಳೆಯಲ್ಲಿ ತೇಲಿ ಪೊದೆಗೆ ಸಿಲುಕಿದ ಶವ

ಭಟ್ಕಳ: ಮುರುಡೇಶ್ವರದ ಮಧು ಈಶ್ವರ ನಾಯ್ಕ ಅವರ ಮನೆ ಹಿತ್ತಲಿನಲ್ಲಿ ಅಪರಿಚಿತ ಶವ ದೊರೆತಿದೆ. ಕಾಯ್ಕಿಣಿಯ ಹೇರಾಡಿಯಲ್ಲಿ ವಾಸವಿರುವ ಮಧು ನಾಯ್ಕ ಹಿತ್ತಿಲ ಕಡೆ ಹೋದಾಗ ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನದಿಯಲ್ಲಿ ಕೊಚ್ಚಿಕೊಂಡು ಬಂದ ಶವ ಗಿಡಗಳಿಗೆ ಸಿಕ್ಕಿಬಿದ್ದಿದ್ದು,…

ಅಪಾಯ ಸ್ಥಳ ಗುರುತಿಗೆ ಎರಡು ದಿನ ಗಡುವು

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಎರಡು ದಿನದಲ್ಲಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು `ಜಿಲ್ಲೆಯಲ್ಲಿ ಅಪಾಯಕಾರಿಯಾಗಿರುವ ಶಾಲೆಗಳು ಅಂಗನವಾಡಿಗಳು, ಜನವಸತಿ ಪ್ರದೇಶಗಳ ಸಂಪೂರ್ಣ…

ಮಳೆ ಜೊತೆ ಮುಂದುವರೆದ ರೆಡ್ ಅಲರ್ಟ: ಜುಲೈ 19ಕ್ಕೂ ಶಾಲಾ-ಕಾಲೇಜಿಗೆ ರಜೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದ ಮಳೆ ಮುಂದುವರೆದಿದ್ದು, ಶಾಲಾ ಕಾಲೇಜುಗಳಿಗೆ ಘೋಷಿಸಿದ್ದ ರಜೆಯನ್ನು ಜುಲೈ 19ಕ್ಕೂ ಮುಂದುವರೆಸಲಾಗಿದೆ.  ಹೀಗಾಗಿ ಈ ಶುಕ್ರವಾರ ಮಕ್ಕಳು ಹಾಗೂ ಶಿಕ್ಷಕರು ಶಾಲೆಗೆ ಬರಬೇಕಾಗಿಲ್ಲ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ,…

ಸ್ವಚ್ಚತೆಯ ಪಾಠ ಮಾಡಿದ ಪ್ರಾಚಾರ್ಯ

ಯಲ್ಲಾಪುರ: ಕಾಳಮ್ಮನಗರದ ವಸತಿ ನಿಲಯ, ಪ್ರೌಢಶಾಲೆ, ಐಟಿಐ ಹಾಗೂ ಪದವಿ ಕಾಲೇಜು ನಡುವೆ ಕಿಡಿಗೇಡಿಗಳು ಗುರುವಾರ ಭಾರೀ ಪ್ರಮಾಣದ ಕಸ ಎಸೆದಿದ್ದು, ಪದವಿ ಕಾಲೇಜು ಪ್ರಾಚಾರ್ಯ ಡಾ ಆರ್ ಡಿ ಜನಾರ್ಧನ್ ವಿಶೇಷ ಮುತುವರ್ಜಿವಹಿಸಿ ಆ ತ್ಯಾಜ್ಯವನ್ನು ತೆಗಿಸಿದ್ದಾರೆ. ಈ ಭಾಗದಲ್ಲಿ…

ಶಿರೂರು ಭೂ ಕುಸಿತ: ನೆರವು ನೀಡಲು ಹೋದವನೂ ನಾಪತ್ತೆ

ಅಂಕೋಲಾದ ಶಿರೂರು ಭೂ ಕುಸಿತದಲ್ಲಿ ಕುಮಟಾದ ಜಗನ್ನಾಥ ನಾಯ್ಕ (61) ಎಂಬಾತರು ಸಿಲುಕಿದ್ದು, ಈವರೆಗೂ ಅವರ ಸುಳಿವು ಸಿಕ್ಕಿಲ್ಲ. ಅವರು ಬದುಕಿರುವ ಬಗ್ಗೆಯೂ ಮಾಹಿತಿ ಇಲ್ಲ. ಸಾವನಪ್ಪಿದ ಬಗ್ಗೆಯೂ ಖಚಿತ ಖಚಿತವಾಗಿಲ್ಲ. ಕುಮಟಾ ತಾಲೂಕಿನ ಬಾಡ-ಹುಬ್ಬಣಗೇರಿಯ `ಬಾಬ್ಲುಮನೆ’ಯ ಜಗನ್ನಾಥ ನಾಯ್ಕ ಶಿರೂರಿನಲ್ಲಿ…

ಬಡವನ ಬದುಕು ಕಿತ್ತುಕೊಂಡ ಭೂ ಕುಸಿತ: ತಾಯಿ ಮಾಡಿದ ಗಂಜಿಯೂ ಮಣ್ಣುಪಾಲು!

`ಗಂಜಿ ಮಾಡಿ ಇಡುವೆ, ಬೇಗ ಮನೆಗೆ ಬಾ’ ಎಂದು ಸಣ್ಣು ಗೌಡ ಕೂಗಿದ್ದರು. ಇದಕ್ಕೆ ತಲೆಯಾಡಿಸಿದ ಆಕೆಯ ಮಗ ಮಂಜು ಗೌಡ 10 ನಿಮಿಷ ಬಿಟ್ಟು ಮನೆ ಕಡೆ ಹೋದಾಗ ಅಲ್ಲಿ ಜೋಪಡಿಯೂ ಇರಲಿಲ್ಲ. ಆತನ ತಾಯಿ ಸಹ ಕಾಣಲಿಲ್ಲ. ಶಿರೂರಿನ…

ಸಿಗರೇಟಿನ ಸೀಕ್ರೆಟ್: ಸೀಸದ ಒಳಗೆ ಗಾಂಜಾ ಅಮಲು!

ಕಳೆದ ವಾರ ಸಿಗರೇಟಿನ ಸೀಸದಲ್ಲಿ ಗಾಂಜಾ ಸೇದುತ್ತಿದ್ದ ಇಬ್ಬರನ್ನು ಸೆರೆ ಹಿಡಿದಿದ್ದ ಪೊಲೀಸರು ಇದೀಗ ಮತ್ತೆ ಇಬ್ಬರನ್ನು ಅಂಥಹುದೇ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದಾರೆ. ಬಂಧಿತ ಇಬ್ಬರು ಸಹ 25 ವರ್ಷ ಒಳಗಿನವರು. ದಾಂಡೇಲಿ ನಿರ್ಮಲ ನಗರದ ಶಂಕರ್ ಸದಾಶಿವ ಅರ್ಕಸಾಲಿ (24)…

You cannot copy content of this page