6
ಮತ್ಸ್ಯಕನ್ಯೆಯರಿಗೆ ಬಂಪರ್ ಸುದ್ದಿ: ಮೀನು ಮಾರಾಟಕ್ಕೆ ಮೂರು ಚಕ್ರದ ಗಾಡಿ!

ಕಾರವಾರ: ಮೀನು ಸೇವನೆ ಉತ್ತೇಜಿಸುವುದಕ್ಕಾಗಿ ಸರ್ಕಾರ `ಮತ್ಸ್ಯ ವಾಹಿನಿ’ ಯೋಜನೆ ಜಾರಿಗೆ ತಂದಿದ್ದು, ಮೀನು ಮಾರಾಟಗಾರರಿಗೆ ಈ ಯೋಜನೆ ಅಡಿ ಮೂರು ಚಕ್ರದ ವಾಹನಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ನೆರವು ನೀಡುತ್ತಿದೆ. ನವೆಂಬರ್ 11ರ ಒಳಗೆ ಅರ್ಜಿ ಸಲ್ಲಿಸಿ ಆಯ್ಕೆಯಾದವರಿಗೆ ಈ…

ಓದಿನಲ್ಲಿಯೂ ಮುಂದೆ.. ಓಟದಲ್ಲಿಯೂ ಮುಂದೆ.. ಮಾತಿನಲ್ಲಿಯೂ ಮುಂದೆ ಈ ವಿದ್ಯಾರ್ಥಿನಿ!

ಯಲ್ಲಾಪುರ: ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿಶ್ವದರ್ಶನ ಬಿ.ಇಡಿ ಕಾಲೇಜು ವಿದ್ಯಾರ್ಥಿನಿ ಹೇಮಾ ಗೌಡ ಗಮನಾರ್ಹ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್’ನ ಪ್ರಶಿಕ್ಷಣ ಭಾರತಿ ಈ ಅಕ್ಟೊಬರ್ 19ರಂದು ಭಾಷಣ ಸ್ಪರ್ಧೆ ಆಯೋಜಿಸಿತ್ತು. ವಿವಿಧ ಭಾಗಗಳಿಂದ ಸ್ಪರ್ಧಿಗಳು ಆಗಮಿಸಿದ್ದರು. ಅದರಲ್ಲಿ ಬಿ.ಇಡಿ…

ಈ ಚಿಹ್ನೆ ಇದ್ದರೆ ಅದುವೇ ಹಸಿರು ಪಟಾಕಿ: ದೀಪಾವಳಿ ಆಚರಣೆಗೂ ಇದೆ ಹಲವು ನಿಯಮ!

ಕಾರವಾರ: ವಾಯು ಮಾಲಿನ್ಯ, ಶಬ್ದ ಮಾಲಿನ್ಯ ತಡೆಗೆ ಹಸಿರು ಪಟಾಕಿ ಮಾತ್ರ ಬಳಸಿ ಎಂದು ಸರ್ಕಾರ ಸಾರುತ್ತಿದೆ. ಆದರೆ, ಹಸಿರು ಪಟಾಕಿ ಎಂದು ಗುರುತಿಸುವುದು ಹೇಗೆ? ಎಂಬುದೇ ಹಲವರಿಗೆ ತಿಳಿದಿಲ್ಲ. `ಪಟಾಕಿ ಪೆಟ್ಟಿಗೆ ಮೇಲಿನ ಕೆಲ ಚಿಹ್ನೆಗಳನ್ನು ನೋಡಿ ಹಸಿರು ಪಟಾಕಿಯ…

ನಿನ್ನೆ ಮೊನ್ನೆಯವರೆಗೂ ಕಾನ್ಸ್ಟೇಬಲ್.. ಇದೀಗ ಪಿಎಸ್‌ಐ!

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಬಳಿಯ ಹಾರುಮೇಸ್ಕೇರಿಯ ಗೀತಾ ಗೌಡ ನಿನ್ನೆ-ಮೊನ್ನೆಯವರೆಗೂ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದರು. ಆದರೆ, ಇದೀಗ ಅವರು ಪಿಎಸ್‌ಐ ಆಗಿದ್ದಾರೆ! ಮುಂಬಡ್ತಿ ಪಡೆದು ಈ ಹುದ್ದೆಗೆ ಬರಬೇಕು ಅಂದರೆ ಸೇವೆಗೆ ಸೇರಿ ಕನಿಷ್ಟ 25 ವರ್ಷ ಕಳೆಯಬೇಕಿತ್ತು. ಆದರೆ,…

ಆತ ವಿದ್ಯಾವಂತ.. ಪ್ರತಿಭಾವಂತ.. ವಿದೇಶಿ ಉದ್ಯೋಗಿ ಬೇರೆ.. ಆದರೆ, ಇದೀಗ ಅನಾಥ!

ಶಿರಸಿ: ಅಮೇರಿಕಾ, ಜರ್ಮನಿ ಸೇರಿ ವಿವಿಧ ದೇಶಗಳಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಶಿರಸಿ ಮೂಲದ ರಮೇಶ್ ಪಾಡುರಂಗ ಪಾವಸ್ವರ (65) ಇದೀಗ ಅನಾಥರಾಗಿದ್ದಾರೆ. ರಮೇಶ ಪಾವಸ್ವರ್ ಅವರ ಸಹೋದರಿ ಖ್ಯಾತ ವೈದ್ಯರು. ಅವರ ಮಗ ಸಹ ಮುಂಬೈಯಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ.…

ವಿಭಾಗ ಮಟ್ಟದ ವಾಲಿಬಾಲ್ ಸ್ಪರ್ಧೆ: ಶಿವಾಜಿ ಬಾಲಮಂದಿರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಾಧನೆ

ಕಾರವಾರ: ಸಿದ್ದಾಪುರದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಬಾಡದ ಶಿವಾಜಿ ಬಾಲಮಂದಿರ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳು ಗದಗ, ಧಾರವಾಡ ಹಾಗೂ ಚಿಕ್ಕೋಡಿ ತಂಡದವರ ಜೊತೆ ಸೆಣೆಸಾಟ ನಡೆಸಿದರು. ತೀವೃ ಪೈಪೋಟಿ ನೀಡಿ ಕೊನೆಗೆ ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡರು.…

ದಸರಾ ಸಮ್ಮೇಳನದಲ್ಲಿ ಹೋರಾಟಗಾರನಿಗೆ ಸನ್ಮಾನ

ಶಿರಸಿ: ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಡುತ್ತಿರುವ ರವೀಂದ್ರ ನಾಯ್ಕ ಅವರಿಗೆ ರಂಬಾಪುರಿ ವೀರಸೋಮೇಶ್ವರ ಸ್ವಾಮೀಜಿ ಸನ್ಮಾನಿಸಿದ್ದಾರೆ. ಗದಗ ಜಿಲ್ಲೆಯ ರೋಣಾ ತಾಲೂಕಿನ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಅಬ್ಬಿಗೇರಿಯಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ನಡೆಯುತ್ತಿದೆ. ಈ ವೇದಿಕೆಯಲ್ಲಿ ರವೀಂದ್ರ ನಾಯ್ಕ…

ಅರ್ಹತೆಗೆ ತಕ್ಕ ಉದ್ಯೋಗ: ಕನಸಿನ ಕೆಲಸ ಹುಡುಕಲು ಇಲ್ಲಿದೆ ನೂರು ಅವಕಾಶ!

ಯಲ್ಲಾಪುರ: ಕ್ರಿಯೇಟಿವ್ ಕಂಪ್ಯೂಟರ್ ಇನ್ಸಿಟ್ಯೂಟ್ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಅಕ್ಟೊಬರ್ 15ರಂದು ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮೇಳ ನಡೆಯಲಿದೆ. ಶಾಸಕ ಶಿವರಾಮ ಹೆಬ್ಬಾರ ಮಾರ್ಗದರ್ಶನದಲ್ಲಿ ಈ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಅವರು…

ಬಡವರ ಒತ್ತುವರಿ ತೆರವು ಇಲ್ಲ: ಅರಣ್ಯ ಅತಿಕ್ರಮಣದಾರರಿಗೆ ಸಚಿವರ ಅಭಯ

ದಾಂಡೇಲಿ: `2015ಕ್ಕೆ ಮೊದಲು ತಮ್ಮ ಪಟ್ಟಾ ಜಮೀನು ಸೇರಿ 3 ಎಕರೆಗಿಂತ ಕಡಿಮೆ ಅರಣ್ಯ ಒತ್ತುವರಿ ಮಾಡಿರುವ ಬಡ ಜನರನ್ನು ಒಕ್ಕಲೆಬ್ಬಿಸಬೇಡಿ’ ಎಂದು ಅರಣ್ಯ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು. `ಹೊಸದಾಗಿ ಒತ್ತುವರಿ ಮಾಡುವವರಿಗೆ ಅವಕಾಶ ನೀಡುವುದಿಲ್ಲ.…

ಭಿಕ್ಷುಕಿ ಚಿಕಿತ್ಸೆಗೆ ಹಣ ಬೇಡಿದ ಸಿಬ್ಬಂದಿ: ದೂರಿನ ನಂತರ ಚೆಕ್ ನೀಡಿದ ವೈದ್ಯಾಧಿಕಾರಿ!

ಅನಾರೋಗ್ಯಕ್ಕೆ ಒಳಗಾದ ಭಿಕ್ಷುಕಿಯಿಂದ ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ 540ರೂ ಹಣ ಪಡೆದಿದ್ದು, ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಕೆಯಾದ ನಂತರ ಈ ಹಣವನ್ನು ವೈದ್ಯರು ಚೆಕ್ ಮೂಲಕ ಮರಳಿಸಿದ್ದಾರೆ. ನಿಯಮಗಳ ಪ್ರಕಾರ ಭಿಕ್ಷುಕರು ಹಾಗೂ ಅನಾಥರಿಗೆ ಉಚಿತ ಚಿಕಿತ್ಸೆ ನೀಡಬೇಕಿದ್ದು, ಅದಾಗಿಯೂ…

You cannot copy content of this page