6

ವಾಸದ ಮನೆ ಅಗ್ನಿಗೆ ಆಹುತಿ: ಸಂತ್ರಸ್ತರಿಗೆ ಅನಂತಮೂರ್ತಿ ನೆರವು

ಅಗ್ನಿ ಅವಘಡದಿಂದ ಮನೆ ಸುಟ್ಟುಕೊಂಡಿದ್ದ ಕುಟುಂಬದವರಿಗೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಆರ್ಥಿಕ ನೆರವು ನೀಡಿದ್ದಾರೆ.

ಶಿರಸಿ ತಾಲೂಕಿನ ಗೋಳಿಯ ಮಂಜಪ್ಪನಮುರ್ಕಿಯಲ್ಲಿ ಮಹಾದೇವಿ ಸುಧಾರಕ ಮಡಿವಾಳ ಅವರ ಮನೆ ಬುಧವಾರ ಸುಟ್ಟು ಕರಕಲಾಗಿತ್ತು. ಈ ವಿಷಯ ಅರಿತ ಅನಂತಮೂರ್ತಿ ಹೆಗಡೆ ಅಲ್ಲಿಗೆ ಭೇಟಿ ನೀಡಿ ನೆರವು ನೀಡಿದರು.

`ಮನೆಯಲ್ಲಿ ಇದ್ದ ಟಿವಿ, ಫ್ರಿಜ್ ಬಟ್ಟೆ ಎಲ್ಲವೂ ಸಂಪೂರ್ಣ ಸುಟ್ಟು ಹೋಗಿದೆ. ಮಹಾದೇವಿ ಮಡಿವಾಳ ಅವರ ಮಗ ನಾಗರಾಜ ಮದುವೆಗೆ ಕೂಡಿ ಇಟ್ಟಿದ್ದ 1.5 ಲಕ್ಷ ರೂಪಾಯಿ ಹಣ ಹಾಗೂ ಬಂಗಾರ ಕೂಡ ಸುಟ್ಟಿದೆ’ ಎಂದು ಮನೆಯವರು ಅಳಲು ತೋಡಿಕೊಂಡರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಜ್ಯೋತಿ ಸುಬ್ರಾಯ ಹೆಗಡೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page