6
ನಗರಸಭೆ ಅವಾಂತರ | ಮೊದಲು ರಸ್ತೆ… ನಂತರ ನೀರಿನ ಗುಂಡಿ!

ಶಿರಸಿ: ಸಾರ್ವಜನಿಕರ ಒತ್ತಾಯದ ಮೇರೆಗೆ ಕಳೆದ ವರ್ಷ ಹೊಸಪೇಟೆಯಿಂದ ಎಪಿಎಂಸಿ ಮಹಾದ್ವಾರದವರೆಗೆ ಹೊಸದಾಗಿ ರಸ್ತೆ ನಿರ್ಮಿಸಲಾಗಿದೆ. ಆದರೆ, ಇದೀಗ ಅದೇ ರಸ್ತೆಯನ್ನು ಅಗೆದು ನೀರಿನ ಪೈಪ್ ಅಳವಡಿಸಲಾಗುತ್ತಿದೆ! ಎಪಿಎಂಸಿ ಸೇರಿದಂತೆ ಟಿಎಸ್‌ಎಸ್, ಕೆಡಿಸಿಸಿ ಬ್ಯಾಂಕ್, ವಿಜಯ ಬ್ಯಾಂಕ್, ಟಿಆರ್‌ಸಿ ಬ್ಯಾಂಕ್, ಅಡಿಕೆ…

ರೈಲು ಸೇತುವೆ ತಳಗೆ ಜೂಜಾಟ: ಪೊಲೀಸರಿಂದ ತಡೆ!

ಕುಮಟಾ: ಹೊಸ ಹರವಟ್ಟಾ ರೈಲ್ವೆ ಸೇತುವೆ ಬಳಿ ನಡೆಯುತ್ತಿದ್ದ ಮಟ್ಕಾ ಆಟಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ. ಕುಮಟಾ ಕುಡ್ತಗಿಬೈಲ್’ನ ಕೂಲಿಯಾಳು ನಾಗರಾಜ ನಾಯ್ಕ ಇಲ್ಲಿ ಮಟ್ಕಾ ಆಡಿಸುತ್ತಿದ್ದರು. ಹೋಗಿ-ಬರುವ ಜನರನ್ನು ಮಾತನಾಡಿಸಿ ಜೂಜಾಟಕ್ಕಾಗಿ ಅವರು ಹಣ ಸಂಗ್ರಹಿಸುತ್ತಿದ್ದರು. ಇದನ್ನು ಅರಿತ ಪೊಲೀಸ್…

ಓಂ ಶಾಂತಿ | ಕಾರಿಗೆ ಗುದ್ದಿದ ಬಸ್ಸು: ಹಾರ್ಡವೇರ್ ಅಂಗಡಿ ಮಾಲಕ ಇನ್ನಿಲ್ಲ!

ಶಿರಸಿ: ಸೊರಬ ಬನವಾಸಿ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಹಾರ್ಡವೇರ್ ಅಂಗಡಿ ಮಾಲಕ ಓಂ ಸಿಂಗ್ ಸಾವನಪ್ಪಿದ್ದಾರೆ. ಬನವಾಸಿ ರಸ್ತೆಯ ಕಪ್ಪಗೇರಿ ಬಳಿಯ ದೇವಾಲಯ ತಿರುವಿನಲ್ಲಿ ಭಾನುವಾರ ಬೆಳಗ್ಗೆ 7.30ಕ್ಕೆ ಈ ಅಪಘಾತ ನಡೆದಿದ್ದು, ಕಾರಿನಲ್ಲಿ ಸಿಲುಕಿದ್ದ ಓಂ ಸಿಂಗ್ ಅವರನ್ನು ಬದುಕಿಸಲು…

ಕಿರಾಣಿ ಅಂಗಡಿಯಲ್ಲಿ ಸರಾಯಿ ಮಾರಾಟ

ಜೊಯಿಡಾ: ಕಿರಾಣಿ ಅಂಗಡಿಯಲ್ಲಿ ನಡೆಯುತ್ತಿದ್ದ ಅಕ್ರಮ ಸರಾಯಿ ಮಾರಾಟವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಿರಾಣಿ ಅಂಗಡಿ ಮುಂದಿನ ಕಟ್ಟೆ ಮೇಲೆ ಮದ್ಯ ಸೇವಿಸುತ್ತಿರುವಾಗಲೇ ದಾಳಿ ನಡೆಸಿ ಪೊಲೀಸರು ಅಂಗಡಿ ಮಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜೊಯಿಡಾ ಜಗಲಪೇಟೆಯ ನಾರಾಯಣ ಗಾವಡೆ ಫಾರೆಸ್ಟ್…

ಗೋವಾ ಗಡಿಯಲ್ಲಿ ಕಾಡು ಹಂದಿ ಕಾಟ!

ಕಾರವಾರ: ಗೋವಾ – ಕಾರವಾರ ಗಡಿಯಲ್ಲಿ ಕಾಡು ಹಂದಿ ಕಾಟ ಜೋರಾಗಿದೆ. ಮೊನ್ನೆ ರಾತ್ರಿ ಬೈಕಿಗೆ ಹಂದಿ ಗುದ್ದಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ! ಹೊಟೇಲಿನಲ್ಲಿ ಅಡುಗೆ ಕೆಲಸ ಮಾಡುವ ತರ‍್ಲೆಭಾಗದ ಜನಾರ್ಧನ ಠಾಕೇಕರ್ ಅವರು ಡಿ 27ರಂದು ಗೋವಾಗೆ ಹೋಗಿದ್ದರು. ರಾತ್ರಿ 9.30ಕ್ಕೆ…

ಅರೆಬರೆ ಆಸ್ಪತ್ರೆ | ಸತ್ಯ ಹೊರಬರದಿದ್ದರೆ ಉಪವಾಸ: ಹೈಟೆಕ್ ಆಸ್ಪತ್ರೆ ಬಗ್ಗೆ ಅನಂತಣ್ಣನ ಅನುಮಾನ!

ಶಿರಸಿ: ಸರ್ಕಾರಿ ಆಸ್ಪತ್ರೆ ಕಾಮಗಾರಿ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅನುಮಾನ ವ್ಯಕ್ತಪಡಿಸಿದ್ದಾರೆ. ಶಿರಸಿಯ ಹೈಟೆಕ್ ಆಸ್ಪತ್ರೆಯ ಒಳಹೋರಣಗಳ ಬಗ್ಗೆ ಒಂದು ವಾರದಲ್ಲಿ ಜನರ ಮುಂದಿಡದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ. `ಕಳೆದ ಒಂದು ವರ್ಷದಿಂದ ಸರ್ಕಾರಿ ಆಸ್ಪತ್ರೆ…

ಅನುಮತಿ ಕೊಟ್ಟಿದ್ದು ಅವರೇ.. ತೆರವು ಮಾಡಿದ್ದು ಅವರೇ: ಮೀನುಗಾರನ ಮೇಲೆ ಅಧಿಕಾರಿಗಳ ದಬ್ಬಾಳಿಕೆ!

ಭಟ್ಕಳ: ಮುರುಡೇಶ್ವರ ಕಡಲತೀರದಲ್ಲಿ ಬೋಟು ನಿಲುಗಡೆಗೆ ಸರ್ಕಾರ ಅನುಮತಿ ನೀಡಿದ್ದು, ಇದೀಗ ಅದೇ ಸರ್ಕಾರದ ಅಧಿಕಾರಿಗಳು ನಿಲುವು ಬದಲಿಸಿ ಅಲ್ಲಿದ್ದವರನ್ನು ಒಕ್ಕಲೆಬ್ಬಿಸಿದ್ದಾರೆ! ಡಿ 12ರಂದು ವೆಂಕಟೇಶ ಹರಿಕಂತ್ರ ಅವರಿಗೆ ಪ್ರವಾಸೋದ್ಯಮ ಇಲಾಖೆ ಕಡಲತೀರದಲ್ಲಿ ಬೋಟುಗಳ ನಿಲುಗಡೆಗೆ ಸ್ಥಳಾವಕಾಶ ನೀಡಿದೆ. ಅಹಿತಕರ ಘಟನೆ…

ಅಕ್ರಮ ಸಾಗಾಟ: ನಾಟಾ ಜೊತೆ ಸಿಕ್ಕಿಬಿದ್ದ ಜಾಕೀರ!

ಶಿರಸಿ: ಲಗೇಜ್ ವಾಹನದಲ್ಲಿ ಸಾಗವಾನಿ ನಾಟಾ ಸಾಗಿಸುತ್ತಿದ್ದ ಜಾಕೀರ್ ಅಹ್ಮದ್ ಅರಣ್ಯ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದು, ಅಧಿಕಾರಿಗಳು ನಾಟಾಗಳ ಜೊತೆ ಆತನನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮ ನಾಟಾ ಸಾಗಾಟದ ವಾಹನವನ್ನು ಸಹ ಜಪ್ತು ಮಾಡಿದ್ದಾರೆ. ಶನಿವಾರ ರಾತ್ರಿ ಶಿರಸಿ ರಾಜೀವ ನಗರದ…

ತ್ರಿಬಲ್ ರೈಡ್ | ಬೈಕಿಗೆ ಗುದ್ದಿದ ಬಸ್ಸು: ಇಬ್ಬರ ಸಾವು-ಒಬ್ಬ ಗಂಭೀರ

ಯಲ್ಲಾಪುರ: ಬೈಕಿಗೆ ಬಸ್ಸು ಗುದ್ದಿದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನಪ್ಪಿದ್ದು, ಒಬ್ಬರ ಕೈ-ಕಾಲುಗಳಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ಹೆಲ್ಮೆಟ್ ಸಹ ಧರಿಸದೇ ಬೈಕಿನಲ್ಲಿ ಮೂವರು ಸಂಚರಿಸಿರುವುದು ಹಾಗೂ ಬಸ್ಸು ಚಾಲಕನ ದುಡುಕುತನ ಈ ಅಪಘಾತಕ್ಕೆ ಕಾರಣ. ಡಿ 28ರ ರಾತ್ರಿ 9.30ಕ್ಕೆ…

ಗಂಜಿ ಪಾತ್ರೆಗೆ ಬಿದ್ದ ಕಂದಮ್ಮ ಸಾವು!

ಮುಂಡಗೋಡ: ನಾಯಿಗಳ ಆಹಾರಕ್ಕಾಗಿ ಬೇಯಿಸುತ್ತಿದ್ದ ಗಂಜಿ ಬೋಗಣಿಗೆ ಬಿದ್ದು 2 ವರ್ಷದ ಮಗು ಸಾವನಪ್ಪಿದೆ. ಮುಂಡಗೋಡದ ಚಳಗೇರಿಯಲ್ಲಿ ಬೀರು ಲಂಬೋರ ಅವರು ಸಾಕಿದ್ದ ನಾಯಿಗಳಿಗೆ ನೀಡಲು ಡಿ 26ರ ಸಂಜೆ ಗಂಜಿ ಬೇಯಿಸುತ್ತಿದ್ದರು. ಈ ವೇಳೆ ಅಲ್ಲಿ ಆಟವಾಡುತ್ತಿದ್ದ ಅವರ 2…

You cannot copy content of this page