ಸಾಗರಮಾಲಾ | ಕನಸಿನ ಯೋಜನೆಗೆ ಆರಂಭದಲ್ಲಿಯೇ ಕಣ್ಣೀರು: ಬಂದರಿನ ಜೊತೆ ಹೆದ್ದಾರಿ-ರೈಲ್ವೆ ಸಂಪರ್ಕ ಮಾಡುವವರಿಗೆ ಮೋಸ!
ರಾಷ್ಟ್ರೀಯ ಹೆದ್ದಾರಿ, ಬಂದರು ಹಾಗೂ ರೈಲ್ವೆ ಹಳಿಯನ್ನು ಸಂಪರ್ಕ ಜೋಡಿಸುವ ಉದ್ದೇಶದಿಂದ ಭೂಮಿ ಹುಡುಕುತ್ತಿದ್ದ ಕಂಪನಿಗೆ ಅಂಕೋಲಾದ ರಿಯಲ್ ಎಸ್ಟೇಟ್ ಎಜಂಟರು 8 ಕೋಟಿ ರೂ ಮೋಸ ಮಾಡಿದ್ದಾರೆ. ಹೆದ್ದಾರಿ, ಬಂದರು ಹಾಗೂ ರೈಲ್ವೆ ಸಂಪರ್ಕ ಜೋಡಿಸುವುದಕ್ಕಾಗಿ ಮುಂಬೈ ಮೂಲದ JSW…
ದಕ್ಷ ಪೊಲೀಸ್’ಗೆ ದೊರೆತ ದಕ್ಷತಾ ಪದಕ
ಯಲ್ಲಾಪುರ: 2021ರಲ್ಲಿ ಮುಖ್ಯಮಂತ್ರಿಗಳ ಬಂಗಾರ ಪದಕ ಪಡೆದಿದ್ದ ಯಲ್ಲಾಪುರ ಸಿಪಿಐ ರಮೇಶ ಹಾನಾಪುರ ಅವರಿಗೆ ಇದೀಗ ಕೇಂದ್ರ ಸರ್ಕಾರದ `ದಕ್ಷತಾ ಪದಕ’ ದೊರೆತಿದೆ. ಅತ್ಯಾಚಾರ ಪ್ರಕರಣವೊಂದರಲ್ಲಿ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸಿದನ್ನು ಗುರುತಿಸಿದ ಕೇಂದ್ರ ಸರ್ಕಾರ ಅವರಿಗೆ ಈ ಪ್ರಶಸ್ತಿ ಘೋಷಿಸಿದೆ.…
ಬೆಲೆ 3.44 ಲಕ್ಷ ರೂ: ವಿದೇಶಿ ಕೆಲಸ ಮಾರಾಟಕ್ಕಿದೆ!
ಕಾರವಾರ: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ 3.44 ಲಕ್ಷ ರೂ ಹಣ ಪಡೆದವ ಗೋವಾಗೆ ಪರಾರಿಯಾಗಿದ್ದು, ಹಣ ಮರಳಿ ಕೇಳಿದವರಿಗೆ ಜೀವ ಬೆದರಿಕೆ ಒಡ್ಡಿದ್ದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ. ಅಮದಳ್ಳಿಯ ಮೊಂಟೊ ಕ್ರಿಸ್ಟೋ ಗೊನ್ಸಾಲಿಸ್ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ…
ಕಳ್ಳನನ್ನು ಕರೆತರುತ್ತಿದ್ದ ಕಾರಿಗೆ ಕಂಟೇನರ್ ಡಿಕ್ಕಿ: ಪೊಲೀಸರ ಸ್ಥಿತಿ ಗಂಭೀರ
ಗೋವಾದಿoದ ಕಳ್ಳನನ್ನು ಬಂಧಿಸಿ ಕರೆತರುತ್ತಿದ್ದ ಕಾರಿಗೆ ಕಂಟೇನರ್ ಗುದ್ದಿದ ಪರಿಣಾಮ ಕಳ್ಳನ ಜೊತೆ ಪೊಲೀಸರು ಗಾಯಗೊಂಡಿದ್ದಾರೆ. ಬುಧವಾರ ಹಳಿಯಾಳ ಠಾಣೆಯ ಪೊಲೀಸರು ಗೋವಾಗೆ ತೆರಳಿದ್ದರು. ಆನಮೋಡಿನ ಬಳಿ ಕಳ್ಳನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆತರುತ್ತಿದ್ದರು. ಕಳ್ಳನನ್ನು ಬಂಧಿಸುವ ಕಾರ್ಯಾಚರಣೆಗೆ…
ವಿದೇಶಿ ಉಪನ್ಯಾಸಕನ ಮೇಲೆ ಹೆಜ್ಜೇನು ದಾಳಿ: ನಾಲ್ವರು ಅಸ್ವಸ್ಥ
ಕುಮಟಾ: ಗೋಕರ್ಣದ ರಾಮತೀರ್ಥದ ಬಳಿ ವಿಹರಿಸುತ್ತಿದ್ದ ನಾಲ್ವರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ಅವರು ಚಿಕಿತ್ಸೆಗೆ ದಾಖಲಾಗಿದ್ದಾರೆ. ಸೋಮವಾರ ಸಂಜೆ ದೆಹಲಿಯಿಂದ ಮೂರು ಪ್ರವಾಸಿಗರು ಗೋಕರ್ಣಕ್ಕೆ ಆಗಮಿಸಿದ್ದರು. ಅವರು ರಾಮತೀರ್ಥದ ಬಳಿ ಸಂಚರಿಸುತ್ತಿದ್ದರು. ಇದರೊಂದಿಗೆ ವಿದೇಶಿ ಉಪನ್ಯಾಸಕರೊಬ್ಬರು ಅಲ್ಲಿ ಚಾರಣ ನಡೆಸುತ್ತಿದ್ದರು.…
ರಾಷ್ಟ್ರೀಯ ಹೆದ್ದಾರಿ | ಅಭಿವೃದ್ಧಿ ಜೊತೆ ಹೊಂಡ ಮುಚ್ಚುವ ಕೆಲಸದ ಬಗ್ಗೆ ಸಂಸದರು ಹೇಳಿದ್ದೇನು?
`ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ ಹಾಗೂ ಭಟ್ಕಳ-ಕಾರವಾರ ಗಡಿವರೆಗಿನ ಚತುಷ್ಪಥ ಕಾಮಗಾರಿ ಪೂರ್ಣಗೊಳಿಸಲು ಆಡಳಿತಾತ್ಮಕ ಸಮಸ್ಯೆಯಿದ್ದು, ಡಿಸೆಂಬರ್ ಒಳಗೆ ಆ ಸಮಸ್ಯೆ ಬಗೆಹರಿಸಲಾಗುತ್ತದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ವಿವಿಧ ಇಲಾಖೆಗಳ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ…
ಕಾಸು ಕೊಟ್ಟರೆ ಮಾತ್ರ ಅನುಮತಿ: ಒಂಟಿ ಒಂಟಿಯಾಗಿರುವ ಒಂಟೆ!
ಕುಮಟಾ: ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಕಳೆದ ಒಂದು ತಿಂಗಳಿನಿ0ದ ಒಂಟೆಗಳನ್ನು ಕಟ್ಟಲಾಗಿದೆ. ಪ್ರವಾಸಿಗರನ್ನು ಹೊತ್ತು ಕಡಲ ತೀರದಲ್ಲಿ ಸಂಚಾರ ನಡೆಸಲು ಒಂಟೆಗಳಿಗೆ ಇನ್ನೂ ಅನುಮತಿ ಸಿಕ್ಕಿಲ್ಲ! ಕಡಲತೀರಕ್ಕೆ ಆಗಮಿಸುವ ಕೆಲವರು ಎತ್ತರದ ಒಂಟೆಗಳ ಮೇಲೆ ಕುಳಿತು ತಿರುಗಾಟ ಮಾಡಲು ಬಯಸುತ್ತಾರೆ.…
9 ಕೋಟಿ ರೂ ದಂಡ.. 7 ವರ್ಷ ಜೈಲು: ಸತೀಶ್ ಸೈಲ್ ರಾಜಕೀಯ ಭವಿಷ್ಯ ಅತಂತ್ರ!
ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್’ಗೆ ಒಟ್ಟು 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಇದರೊಂದಿಗೆ 9.60 ಕೋಟಿ ರೂ ದಂಡ ಪಾವತಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. ಈ ಆದೇಶದಿಂದ ದಿಕ್ಕೆಟ್ಟಿರುವ ಸತೀಶ್ ಸೈಲ್ ಆದೇಶದ ವಿರುದ್ಧ…
ರಾಷ್ಟ್ರೀಯ ಹೆದ್ದಾರಿ | ಆ ಕಡೆ ಹೊಂಡ.. ಈ ಕಡೆ ಬೊಂಡ!
ಅoಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ಬೀಳುತ್ತಿದ್ದು, ಹೆದ್ದಾರಿ ಹೊಂಡದ ಜೊತೆ ತ್ಯಾಜ್ಯದ ದುರ್ವಾಸನೆ ಸಹಿಸಿಕೊಂಡು ಪ್ರಯಾಣಿಕರು ಮುಂದೆ ಸಾಗುತ್ತಿದ್ದಾರೆ. ಅಂಕೋಲಾ ಹಾರವಾಡ ಬಳಿ ಗುರುವಾರ ರಾಶಿ ರಾಶಿ ಪ್ರಮಾಣದಲ್ಲಿ ಸೀಯಾಳ…
ಸರ್ಕಾರಿ ಕಂಪ್ಯುಟರ್ ಮೇಲೆ ಚೀನಾ ದಾಳಿ: ಕಣ್ಣಿಗೆ ಕಾಣದ ವೈರಸ್ ವಿರುದ್ಧ ಅಧಿಕಾರಿ ದೂರು!
ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಕಚೇರಿವೊಂದರ ಮೇಲೆ ಚೀನಾ ಆಕ್ರಮಣಕಾರರು ತಾಂತ್ರಿಕ ದಾಳಿ ನಡೆಸಿದ್ದಾರೆ. ಕಚೇರಿಯ ಕಂಪ್ಯುಟರ್’ಗಳನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ಕಿಡಿಗೇಡಿಗಳು ಇಲ್ಲಿನ ದಾಖಲೆಗಳನ್ನು ಅಪಹರಿಸಿದ ಅನುಮಾನ ಕಾಡುತ್ತಿದೆ. ಹಳಿಯಾಳ ತಾಲೂಕು ಪಂಚಾಯತ ಕಚೇರಿಯ 19 ಕಂಪ್ಯುಟರ್’ಗಳು ಚೀನಾ ವೈರಸ್…







