APMC – TSS ನಡುವೆ ತಿಕ್ಕಾಟ: ಕಳ್ಳಾಟ ಪತ್ತೆಗೆ ಪೊಲೀಸರ ಮಹಜರು!
ಅಡಿಕೆ ಅವ್ಯವಹಾರ ವಿಷಯದಲ್ಲಿ ರೈತರು ನೀಡಿದ ದೂರು ದಾಖಲಿಸಿಕೊಂಡಿರುವ ಪೊಲೀಸರು ಶನಿವಾರ ಯಲ್ಲಾಪುರ ಟಿಎಸ್‌ಎಸ್ ಅಂಗಳಕ್ಕೆ ಧಾವಿಸಿದ್ದು, ಸ್ಥಳ ಪರಿಶೀಲನೆ ನಡೆಸಿ ಮಹಜರು ನಡೆಸಿದರು. ರೈತರು ಹಾಗೂ ಟಿಎಸ್‌ಎಸ್ ನೌಕರರ ನಡುವೆ ಮಾತುಕಥೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದರು. ಶಿರಸಿ ಬಿಳೂರು ಮಂಜುನಾಥ…
ಆಗಸ್ಟ 11ಕ್ಕೆ 12ವರ್ಷ: ಅಂಕೋಲೆಯಲ್ಲಿ ಕೃಷಿಹಬ್ಬದ ಖುಷಿ!
‘ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ’ ಅಂಕೋಲಾ: `ಕರಾವಳಿ ಭಾಗದಲ್ಲಿ ಕೃಷಿ ನಾಶವಾದರೆ ಈ ಭಾಗದ ಸಂಸ್ಕೃತಿಯೇ ನಾಶವಾದ ಹಾಗೆ’ ಎನ್ನುವ ನ್ಯಾಯವಾದಿ ನಾಗರಾಜ ನಾಯಕ ಕಳೆದ 11 ವರ್ಷಗಳಿಂದ ಅಂಕೋಲಾದಲ್ಲಿ `ಕೃಷಿ ಹಬ್ಬ’ ನಡೆಸುತ್ತಿದ್ದಾರೆ. ಪ್ರಸ್ತುತ ಅಗಸ್ಟ…
ಮರಾಠಿಗರಿಗೆ ಸಿಗದ ಮೀಸಲಾತಿ: ಅಗಸ್ಟ 17ಕ್ಕೆ ವಿಶ್ಲೇಷಣಾ ಸಭೆ
ಶಿರಸಿ: ಅಗಸ್ಟ 17ರ ಶನಿವಾರ ಬೆಳಗ್ಗೆ 10 ಗಂಟೆಗೆ ಶಿರಸಿಯ ಅಂಬೇಡ್ಕರ ಭವನದಲ್ಲಿ ಕುಂಬ್ರಿ ಮರಾಠಿ ಸಮುದಾಯದವರ ಸಭೆ ನಡೆಯಲಿದೆ. `ಮೀಸಲಾತಿಗೆ ಎರಡು ದಶಕ’ ವಿಷಯ ಕುರಿತಾಗಿ ವಿಶ್ಲಷಣೆ ನಡೆಸಲು ಈ ಕಾರ್ಯಕ್ರಮ ಸಂಘಟಿಸಲಾಗಿದೆ. ಈ ಕಾರ್ಯಕ್ರಮದ ಪೂರ್ವಬಾವಿಯಾಗಿ ವೇದಿಕೆ ಅಧ್ಯಕ್ಷ…
ಪಟಾಕಿ ಸದ್ದಿಗೂ ಬೆದರದ ಕಾಡುಕೋಣ!
ಶಿರಸಿ: ಬಿಸಲಕೊಪ್ಪ ಬಳಿಯ ಮಲಳಗಾಂವ ಗ್ರಾಮದಲ್ಲಿ ಕಾಡುಕೋಣಗಳ ಹಾವಳಿ ಮಿತಿಮೀರಿದೆ. ಈ ಬಗ್ಗೆ ಊರಿನವರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಅರಣ್ಯ ಸಿಬ್ಬಂದಿ ಪಟಾಕಿ ಪ್ರಯೋಗ ನಡೆಸಿದರು. ಆದರೆ, ಕಾಡುಕೋಣಗಳು ಇದಕ್ಕೆ ಹೆದರಲಿಲ್ಲ. ಕೆಲ ತಿಂಗಳಿನಿoದ ರೈತರ ಜಮೀನುಗಳಿಗೆ ಕಾಡುಕೋಣ ನುಗ್ಗುತ್ತಿದೆ.…
ಕಾಣೆಯಾದ ಮೊಬೈಲ್ ಹುಡುಕಿದ ಪೊಲೀಸರು: ವಾರಸುದಾರರ ಮೊಗದಲ್ಲಿ ಸಂತಸ
ದಾoಡೇಲಿ: ಕಳ್ಳತನವಾಗಿದ್ದ 5 ಮೊಬೈಲ್ ಹುಡುಕುವಲ್ಲಿ ಪೊಲೀಸರು ಶ್ರಮಿಸಿದ್ದು, ಆ ಮೊಬೈಲ್’ನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಮೊಬೈಲ್ ಕಳ್ಳತನದ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಸಿಇಐಆರ್ ಪೋರ್ಟಲ್ ಮೂಲಕ ಮೊಬೈಲ್ ಪತ್ತೆ ಮಾಡಿದ್ದಾರೆ. ನಂತರ ಮೊಬೈಲ್ ಮಾಲಕರನ್ನು ಠಾಣೆಗೆ ಕರೆಯಿಸಿ, ಅವರಿಗೆ ಮೊಬೈಲ್ ಹಿಂತಿರುಗಿಸಿದ್ದಾರೆ.…
ಸೇತುವೆ ಕುಸಿದು ಲಾರಿ ಲಗಾಟಿ
ದಾಂಡೇಲಿ: ಗಾಂಧಿನಗರ ವಾರ್ಡ್ ನಂ 2ರಲ್ಲಿ ಕಿರು ಸೇತುವೆ ಕುಸಿದಿದ್ದು, ಟಿಪ್ಪರ್ ಹೂತು ಹೋಗಿದೆ. ಜಲ್ಲಿಕಲ್ಲುಗಳನ್ನು ತುಂಬಿಕೊoಡು ಬರುತ್ತಿದ್ದ ಟಿಪ್ಪರ್ ಕಿರು ಸೇತುವೆ ಮೇಲೆ ಪ್ರವೇಶಿಸಿದ ಕೂಡಲೇ ಸೇತುವೆ ನೆಲಕಚ್ಚಿದೆ. ಇಲ್ಲಿ ಯುಜಿಡಿ ಕಾಮಗಾರಿ ನಡೆಸಲು ರಸ್ತೆ ಬದಿ ಅಗೆದು ಪೈಪ್…
ಜೀವನದಲ್ಲಿ ಜಿಗುಪ್ಸೆ: ಸೀಮೆಎಣ್ಣೆ ಸುರಿದುಕೊಂಡು ಸಾವನಪ್ಪಿದ ಮಹಿಳೆ
ಕುಮಟಾ: ಹುಬ್ಬಣಗೇರಿ ಹಪಿಜಾ ಚಾವಡ್ಕರ್ (46) ಎಂಬಾತರು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವ ಮೂಲಕ ತಮ್ಮ ಜೀವನವನ್ನು ಕೊನೆಗಾಣಿಸಿಕೊಂಡಿದ್ದಾರೆ. ಹುಟ್ಟಿನಿoದಲೂ ಮಾನಸಿಕ ಅಸ್ವಸ್ಥರಾಗಿದ್ದ ಅವರಿಗೆ ಹೊನ್ನಾವರದ ಸೆಂಟ್ ಇಗ್ನೇಶಿಯನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಗುಣಮುಖರಾಗಿರಲಿಲ್ಲ. ಹೀಗಾಗಿ ಅಲ್ಲಿಂದ ಮನೆಗೆ ಮರಳಿದ್ದರು.…
ಅಣ್ಣ ತಮ್ಮನ ನಡುವೆ ಆಸ್ತಿ ಕಲಹ: ಅಡ್ಡ ಬಂದ ಅತ್ತಿಗೆಗೆ ಹಲ್ಲೆ ಮಾಡಿದವನಿಗೆ ಜೈಲು
ಕುಮಟಾ: ಆಸ್ತಿ ವಿಚಾರಕ್ಕೆ ಸಂಬಂಧಿಸಿ ಅತ್ತಿಗೆ ಮೇಲೆ ಹಲ್ಲೆ ನಡೆಸಿದ ಬಾಬು ಶಿವು ಹರಿಕಂತ್ರ ಎಂಬಾತನಿಗೆ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಜೊತೆ 9 ಸಾವಿರ ದಂಡ ವಿಧಿಸಿದೆ. ಅಘನಾಶಿನಿಯ ಬಿಳಿಹೊಯ್ಗುವಿನಲ್ಲಿ ಬಾಬು ಹರಿಕಂತ್ರ ಹಾಗೂ ಆತನ ಸಹೋದರ ಒಂದೇ…
ಕಾಳಿ ರೌದ್ರಾವತಾರ: ಸ್ನಾನಕ್ಕೆ ಹೋದವ ಶವವಾದ
ಕಾರವಾರ: ಹಣಕೋಣಜೋಗದ ಬಳಿ ಕಾಳಿ ನದಿಗೆ ಸ್ನಾನಕ್ಕೆ ಹೋದ ಶೈಲೇಶ ಅನಂತ ತಳ್ಳೇಕರ್ (35) ನದಿ ನೀರು ಕುಡಿದು ಸಾವನಪ್ಪಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಶೈಲೇಶ್ ತಳ್ಳೇಕರ್ ಅಗಸ್ಟ 8ರಂದು ಕೆಲಸ ಮುಗಿಸಿ ಮನೆಗೆ ಮರಳಿದ್ದರು. ಸಂಜೆ 4.30ರ ವೇಳೆಗೆ `ಕಾಳಿ…
ಪ್ರವೇಶ ಉಚಿತ: ಮನರಂಜನೆ ಖಚಿತ!
ಕಾರವಾರ: ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ 6 ಗಂಟೆಯಿಂದ ‘ಶಿವದೂತ ಪಂಜುರ್ಲಿ’ ಎಂಬ ಪೌರಾಣಿಕ ಕಥಾ ಹಿನ್ನೆಲೆಯ ಯಕ್ಷಗಾನ ಪ್ರದರ್ಶನ ನಡೆಯಲಿದೆ. ನಡೂರು ಮಂದಾರ್ತಿಯ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರು ಯಕ್ಷಗಾನ ಪ್ರದರ್ಶಿಸಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು…







