6
ತುಪ್ಪ ಬೇಕಾ ತುಪ್ಪ? ಇದು ಸಂಪೂರ್ಣ ಕಲಬೆರಕೆ ತುಪ್ಪ!

ವಿವಿಧ ನಗರ ಹಾಗೂ ಪಟ್ಟಣಗಳಿಗೆ ಸಂಚರಿಸಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದವರನ್ನು ಆಯಾ ಊರಿನ ಜನ ಪತ್ತೆ ಮಾಡಿದ್ದು, ಕುಮಟಾ ಪೊಲೀಸರು ಕಲಬೆರೆಕೆ ತುಪ್ಪ ಮಾರಾಟಕ್ಕೆ ಬಂದಿದ್ದ ವ್ಯಾಪಾರಿ ಚಳಿ ಬಿಡಿಸಿದ್ದಾರೆ. ಕುಮಟಾದ ಸಿದ್ದನಭಾವಿ ಬಳಿ ಬೆಲ್ಲದ ಡಬ್ಬಿ ಗಾತ್ರದಲ್ಲಿ ಶಂಕರಪ್ಪ…

ಅನುಮಾನಾಸ್ಪದ ಕಾರಿನಲ್ಲಿ ಸಿಕ್ಕಿದ್ದು ಕೋಟಿಗೂ ಅಧಿಕ ಹಣ!

ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ರಾಮನಗುಳಿ ಬಳಿ ಅನುಮಾನಾಸ್ಪದ ಕಾರು ನಿಂತಿದ್ದು, ಮಂಗಳವಾರ ರಾತ್ರಿ ಪೊಲೀಸರು ಆ ಕಾರನ್ನು ತಪಾಸಣೆಗೆ ಒಳಪಡಿಸಿದರು. ಆಗ ಕಾರಿನ ಒಳಗೆ 1.14 ಕೋಟಿ ರೂ ಹಣ ಸಿಕ್ಕಿದೆ! ಹೆದ್ದಾರಿ ಪಕ್ಕದ ಕಾಡಿನಲ್ಲಿ ಮಂಗಳವಾರ ಬೆಳಗ್ಗೆಯಿಂದಲೂ ಕಾರು ನಿಂತಿತ್ತು.…

ಸರಕು ವಾಹನದಲ್ಲಿ ಪ್ರಯಾಣಿಕರ ಸಾಗಾಟ: 10 ಜನರ ಸಾವಿಗೆ ಕಾರಣನಾದವರಿಗೆ ಜೈಲೂಟ!

ಸರಕು ಸಾಕಾಣಿಕಾ ವಾಹನದಲ್ಲಿ ಪ್ರಯಾಣಿಕರನ್ನು ಕರೆದೊಯ್ದು 10 ಜನರ ಸಾವಿಗೆ ಕಾರಣನಾದ ಲಾರಿ ಚಾಲಕ ಹಾಗೂ ಆ ಲಾರಿಯ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಕುಮಟಾ ಸಂತೆಗೆ ತೆರಳುತ್ತಿದ್ದ ಲಾರಿ ಜನವರಿ 22ರ ನಸುಕಿನಲ್ಲಿ ಯಲ್ಲಾಪುರದ ಅರಬೈಲ್ ಬಳಿ ಪಲ್ಟಿಯಾಗಿತ್ತು. ಪರಿಣಾಮ ಲಾರಿಯಲ್ಲಿದ್ದ…

ಕಾರವಾರ-ಅಂಕೋಲಾ: ದಾಖಲೆ ಪ್ರಕಾರ 300 ಕೋಟಿ ಅನುದಾನ!

ಕಳೆದ ಒಂದುವರೆ ವರ್ಷದಲ್ಲಿ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ 300 ಕೋಟಿ ರೂ ಸರ್ಕಾರಿ ಹಣ ವೆಚ್ಚವಾಗಿದೆ. ಸ್ವತಃ ಕ್ಷೇತ್ರದ ಶಾಸಕ ಸತೀಶ್ ಸೈಲ್ ಈ ಬಗ್ಗೆ ಹೇಳಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಎಷ್ಟು ಕಾಮಗಾರಿ ಪೂರ್ತಿಯಾಗಿದೆ? ಎಷ್ಟು ಕಾಮಗಾರಿ ಪ್ರಗತಿಯಲ್ಲಿದೆ? ಎಂಬುದರ ಬಗ್ಗೆ ವರದಿ…

ಕಾರವಾರ | ಪ್ರವೇಶ ದ್ವಾರಕ್ಕೆ ಅಂಬಿಗ ಚೌಡಯ್ಯರ ಹೆಸರು!

ಕಾರವಾರದ ಸೆಂಟ್ ಮೈಕಲ್ ಶಾಲೆ ಎದುರಿನ ವೃತ್ತಕ್ಕೆ `ನಿಜಶರಣ ಅಂಬಿಗರ ಚೌಡಯ್ಯ ವೃತ್ತ’ ಎಂದು ಹೆಸರಿಡಲು ಬಗ್ಗೆ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಪ್ರಯತ್ನ ನಡೆಸಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾದ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ಭೇಟಿ ಮಾಡಿದ…

ಆ ಊರಿಗೆ ಅಲ್ಲಿನ ಯುವಕರೇ ಪೊಲೀಸರು!

ಮನೆ ಕಳ್ಳತನ, ದರೋಡೆ, ಅಪಹರಣ ಪ್ರಕರಣಗಳ ಹೆಚ್ಚಳದಿಂದ ಆತಂಕಕ್ಕೆ ಒಳಗಾದ ಗಣೇಶಪುರದ ಯುವಕರು ರಾತ್ರಿ ಹೊತ್ತು ಬಡಿಗೆ ಹಿಡಿದು ಬೀದಿ ಬೀದಿ ಸುತ್ತುತ್ತಿದ್ದಾರೆ. ಈ ವಿಷಯ ಅರಿತ ಪೊಲೀಸರು `ಕಾಯುವ ಜವಾಬ್ದಾರಿ ನಮಗೆ ಕೊಡಿ’ ಎಂದು ಯುವಕರಿಗೆ ಭರವಸೆ ನೀಡಿ, ಆ…

ಮಾದಕ ವ್ಯಸನ ಮಾರಾಟ: ಮಹಿಳೆಯರಿಬ್ಬರ ಸೆರೆ!

ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಮಾದಕ ವಸ್ತು ಸಾಗಿಸುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಆ ಮಾದಕ ವಸ್ತುವನ್ನು ಖರೀದಿಸಲು ಬಂದಿದ್ದ ಇನ್ನೊಬ್ಬ ಮಹಿಳೆ ಸಹ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಹುಬ್ಬಳ್ಳಿಯ ಅಯೋಧ್ಯನಗರದ ನಾಸಿಮಾಬಾನು (45) ಎಂಬಾತರು 1.84 ಕೆಜಿ ಗಾಂಜಾವನ್ನು ಯಲ್ಲಾಪುರಕ್ಕೆ ತಂದಿದ್ದರು.…

ಮದುವೆ ಊಟಕ್ಕೆ ಗರ್ಭಿಣಿ ಹಸು ಮಾಂಸ!

ಮೇವಿಗೆ ತೆರಳಿದ್ದ ಹಸುವನ್ನು ತುಂಡರಿಸಿದ ದುಷ್ಟರು ಅದರ ಮಾಂಸವನ್ನು ಮದುವೆ ಕಾರ್ಯಕ್ರಮಕ್ಕೆ ಸರಬರಾಜು ಮಾಡಿದ್ದ ವಿಷಯ ಇದೀಗ ಹೊರ ಬಿದ್ದಿದೆ. ಗೋ ಕಳ್ಳತನ – ಗೋ ವಧೆ ಪ್ರಕರಣ ಭೇದಿಸಲು ಪೊಲೀಸರು ಆರು ತಂಡಗಳನ್ನು ರಚಿಸಿದ್ದು, ತನಿಖೆಯ ಆಳ-ಅಗಲ ಹೆಚ್ಚಾದಂತೆ ಇನ್ನಷ್ಟು…

ಉಳುವಿ ಜಾತ್ರೆಗೆ ಇನ್ನೂ ಕೆಲವೇ ದಿನ!

ರಾಜ್ಯದ ಪ್ರಸಿದ್ಧ ಜಾತ್ರೆಗಳ ಪಟ್ಟಿಯಲ್ಲಿರುವ ಶ್ರೀಕ್ಷೇತ್ರ ಉಳವಿ ಚೆನ್ನಬಸವೇಶ್ವರ ಜಾತ್ರೆಯ ದಿನಾಂಕ ನಿಗದಿಯಾಗಿದೆ. ಉಳವಿ ಜಾತ್ರೆಯು ಫೆಬ್ರುವರಿ 4ರಂದು ಶುರುವಾಗಲಿದ್ದು, ಫೆ 13ರ ಸಂಜೆ ರಥೋತ್ಸವ ನಡೆಯಲಿದೆ. ಈ ಬಾರಿ ಎತ್ತಿನಗಾಡಿಗೆ ಮಾತ್ರ ಅವಕಾಶ! ಚೆನ್ನ ಬಸವಣ್ಣನ ಸಭಾ ಭವನದಲ್ಲಿ ಜೊಯಿಡಾ…

ಮಕ್ಕಳ ಅಸಹಜ ಸಾವಿನ ಪ್ರಕರಣ ಹೆಚ್ಚಳ: ಮಕ್ಕಳ ಆಯೋಗ ಕಳವಳ

ಮಕ್ಕಳ ಸುರಕ್ಷತೆ ಕಾಪಾಡುವಲ್ಲಿ 21 ಇಲಾಖೆಗಳು ಕೆಲಸ ಮಾಡುತ್ತಿವೆ. ಅದಾಗಿಯೂ ರಾಜ್ಯದಲ್ಲಿ ಮಕ್ಕಳ ಅಸಹಜ ಸಾವಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಮೂರು ವರ್ಷದಲ್ಲಿ 5 ಸಾವಿರಕ್ಕೂ ಅಧಿಕ ಮಕ್ಕಳು ಅಸಹಜ ರೀತಿಯಲ್ಲಿ ಸಾವನಪ್ಪಿದ್ದಾರೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ…

You cannot copy content of this page