ಅಂಕೋಲಾ: ಪಿಗ್ಮಿ ಕಲೆಕ್ಟರ್ ದಯಾನಂದ ನಾಯಕ ಅವರ ಸ್ಕೂಟಿಗೆ ಬೈಕು ಗುದ್ದಿದೆ. ಪರಿಣಾಮ ಅವರು ಮೈ-ಕೈ ಗಾಯ ಮಾಡಿಕೊಂಡಿದ್ದಾರೆ.
ಅoಕೋಲಾದ ಸೆಂಟ್ ಮಿಲಾಗ್ರಿಸ್ ಬ್ಯಾಂಕಿನ ಬಳಿ ಈ ಅಪಘಾತ ನಡೆದಿದೆ. ಡಿ 5ರ ಸಂಜೆ ದಯಾನಂದ ನಾಯಕ ಅವರು ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಜೋರಾಗಿ ಬಂದ ಅಪರಿಚಿತ ಬೈಕ್ ಸವಾರ ತನ್ನ ಬೈಕ್ ಗುದ್ದಿ ಪರಾರಿಯಾಗಿದ್ದಾನೆ. ಗಾಯಗೊಂಡ ದಾಯಾನಂದ ನಾಯಕ ಅವರು ಆಂದ್ಲೆಯವರು. ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಬೈಕಿನಿಂದ ಬಿದ್ದ ತಾಯಿ
ಅಂಕೋಲಾ: ಅವರ್ಸಾದ ಹರೀಶ ಚಿಂಚನಕರ ಅವರು ತಾಯಿಯನ್ನು ಬೈಕ್ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದಾಗ ಅವರ ತಾಯಿ ಕವಿತಾ ಚಿಂಚನಕರ ಬಿದ್ದು ಗಾಯಗೊಂಡಿದ್ದಾರೆ.
ಅವರ್ಸಾ ಅರಗದ್ದೆಯಲ್ಲಿ ವಾಸವಾಗಿರುವ ಹರೀಶ್ ಅವರು ಎನ್‌ಸಿಸಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಅರಗದ್ದೆ ಕ್ರಾಸಿನಿಂದ ಅರಗದ್ದೆ ಕಡೆ ಡಿ 5ರಂದು ಬೈಕಿನಲ್ಲಿ ತಾಯಿ ಕೂರಿಸಿಕೊಂಡು ಹೊರಟ ಅವರು ಮನೆ ಬಳಿ ಇದ್ದ ಹಂಪನ್ನು ಹಾರಿಸಿದರು. ಪರಿಣಾಮ ಬೈಕಿನಲ್ಲಿ ಹಂದೆ ಕೂತಿದ್ದ ಅವರ ತಾಯಿ ಹಾರಿ ನೆಲಕ್ಕೆ ಬಿದ್ದರು. ಪರಿಣಾಮ ಕವಿತಾ ಅವರ ತಲೆಗೆ ಭಾರೀ ಪ್ರಮಾಣದ ಪೆಟ್ಟಾಗಿದೆ.




