ಗ್ಯಾಸ್ ಸಿಲೆಂಡರ್ ಸೋರಿಕೆ: ಹೊತ್ತಿ ಉರಿದ ಹೊಟೇಲ್!
ಸಿದ್ದಾಪುರ: ಬಿಳಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿದ್ದ ಹೊಟೇಲಿನಲ್ಲಿ ಗ್ಯಾಸ್ ಸಿಲೆಂಡರ್ ಅನಿಲ ಸೋರಿಕೆಯಾಗಿದ್ದು, ಅಗ್ನಿ ಅವಘಡ ನಡೆದಿದೆ. ಮಂಗಳವಾರ ಮಧ್ಯಾಹ್ನ ನಡೆದ ಈ ಅವಘಡದಲ್ಲಿ 2 ಲಕ್ಷ ರೂ ಮೌಲ್ಯದ ಸಾಮಗ್ರಿಗಳು ಕರಕಲಾಗಿದೆ. ಸರ್ವೋತ್ತಮ ಕೃಷ್ಣ ಭಟ್ ಅವರು ಬಿಳಗಿಯಲ್ಲಿ…
ಡಾಕ್ಟರ್ ವಿರುದ್ಧ ಮತ್ತೊಂದು ದೂರು: ರೋಗಿ ಹೇಳಿದ ಕಥೆಯೇ ಬೇರೆ!
ಕಾರವಾರ: ಆಯುಷ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ ಸಂಗಮೇಶ ಅವರ ಮೇಲೆ ಡಿ 11ರಂದು ಹಲ್ಲೆ ನಡೆದಿದ್ದು, ಆ ದಿನ ವೈದ್ಯರಿಗೆ ಕಪಾಳ ಮೋಕ್ಷ ಮಾಡಿದ ವಿನೋದ ಮಾಳ್ಸೆಕರ್ ಇದೀಗ ಹೊಸ ಕಥೆ ಬಿಚ್ಚಿಟ್ಟಿದ್ದಾರೆ. ರೋಗಿಯಿಂದ ಹಲ್ಲೆ ನಡೆದ ಬಗ್ಗೆ ವೈದ್ಯರು ದೂರು…
ಗೂಡಂಗಡಿ ಗೊಂದಲ | ರಿಕ್ಷಾ ಚಾಲಕರ ಪಟ್ಟು: ಅಧಿಕಾರಿಗಳಿಗೆ ಇಕ್ಕಟ್ಟು!
ಅಂಕೋಲಾ: ಅಂಚೆ ಕಚೇರಿ ಹಾಗೂ ಜೈ ಹಿಂದ್ ಹೈಸ್ಕೂಲ್ ಎದುರಿನ ಗೂಡಂಗಡಿ ವಿಚಾರವಾಗಿ ಪಟ್ಟಣದಲ್ಲಿ ಗೊಂದಲ ಸೃಷ್ಟಿಯಾಗಿದೆ. ಎರಡು ಬಣಗಳ ವಾಗ್ವಾದದಿಂದಾಗಿ ಅಧಿಕಾರಿಗಳು ಮೌನವಾಗಿದ್ದಾರೆ. ಮಂಗಳವಾರ ಇದೇ ವಿಷಯವಾಗಿ ಮಾತಿನ ಚಕಮಕಿ ನಡೆದಿದ್ದು, ಕೊನೆಗೂ ವಿಷಯ ಬಗೆಹರಿಯಲಿಲ್ಲ! `ಗೂಡಂಗಡಿಯಿoದಾಗಿ ರಿಕ್ಷಾ ನಿಲ್ದಾಣಕ್ಕೆ…
ವರ್ಷದ ಕೊನೆಗೆ ದುಖಃದ ವಾರ್ತೆ: ದುಡಿದು ತಿನ್ನುವವರ ಕನಸು ನುಚ್ಚು ನೂರು!
ಹೊನ್ನಾವರ: ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ, ವೃದ್ಧ ತಾಯಿಯ ಆರೈಕೆ, ಮಗು ಆಗಮನದ ಸಂತಸದಲ್ಲಿದ್ದ ಮೂವರು ಶರಾವತಿ ಸೇತುವೆ ಮೇಲೆ ಹೆಣವಾಗಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ಸಿನ ರೂಪದಲ್ಲಿ ಬಂದ ಜವರಾಯ ಆ ಮೂವರ ನೂರಾರು ಕನಸುಗಳನ್ನು ನುಚ್ಚು ನೂರು ಮಾಡಿದ್ದು, ಕುಟುಂಬದವರ ಆಕಂದ್ರನಕ್ಕೆ ಅಲ್ಲಿದ್ದವರೆಲ್ಲರೂ…
ಬೈಕಿನಿಂದ ಬಿದ್ದ ಮಹಿಳೆ ಸಾವು
ಅಂಕೋಲಾ: ಹಳವಳ್ಳಿಯಿಂದ ಗುಳ್ಳಾಪುರ ಕಡೆಗೆ ಬರುತ್ತಿದ್ದ ಬೈಕಿಗೆ ದನ ಅಡ್ಡ ಬಂದಿದ್ದು, ಬೈಕಿನಿಂದ ಬಿದ್ದ ಮಹಿಳೆ ಸಾವನಪ್ಪಿದ್ದಾರೆ. ರಾಮನಗುಳಿ ಸುಪರ್ ಮಾರ್ಕೇಟ್ ಬಳಿಯ ಸಿಮೆಂಟ್ ರಸ್ತೆ ಮೇಲೆ ಈ ಅಪಘಾತ ನಡೆದಿದೆ. ಡಿ 30ರ ಸಂಜೆ ಹಳವಳ್ಳಿ ಆದ್ರಳ್ಳಿಯ ಕೃಷ್ಣ ಸಿದ್ದಿ…
ಗಡಿಭಾಗದಲ್ಲಿ ಕಾಡು ಹಂದಿ ಕಾಟ: ಗೋವಾಗೆ ಹೋದರೂ ಬದುಕದ ಅಂಬಿಗ!
ಕಾರವಾರ: ಗೋವಾ – ಕಾರವಾರ ಗಡಿಯಲ್ಲಿ ಕಾಡು ಹಂದಿಗೆ ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದ ವಿಜಯ ಅಂಬಿಗ ಅವರನ್ನು ಚಿಕಿತ್ಸೆಗಾಗಿ ಗೋವಾದ ಬಾಂಬೋಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಅವರು ಸಾವನಪ್ಪಿದ್ದಾರೆ. ಕೋಡಿಭಾಗ ಸರ್ವೋದಯ ನಗರದ ವಿಜಯ ಅಂಬಿಗ ಹೊಟೇಲ್’ವೊಂದರಲ್ಲಿ ಕೆಲಸಕ್ಕಿದ್ದರು. ಅವರು…
ಹೊಸ ವರುಷ: ಈ ರಾತ್ರಿಗೆ 1 ಲಕ್ಷ ರೂ ಬಾಡಿಗೆ!
ಕುಮಟಾ: ಹೊಸ ವರ್ಷ ಆಚರಣೆಗೆ ಎಲ್ಲಡೆ ಸಿದ್ಧತೆ ಜೋರಾಗಿದ್ದು, ಗೋಕರ್ಣದ `ಗ್ರೀನ್ ಲ್ಯಾಂಡ್’ ಹೋಂ ಸ್ಟೇ’ಗೆ ಖಾಸಗಿ ವೆಬ್‌ಸೈಟ್ 1.9 ಲಕ್ಷ ರೂ ಬಾಡಿಗೆ ನಿಗದಿ ಪಡಿಸಿದೆ. ಇದನ್ನು ನೋಡಿ ಆ ಹೋಂ ಸ್ಟೇ ಮಾಲಕರೇ ಕಂಗಾಲಾಗಿದ್ದಾರೆ! ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿರುವ…
ದುಡಿದು ತಿನ್ನುವ ವಯಸ್ಸಿನಲ್ಲಿ ಜೈಲು ಸೇರಿದ: ಅವನೇ ಕೊಲೆಗಾರ!
ಸಿದ್ದಾಪುರ: ಪುಡಿಗಾಸಿನ ಆಸೆಗೆ ಪಿಗ್ಮಿ ನಡೆಸಿ ಬದುಕು ಕಟ್ಟಿಕೊಂಡಿದ್ದ ವೃದ್ಧೆಯನ್ನು ಕೊಂದ ಅಭಿಜಿತ್ ಮಡಿವಾಳ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳ ಮಹಜರು ನಡೆಸುವ ವೇಳೆ ಸ್ಥಳಕ್ಕೆ ಬಂದ ಜನ ಅಭಿಜಿತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸೊರಬ ರಸ್ತೆಯ ಡಿ ಸಿಲ್ವಾ ವೈನ್ಪ…
ಕಾನೂನುಬಾಹಿರ ಕೆಲಸಕ್ಕೆ ಕೈ ಹಾಕಿದ ಅರಣ್ಯ ಇಲಾಖೆ: ಆಕ್ಷೇಪ!
ಸಿದ್ದಾಪುರ: `ಅಸ್ತಿತ್ವವೇ ಇಲ್ಲದ ಸಮಿತಿಯೂ ಅರಣ್ಯವಾಸಿಗಳ ಬಳಿ ಮೂರು ತಲೆಮಾರಿನ ದಾಖಲೆ ಒದಗಿಸುವಂತೆ ಒತ್ತಾಯಿಸುತ್ತಿದೆ. ಇದು ಕಾನೂನುಬಾಹಿರ’ ಎಂದು ಅರಣ್ಯವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಶಿರಸಿ ಉಪವಿಭಾಗ ಅರಣ್ಯ…
ಅಂಗನವಾಡಿ ಮೇಲ್ವಿಚಾರಕಿಗೆ ಪದೋನ್ನತಿ: ಸನ್ಮಾನ
ಯಲ್ಲಾಪುರ: ಅಂಗನವಾಡಿ ಮೇಲ್ವಿಚಾರಕಿ ಹುದ್ದೆಯಿಂದ ಸುಪ್ರರ್ವೈಸರ್ ಆಗಿ ಪದೋನ್ನತಿ ಪಡೆದು ಗದಗಕ್ಕೆ ವರ್ಗವಾದ ಪಾತಿಮಾ ಎಚ್ ಚುಳಕಿ ಅವರನ್ನು ಕಚೇರಿ ಸಿಬ್ಬಂದಿ ಸನ್ಮಾನಿಸಿದರು. 2023ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದ ಪಾತಿಮಾ ಅವರು ಸುಮಾರು ಐದುವರೆ ವರ್ಷಗಳ ಕಾಲ…







