ಮಟ್ಕಾ ತಡೆದ ಮಹಿಳಾ ಅಧಿಕಾರಿ
ಹಳಿಯಾಳ: ಮಟ್ಕಾ ಆಟದಲ್ಲಿ ನಿರತರಾಗಿದ್ದವರ ಮೇಲೆ ದಾಳಿ ನಡೆಸಿದ ಸಿಇಎನ್ ಪೊಲೀಸ್ ಠಾಣೆಯ ಉಪಾಧ್ಯಕ್ಷೆ ಬಿ ಅಶ್ವನಿ ಒಟ್ಟು ಐದು ಜನರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಹಳಿಯಾಳ ಬಸ್ ನಿಲ್ದಾಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಟ್ಕಾ ನಡೆಯುತ್ತಿರುವ…
ಕಾಳಿ-ಶರಾವತಿ-ಅತ್ತಿವೇರಿ: ಇಲ್ಲಿ ಅಭಿವೃದ್ಧಿಗೂ ಮುನ್ನ ಅನುಮತಿ ಕಡ್ಡಾಯ!
ಕಾರವಾರ: ಕಾಳಿ ಅರಣ್ಯ ಮೀಸಲು, ಶರಾವತಿ ಕಣಿವೆ ಹಾಗೂ ಅತ್ತಿವೇರಿ ಪಕ್ಷಿಧಾಮವೂ ಪರಿಸರ ಸೂಕ್ಷ್ಮ ವಲಯಗಳಗಳಾಗಿದ್ದು, ಇಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸುವ ಮುನ್ನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಮತಿ ಕಡ್ಡಾಯ. `ಕಂದಾಯ ಇಲಾಖೆ ಸಹ ಅನುಮತಿ ನೀಡುವ ಮೊದಲು ಅರಣ್ಯಾಧಿಕಾರಿಗಳ ಅಭಿಪ್ರಾಯ…
ಅಕ್ರಮ ಎತ್ತು ಸಾಗಾಟ | ಅಲ್ಲಿ ಇಲ್ಲಿ ತಪ್ಪಿಸಿಕೊಂಡವರು ಇಲ್ಲಿ ಸಿಕ್ಕಿಬಿದ್ದರು!
ಯಲ್ಲಾಪುರ: ಅಕ್ಕಿ ಆಲೂರಿನಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಎತ್ತುಗಳನ್ನು ಯಲ್ಲಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾವೇರಿಯ ಪಕ್ಕಿರೇಶ ದೊಡ್ಡಮನಿ ಹಾಗೂ ಮಂಜು ಹರಿಜನ ಸೇರಿಕೊಂಡು ಬುಲೇರೋ ವಾಹನದದಲ್ಲಿ ಆರು ಎತ್ತುಗಳನ್ನು ಸಾಗಿಸುತ್ತಿದ್ದರು. ಹೋಲಿ ರೋಜರಿ ಶಾಲೆ ಮುಂದೆ ಪಿಎಸ್‌ಐ ಶೇಡಜಿ ಚೌಹಾಣ್…
ಸ್ಕೂಟಿ ಪಕ್ಕ ನಿಂತವರಿಗೆ ಗುದ್ದಿದ ಬಿಳಿ ಬಣ್ಣದ ಕಾರು
ಕಾರವಾರ: ಅಂಕೋಲಾದಿoದ ಕಾರವಾರ ಕಡೆ ಚಲಿಸುತ್ತಿದ್ದ ಬಿಳಿ ಬಣ್ಣದ ಕಾರು ಗಣೇಶ ಮಾಹೇಕರ್ ಹಾಗೂ ಸಂಜು ಗೌಡ ಅವರಿಗೆ ಗುದ್ದಿದೆ. ತೋಡೂರು ಪಂಚಾಯತ ಸಮೀಪ ಈ ಅಪಘಾತವಾಗಿದೆ. ರಸ್ತೆ ಅಂಚಿನಲ್ಲಿ ಸ್ಕೂಟಿ ನಿಲ್ಲಿಸಿಕೊಂಡು ಮಾತನಾಡುತ್ತಿದ್ದವರಿಗೆ ಕಾರು ಡಿಕ್ಕಿಯಾಗಿದೆ. ಬಿಳಿ ಬಣ್ಣದ ಕಾರು…
ಸೇವೆಗೆ ಸಿಕ್ಕ ಸನ್ಮಾನ!
ಯಲ್ಲಾಪುರ: ನಂದೂಳ್ಳಿಯಲ್ಲಿ ಗ್ರಾಮ ಒನ್ ಸೇವಾ ಕೇಂದ್ರ ನಡೆಸುತ್ತಿರುವ ಸುರೇಶ ಸಿದ್ದಿ ಅವರ ಸೇವೆ ಪರಿಗಣಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಅವರನ್ನು ಸನ್ಮಾನಿಸಿದೆ. ನಂದೂಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸುರೇಶ ಸಿದ್ದಿ ಅವರಿಗೆ ಶಾಲು ಹೊದೆಸಿ ಗೌರವಿಸಲಾಯಿತು. ಕಳೆದ ಮೂರು ವರ್ಷಗಳಿಂದ ಸುರೇಶ…
ಮನೆ ಮುರಿದ ಗ್ರಾ ಪಂ ರಾಜಕೀಯ | ಪತ್ನಿ ಕೊಂದು ಆತ್ಮಹತ್ಯೆಗೆ ಯತ್ನಿಸಿದವನಿಗೆ ಜೀವಾವಧಿ ಜೈಲು!
ಮುಂಡಗೋಡ: ಗ್ರಾ ಪಂ ಸದಸ್ಯೆ ಅಕ್ಕಮ್ಮ ಅವರನ್ನು ಕೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಅಕ್ಕಮ್ಮ ಅವರ ಪತಿ ಬಸವರಾಜ ಮೇಲಿನಮನಿ’ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 2020ರಲ್ಲಿ ಮುಂಡಗೋಡ ಪಾಳಾ ಗ್ರಾಮ ಪಂಚಾಯತದ 3ನೇ ವಾರ್ಡಿಗೆ ಅಕ್ಕಮ್ಮ ಅವರು ಸ್ಪರ್ಧಿಸಿದ್ದರು. ಗೆಲುವಿನ ನಂತರ…
ಕಾರು-ಲಾರಿ ನಡುವೆ ಡಿಕ್ಕಿ: ಐವರಿಗೆ ಗಾಯ
ಹೊನ್ನಾವರ: ಕಾರು ಹಾಗೂ ಲಾರಿ ನಡುವೆ ಅಪಘಾತ ನಡೆದ ಪರಿಣಾಮ ರಸ್ತೆ ಅಂಚಿನಲ್ಲಿ ನಿಂತಿದ್ದ ಮೂವರಿಗೆ ಸೇರಿ ಒಟ್ಟು ಐದು ಜನರಿಗೆ ಪೆಟ್ಟಾಗಿದೆ. ಈ ಅಪಘಾತಕ್ಕೆ ಕಾರಣರಾದ ಲಾರಿ ಹಾಗೂ ಕಾರು ಚಾಲಕನ ವಿರುದ್ಧ ನಾಗರಾಜ ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.…
ಸ್ಕೂಟಿ ನಡುವೆ ಡಿಕ್ಕಿ: ನಾಲ್ವರಿಗೆ ಗಾಯ
ಕಾರವಾರ: ಪೊಲೀಸ್ ಅಧೀಕ್ಷಕರ ಕಚೇರಿ ಬಳಿ ರಸ್ತೆಗೆ ಅಡ್ಡಲಾಗಿರುವ ಹಂಪ್ ಅಪಘಾತಕ್ಕೆ ಕಾರಣವಾಗಿದೆ. ಎರಡು ಸ್ಕೂಟಿಗಳ ನಡುವೆ ನಡೆದ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಸಾಯಿಕಟ್ಟಾದ ಸಿಮ್ರಾನ್ ಸಯ್ಯದ್ (20) ಅವರು ಜನವರಿ 6ರಂದು ಕೋಡಿಭಾಗದ ಅರ್ಜುನ್ ಟಾಕೀಸ್ ಬಳಿಯಿಂದ ಪೊಲೀಸ್ ಅಧೀಕ್ಷಕರ…
ಪೊಲೀಸ್ ಸಿಬ್ಬಂದಿಗೆ ಗುದ್ದಿದ ಕಾರು: ಮೂರು ದಿನದ ನಂತರ ದೂರು!
ಅಂಕೋಲಾ: ಅಂಕೋಲಾದಿ0ದ ಕುಮಟಾ ಕಡೆ ಬೈಕಿನಲ್ಲಿ ಹೋಗುತ್ತಿದ್ದ ಪೊಲೀಸ್ ಸಿಬ್ಬಂದಿ ಮನೋಜ ಡಿ ಅವರಿಗೆ ಹಿಂದಿನಿoದ ಕಾರು ಗುದ್ದಿದೆ. ಅಪಘಾತದ ಬಗ್ಗೆ ಪೊಲೀಸ್ ದೂರು ದಾಖಲಾಗದಿರುವುದನ್ನು ನೋಡಿದ ಔಷಧ ವಿತರಕ ಜೈವಂತ ನಾಯ್ಕ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಜನವರಿ…
ಡಕೊಟಾ ಎಕ್ಸಪ್ರೆಸ್ | ಶಕ್ತಿ ಪ್ರಯಾಣಿಕರಿಗೆ ಅಡಿ ಹಲಿಗೆಯೇ ಗತಿ!
ಶಿರಸಿ: ಶಿರಸಿಯಿಂದ ಬನವಾಸಿಗೆ ಬಿಡುವ ಬಸ್ಸಿನಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಅಗತ್ಯ ಆಸನಗಳಿಲ್ಲ. ಬಸ್ಸಿನ ಹಿಂಬಾಗದ ಸೀಟುಗಳನ್ನು ತೆಗೆದಿರುವುದರಿಂದ ಅನೇಕ ಪ್ರಯಾಣಿಕರು ಬಸ್ಸಿನ ಅಡಿಭಾಗದ ಹಲಿಗೆಗಳ ಮೇಲೆ ಕುಳಿತು ಪ್ರಯಾಣಿಸುತ್ತಾರೆ! ಶಿರಸಿ-ಬನವಾಸಿ ಮಾರ್ಗದ ಬಸ್ಸಿನಲ್ಲಿ ಒಟ್ಟು 33 ಆಸನಗಳಿರಬೇಕು. ಆದರೆ, ಚಾಲಕ-ನಿರ್ವಾಹಕರ ಆಸನವೂ…







