6
ಶಾಲೆಗೆ ಹೋಗುವ ವಿದ್ಯಾರ್ಥಿಗೆ ಅನ್ಯಾಯ: ಬಸ್ಸಿನಿಂದ ಹೊರದಬ್ಬಿ ಹೊಡೆದ ನಿರ್ವಾಹಕ!

ಸಿದ್ದಾಪುರ: ಶಾಲೆಗೆ ಹೋಗಲು ಬಸ್ಸು ಹತ್ತಿದ್ದ ವಿದ್ಯಾರ್ಥಿ ಜೊತೆ ಕೆಎಸ್‌ಆರ್‌ಟಿಸಿ ನೌಕರರೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ. ಇದನ್ನು ಖಂಡಿಸಿ  ಜನ ಸಾರಿಗೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದರು. ಮುoಡಗೆತೆಗ್ಗಿoದ ಸಿದ್ದಾಪುರಕ್ಕೆ ಬಂದಿದ್ದ ಮದನ ಲೋಕೇಶ ನಾಯ್ಕ ಶಿರವಂತೆಯ ಶಾಲೆಗೆ ಹೋಗಬೇಕಿತ್ತು. ಅಲ್ಲಿ ಅವರು…

ಆಸೆ ಪಟ್ಟಿದ್ದು ಹಂದಿ ಮಾಂಸ.. ಸಿಕ್ಕಿದ್ದು ಜೈಲು ಊಟ!

ಶಿರಸಿ: ಮಾಂಸಕ್ಕಾಗಿ ಕಾಡು ಹಂದಿ ಕೊಂದ ಪರಶುರಾಮ ಕಾಳೇನವರ್ ಎಂಬಾತರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಶಿರಸಿ ಮುಗವಳ್ಳಿಯ ಪರಶುರಾಮ ಮಂಗಳವಾರ ರಾತ್ರಿ ಶಿಖಾರಿಗೆ ಹೋಗಿದ್ದ. ಅಲ್ಲಿ ಆತನಿಗೆ ಕಾಡು ಹಂದಿ ಸಿಕ್ಕಿದ್ದು, ಮಾಂಸದ ಆಸೆಗೆ ಆ ಪ್ರಾಣಿಯನ್ನು ಬೇಟೆ…

ಜಯ ಕರ್ನಾಟಕ | ಕಿರವತ್ತಿಯಲ್ಲಿ ಕನ್ನಡ ಕಲರವ

ಯಲ್ಲಾಪುರ: ಸಿದ್ದಿ ಸಮುದಾಯದ ಡಮಾಮಿ, ಗೌಳಿ ಜನರ ಸಾಂಪ್ರದಾಯಿಕ ನೃತ್ಯದೊಂದಿಗೆ ಕಿರವತ್ತಿಯಲ್ಲಿ ಬುಧವಾರ ಕನ್ನಡ ಗಾಯನಗಳು ಮೊಳಗಿದ್ದವು. ಮಹಿಳೆಯರ ಡೊಳ್ಳು ಕುಣತದ ವೇಳೆ ನೆರೆದಿದ್ದ ಗಣ್ಯರು ಕುಣಿದು ಕುಪ್ಪಳಿಸಿದರು. ಕನ್ನಡ ನಾಡು-ನುಡಿ ಸೇವೆಯಲ್ಲಿರುವ ಜಯ ಕರ್ನಾಟಕ ಸಂಘದವರು ಕಿರವತ್ತಿಯಲ್ಲಿ ಕನ್ನಡ ರಾಜ್ಯೋತ್ಸವದ…

ಪೊಲೀಸ್ ಕಾರಿಗೆ ಗುದ್ದಿದ ಬೈಕು: ಇಬ್ಬರಿಗೆ ಗಾಯ

ಅಂಕೋಲಾ: ಕಾರವಾರದಿಂದ ಅಂಕೋಲಾ ಕಡೆ ಬೈಕ್ ಓಡಿಸಿಕೊಂಡು ಬರುತ್ತಿದ್ದ ಅಜಿತ್ ನಾಯ್ಕ ಎಂಬಾತರು ಎದುರಿನಿಂದ ಬರುತ್ತಿದ್ದ ಪೊಲೀಸ್ ನಿರೀಕ್ಷಕ ಪ್ರಕಾಶ ಯಾತನೂರು ಎಂಬಾತರ ಕಾರಿಗೆ ಬೈಕ್ ಗುದ್ದಿದ್ದು, ಈ ಅಪಘಾತದಲ್ಲಿ ಬೈಕಿನ ಮೇಲೆ ಹೊರಟಿದ್ದ ಇಬ್ಬರು ಗಾಯಗೊಂಡಿದ್ದಾರೆ. ಅಜಿತ್ ಗಣಪತಿ ನಾಯ್ಕ…

ಸರ್ಕಾರಿ ಕಚೇರಿಗೆ ರೈತನೇ ಒಡೆಯ!

ಕುಮಟಾ: ಸರ್ಕಾರಿ ಯೋಜನೆಗೆ ಭೂಮಿ ಕೊಟ್ಟ ರೈತನಿಗೆ ಪರಿಹಾರ ನೀಡದ ಕಾರಣ ನ್ಯಾಯಾಲಯ ಕುಮಟಾ ಉಪವಿಭಾಗಾಧಿಕಾರಿ ಕಚೇರಿಯನ್ನು ಜಪ್ತು ಮಾಡಲು ಆದೇಶಿಸಿದೆ. ಈ ಹಿನ್ನಲೆ ಸಂತ್ರಸ್ತ ರೈತ ಉದಯ ಬಾಳಗಿ ನ್ಯಾಯಾಲಯದ ಸಿಬ್ಬಂದಿ ಜೊತೆ ತೆರಳಿ ಕಚೇರಿಯ ಕಂಪ್ಯುಟರ್ ಹಾಗೂ ಪೀಠೋಪಕರಣಗಳನ್ನು…

ಹೆಸರಿಗೆ ಮೆಕಾನಿಕ್.. ಆದರೆ, ಬೈಕ್ ಓಡಿಸಲು ಬರಲ್ಲ!

ಶಿರಸಿ: ನೆಂಟರ ಮನೆಗೆ ಬಂದಿದ್ದ ವಾಸುದೇವ ಶೇಟ್ ಅವರಿಗೆ ಬೈಕ್ ಗುದ್ದಿದ್ದರಿಂದ ಅವರ ತಲೆ ಹಾಗೂ ಮುಖಕ್ಕೆ ಭಾರೀ ಪ್ರಮಾಣದಲ್ಲಿ ಪೆಟ್ಟಾಗಿದೆ. ಅಕ್ಟೊಬರ್ 30ರಂದು ಸಿದ್ದಾಪುರದ ಹಿತ್ಲಗೋಡಿನ ವಾಸುದೇವ ನಾಗೇಶ ಶೇಟ್ (65) ಅವರು ತಮ್ಮ ಪತ್ನಿ ಜಯಾ ಜೊತೆ ಬನವಾಸಿ…

ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಮಾಯ!

ಹೊನ್ನಾವರ: ದುರ್ಗಾಕೇರಿಯಲ್ಲಿ ಮನೆ ಮುಂದಿನ ಗೇಟ್ ಬಳಿ ನಿಲ್ಲಿಸಿಟ್ಟ ಸ್ಕೂಟರ್ ಕಳ್ಳತನವಾಗಿದೆ. ದುರ್ಗಾಕೇರಿಯ ಗಣಪತಿ ಸತ್ಯನಾರಾಯಣ ಶೇಟ್ (30) ಅವರು ಟಿವಿಎಸ್ ಜುಪಿಟರ್ ಸ್ಕೂಟರ್ ಹೊಂದಿದ್ದರು. ಅಕ್ಟೊಬರ್ 27ರಂದು ರಾತ್ರಿ 9 ಗಂಟೆಗೆ ಅದನ್ನು ಮನೆ ಮುಂದಿನ ಗೇಟಿನ ಬಳಿ ನಿಲ್ಲಿಸಿದ್ದರು.…

ಸಹೋದರರ ನಡುವೆ ಹುಳಿ ಹಿಂಡಿದವರಾರು? ಆಸ್ತಿಗಾಗಿ ತಾಯಿಗೆ ಹೊಡೆದ ಮಗ!

ಮುಂಡಗೋಡು: ಇಂದೂರಿನ ಸಹೋದರರಾದ ಸಿದ್ದಯ್ಯ ಸುರಗಿಮಠ ಹಾಗೂ ಮೃತ್ಯುಂಜಯ ಸುರಗಿಮಠ ನಡುವೆ ಹೊಡೆದಾಟ ನಡೆದಿದೆ. ಈ ಹೊಡೆದಾಟ ತಪ್ಪಿಸಲು ಬಂದ ತಾಯಿ ಲಲಿತವ್ವ ಅವರನ್ನು ಮೃತ್ಯುಂಜಯ ಸುರಗಿಮಠ್ ನೆಲಕ್ಕೆ ಕೆಡವಿ ಹೊಡೆದಿದ್ದಾರೆ. ಇಂದೂರು ಗ್ರಾಮದಲ್ಲಿ ಈ ಸಹೋದರರ ಹೆಸರಿನಲ್ಲಿ 4 ಎಕರೆ…

ಭಾಗ್ವತರ ಸೊಪ್ಪಿನ ಬೆಟ್ಟದಲ್ಲಿ ಅಧಿಕಾರಿಗಳ ಹುಡುಕಾಟ

ಯಲ್ಲಾಪುರ: `ಭಾಗ್ವತರ ಸೊಪ್ಪಿನ ಬೆಟ್ಟಕ್ಕೂ ಬೇರೆಯವರ ಹೆಸರು!’ ಶಿರ್ಷಿಕೆ ಅಡಿ ಸೋಮವಾರ `S News Digital’ ವರದಿ ಪ್ರಸಾರ ಮಾಡಿದ್ದು, ಈ ಬೆನ್ನಲ್ಲೆ ವಿವಿಧ ಇಲಾಖೆ ಅಧಿಕಾರಿಗಳು ಗೂಗಲ್ ನಕ್ಷೆ ಹಿಡಿದು ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು. ಗೂಗಲ್ ನಕ್ಷೆಯಲ್ಲಿ ಸೊಪ್ಪಿನ…

ಕೂಲಿ ಕೆಲಸದವರ ಜೊತೆ ಜೂಜಾಡಿದ ಚಾಲಕ: ದುಡಿದ ಹಣವೆಲ್ಲ ಅನ್ಯರ ಪಾಲು!

ಮುಂಡಗೋಡು: ಸಾರ್ವಜನಿಕ ಪ್ರದೇಶದಲ್ಲಿ ಹಣ ಹರಡಿಕೊಂಡು ಜೂಜಾಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ಬಳಿಯಿದ್ದ 9730ರೂ ಹಣವನ್ನು ವಶಕ್ಕೆ ಪಡೆದಿದ್ದು, ಜೂಜುಕೋರರ ಬಳಿ ಕೋರ್ಟು-ಕಚೇರಿ ಅಲೆದಾಟಕ್ಕೂ ಕಾಸಿಲ್ಲ! ನವೆಂಬರ್ 4ರ ರಾತ್ರಿ 8 ಗಂಟೆಗೆ ಕರಿಗನಕೊಪ್ಪದ ಸೋಮು ತಿಮ್ಮಣ್ಣ ಲಮಾಣಿ…

You cannot copy content of this page